ಕೇಂದ್ರ ಸರ್ಕಾರ, ಬಿಜೆಪಿ, ಮೋದಿ, ಟ್ರಂಪ್ ವಿರುದ್ಧ ಸಿದ್ದು ಕೆಂಡ

ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕೆಂಡಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇದ್ಯೋ ಅಥವಾ ಸತ್ತು ಹೋಗಿದ್ಯಾ..? ಮೋದಿಯವರಿಗೆ ಬಿಹಾರ ಪ್ರವಾಹದ ಬಗ್ಗೆ ಟ್ವೀಟ್ ಮಾಡ್ತಾರೆ. ರಾಜ್ಯದ ಜನ ಪ್ರವಾಹದಿಂದ ಕಂಗೆಟ್ಟು ಹೋಗಿದ್ದಾರೆ. ಆದ್ರೆ ಮೋದಿಯವರು ಬಿಹಾರದ ಪ್ರವಾಹದ ಬಗ್ಗೆ ಟ್ವೀಟ್ ಮಾಡ್ತಾರೆ. ದೇಶದ ಹಲವೆಡೆ ಪ್ರವಾಹದಿಂದ ಜನ ಕಂಗೆಟ್ಟು ಹೋಗಿದ್ದರೂ ವಿದೇಶಕ್ಕೆ ಹೋಗಿ ಪ್ರಚಾರ ತೆಗೆದುಕೊಳ್ಳೋ ಮೋದಿ ಈ ದೇಶದ ಪ್ರಧಾನಿಯಾಗಿರೋದು ನಮ್ಮ ದುರ್ದೈವ ಅಂತ ಹೇಳಿದ್ದಾರೆ.

ಅಂದು ಗಾಂಧೀಜಿ ಹೇಳಿದ್ದ ರಾಮನೇ ಬೇರೆ. ಇಂದು ಬಿಜೆಪಿಯವರು ಹೇಳುತ್ತಿರುವ ರಾಮನೇ ಬೇರೆ. ಶ್ರೀರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಸಮಾಜವನ್ನು ಒಡೆದು ಆಳುತ್ತಿದ್ದಾರೆ ಅಂದ್ರು. ಅಲ್ಲದೆ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯವರನ್ನು ಭಾರತದ ಪಿತಾಮಹ ಎಂದು ಕರೆಯುತ್ತಾರೆ. ಪ್ರಧಾನಿ ಮೋದಿ ನಿಜವಾದ ದೇಶಭಕ್ತರಾಗಿದ್ದರೆ ವೇದಿಕೆಯಲ್ಲೇ ಟ್ರಂಪ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಬೇಕಿತ್ತು. ಟ್ರಂಪ್ ಹೇಳಿಕೆಯಿಂದಲೇ ಆತ ಎಷ್ಟು ದೊಡ್ಡ ಅಜ್ಞಾನಿ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

Contact Us for Advertisement

Leave a Reply