ಪ್ರವಾಹಕ್ಕೆ ಸ್ಪಂದಿಸದ ಕೇಂದ್ರಕ್ಕೆ ಸಿದ್ದು ಗುದ್ದು..!

ರಾಜ್ಯದ ಪ್ರವಾಹಕ್ಕೆ ಸ್ಪಂದಿಸದ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೆಂಡಕಾರಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಬಿಹಾರ ಪ್ರವಾಹಕ್ಕೆ ಸ್ಪಂದಿಸುತ್ತಾರೆ. ಆದ್ರೆ ಕರ್ನಾಟಕದತ್ತ ಗಮನ ಕೊಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ನೆರೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಸಮರ್ಪಕವಾಗಿ ಪರಿಹಾರ ನೀಡುತ್ತಿಲ್ಲ ಎಂದು ನೆರೆ ಸಂತ್ರಸ್ತರು ದೂರು ನೀಡುತ್ತಿದ್ದಾರೆ. ಪ್ರವಾಹದಿಂದ ರೈತರ ಬೆಳೆ ಕೊಚ್ಚಿಹೋಗಿದ್ದು, ನರೇಗಾ ಯೋಜನೆ ಅಡಿ 3 ತಿಂಗಳಿನಿಂದ ಕೂಲಿ ನೀಡಿಲ್ಲ ಅಂದ್ರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಪ್ರವಾಹಕ್ಕೆ ಸ್ಪಂದಿಸ್ತಾರೆ. ಆದ್ರೆ ರಾಜ್ಯದತ್ತ ಗಮನ ಹರಿಸುತ್ತಲೇ ಇಲ್ಲ ಎಂದು ಕೆಂಡಕಾರಿದ್ರು. ಈ ಹಿಂದೆ ನಮ್ಮ ದೋಸ್ತಿ ಸರ್ಕಾರ ಸಾಲಮನ್ನಾ ಮಾಡಿತ್ತು. ಆದ್ರೆ ಯಡಿಯೂರಪ್ಪ ಸಾಲಮನ್ನಾ ಮಾಡಲು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ಆರೋಪಿಸಿದ್ರು.

Contact Us for Advertisement

Leave a Reply