ಹಿಜಾಬ್ ವಿವಾದ ಬಗ್ಗೆ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ.. ಏನಂದ್ರು ಗೊತ್ತಾ?

masthmagaa.com:

ಹಿಜಾಬ್​, ಸಮವಸ್ತ್ರ ಮತ್ತು ಕೇಸರಿ ಶಾಲು ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಪಿಯು ಮಟ್ಟದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಕುಂದಾಪುರದಲ್ಲಿ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ಗೇಟ್​ ಬಳಿಯೇ ತಡೆದಿದ್ದು ಸರಿಯಲ್ಲ. ಇದು ಮೂಲಭೂತ ಹಕ್ಕಿನ ವಿರುದ್ಧ. ಬಿಜೆಪಿಯವರು ಕೇಸರಿ ಶಾಲು ಹಾಕ್ಕೊಂಡು ವಿವಾದ ಮಾಡ್ತಿದ್ದಾರೆ. ಕೇಸರಿ ಶಾಲು ಹಾಕ್ತಿರೋದು ಈಗೀಗ. ಹಿಜಾಬ್ ಧರಿಸೋದು ಬಹಳ ವರ್ಷದಿಂದ ನಡ್ಕೊಂಡು ಬಂದಿದೆ. ಮುಸ್ಲಿಂ ಹೆಣ್ಣು ಮಕ್ಕಳನ್ನ ಶಿಕ್ಷಣದಿಂದ ವಂಚಿರನ್ನಾಗಿ ಮಾಡೋ ಉದ್ದೇಶ ಇದರ ಹಿಂದಿದೆ. ಅವನ್ಯಾರೋ ಶಾಸಕ ರಘುಪತಿ ಭಟ್​ ಮೀಟಿಂಗ್ ಮಾಡಿ ಸಮವಸ್ತ್ರ ಕಡ್ಡಾಯ ಮಾಡಿದ್ನಂತೆ. ಇವನ್ಯಾನವನು ಹೇಳೋಕೆ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಹೀಗೆ ಹೇಳಿರೋದು ಸರಿಯಲ್ಲ. ಕಾನೂನು ಮಾಡಿದ್ದೇ ಸಿದ್ದರಾಮಯ್ಯ ಕಾಲದಲ್ಲಿ, 2018ರಲ್ಲಿ.. ಸಮವಸ್ತ್ರವನ್ನ ನಿರ್ಧರಿಸೋ ಅಧಿಕಾರ ಆಯಾ ಶಿಕ್ಷಣ ಸಂಸ್ಥೆಗಳಿವೆ. ಸಿಎಂ ಆಗಿದ್ದವರು ಹೀಗೆ ಮಾತನಾಡೋಕೆ ನಾಚಿಕೆ ಆಗಬೇಕು. ಯಾವನೋ ರಘುಪತಿ ಭಟ್​ ಅಂತ ಕರೆದಿದ್ದಾರೆ. ಇದೆಲ್ಲಾ ಸರಿಯಲ್ಲ. ಒಂದು ಧರ್ಮದ ವೋಟಿಗಾಗಿ ಸಿದ್ದರಾಮಯ್ಯ ಹೀಗೆ ಮಾಡ್ತಿದ್ದಾರೆ. ರಾಜಕೀಯ ಕ್ಷೇತ್ರವನ್ನ ಹಾಳ್​ ಮಾಡಿ ಆಗಿದೆ. ಈಗ ಶಿಕ್ಷಣ ಕ್ಷೇತ್ರವನ್ನ ಹಾಳ್​ ಮಾಡ್ಬೇಡಿ. ಪ್ರಪಂಚದ 8 ದೇಶದಲ್ಲಿ ಹಿಜಾಬ್ ಬ್ಯಾನ್​ ಮಾಡಿದ್ದಾರೆ. ಆದ್ರೆ ಇದನ್ನ ಮಾತ್ರ ಯಾಕೆ ಸುದ್ದಿ ಮಾಡ್ತಿದ್ದಾರೆ. ಇದೆಲ್ಲಾ ದೇಶದ ಸಮಗ್ರತೆಯನ್ನ ಹಾಳು ಮಾಡೋ ಪ್ರಯತ್ನ ಥರ ಕಾಣ್ತಿದೆ ಅಂತ ಬಿ.ಸಿ. ನಾಗೇಶ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply