ತಂತಿ ಮೇಲೆ ನಡೆಯಬೇಡಿ, ಕೆಳಗಿಳಿಯಿರಿ: ಸಿದ್ದರಾಮಯ್ಯ

ಯಡಿಯೂರಪ್ಪನವರೇ, ತಂತಿ ಮೇಲೆ ನಡೆಯುವಂತಹ ಪರಿಸ್ಥಿತಿ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತದೆ. ರೆಕ್ಕೆಪುಕ್ಕ ಎಲ್ಲವನ್ನೂ ಕತ್ತರಿಸಿದ್ದಾರೆ. ಅಲ್ಲದೆ ಯಡಿಯೂರಪ್ಪ ಒಬ್ಬರು ಶಕ್ತಿಯೇ ಇಲ್ಲದ ಮುಖ್ಯಮಂತ್ರಿ. ಪ್ರವಾಹ, ನೆರೆ ಬಂದು 50 ದಿನ ಕಳೆದರೂ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡಿಸಿಲ್ಲ. ಜೊತೆಗೆ ಯಡಿಯೂರಪ್ಪ ತಮ್ಮ ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ರು. ಇನ್ನು ಪ್ರತ್ಯೇಕ ವಿಜಯನಗರ ಜಿಲ್ಲೆ ಬಗ್ಗೆ ಮಾತನಾಡಿ, ವಿಜಯನಗರ ಜಿಲ್ಲೆ ಮಾಡೋದು ಸರಿಯಲ್ಲ. ಬಳ್ಳಾರಿಗಿಂತ ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಅದನ್ನ ಬೇಕಾದ್ರೆ ವಿಭಜನೆ ಮಾಡಬಹುದು ಎಂದಿದ್ದಾರೆ.

Contact Us for Advertisement

Leave a Reply