masthmagaa.com:

ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಕೊರೋನಾ ಸೋಂಕು ಹರಡುತ್ತಾ ಅನ್ನೋದು ಇದುವರೆಗೆ ದೃಢಪಟ್ಟಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನೇ ಹೇಳ್ತಾ ಬರ್ತಿದೆ. ಆದ್ರೆ ಸಿಂಗಾಪುರ್​ನಲ್ಲಿ ಸೋಂಕಿತ ಮಹಿಳೆ ಜನ್ಮ ನೀಡಿದ ಮಗುವಿನಲ್ಲಿ ಕೊರೋನಾ ವಿರುದ್ಧ ಪ್ರತಿಕಾಯಗಳು (Antibodies) ಕಂಡುಬಂದಿವೆ. ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಶಕ್ತಿಯೇನೋ ರೂಪುಗೊಂಡಿದೆ. ಆದ್ರೆ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ರೂಪುಗೊಳ್ಳಬೇಕು ಅಂದ್ರೆ ಅವರಿಗೆ ಸೋಂಕು ತಗುಲಬೇಕು. ಹೀಗಾಗಿ ಸೋಂಕಿತ ಗರ್ಭಿಣಿಯಿಂದ ಮಗುವಿಗೂ ಕೊರೋನಾ ಸೋಂಕು ಹರಡುತ್ತಾ ಅನ್ನೋ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.

ಅಂದ್ಹಾಗೆ ಈ ಗರ್ಭಿಣಿಗೆ ಮಾರ್ಚ್​ ಟೈಮಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ವಾರಗಳ ಬಳಿಕ ಡಿಸ್ಚಾರ್ಜ್ ಆಗಿದ್ದರು. ಇದೀಗ ಅವರು ಜನ್ಮಕೊಟ್ಟ ಗಂಡು ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ. ‘ಗರ್ಭಾವಸ್ಥೆಯಲ್ಲೇ ಕೊರೋನಾ ವಿರುದ್ಧ ನನ್ನ ದೇಹದಲ್ಲಿದ್ದ ಪ್ರತಿಕಾಯಗಳನ್ನ ಮಗುವಿಗೂ ಟ್ರಾನ್ಸ್​ಫರ್​ ಮಾಡಿದ್ದೇನೆ ಅಂತ ವೈದ್ಯರು ಅನುಮಾನ ವ್ಯಕ್ತಡಿಸಿದ್ದಾರೆ’ ಅಂತ ಮಹಿಳೆ ಹೇಳಿದ್ದಾರೆ.

ಗರ್ಭಾವಸ್ಥೆ ಅಥವಾ ಡೆಲಿವರಿ ಸಮಯದಲ್ಲಿ ಗರ್ಭಿಣಿಯು ತನ್ನ ಭ್ರೂಣ ಅಥವಾ ಮಗುವಿಗೆ ಕೊರೋನಾ ಸೋಂಕು ವರ್ಗಾಯಿಸಬಹುದೇ ಅನ್ನೋದು ಇನ್ನೂ ಗೊತ್ತಾಗಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳ್ತಿದೆ. ಇಲ್ಲಿಯವರೆಗೂ ಗರ್ಭಕೋಶದ ಸುತ್ತಮುತ್ತಲಿನ ದ್ರವದ ಮಾದರಿಗಳಲ್ಲಿ ಸಕ್ರಿಯ ಕೊರೋನಾ ವೈರಸ್​ ಕಂಡುಬಂದಿಲ್ಲ. ತಾಯಿಯ ಎದೆ ಹಾಲಿನಲ್ಲೂ ವೈರಸ್ ಕಂಡುಬಂದಿಲ್ಲ ಅಂತ WHO ಹೇಳ್ತಿದೆ. ಆದ್ರೆ ಸಿಂಗಾಪುರ್​ನಲ್ಲಿ ನಡೆದ ಈ ಘಟನೆ ಎಲ್ಲಾ ವಾದಗಳನ್ನ ಉಲ್ಟಾ ಮಾಡಿದಂತೆ ಕಾಣ್ತಿದೆ.

-masthmagaa.com

Contact Us for Advertisement

Leave a Reply