ಕೋಟ್ಯಾಧಿಪತಿಯ ತಂಗಿ ಪಾಡು ನೋಡಿ…ಪಾಪ ಅನ್ಸುತ್ತೆ..

ಕೋಟ್ಯಾಧಿಪತಿ ಅಣ್ಣಂದಿರಿದ್ದರೂ ಸಹಾಯ ಪಡೆಯದೇ ಸ್ವಾಭಿಮಾನದ ಬದುಕು ಬಾಳುತ್ತಿದ್ದ ಮಹಿಳೆಯೊಬ್ಬರನ್ನು ಕಳ್ಳತನದ ಆರೋಪ ಹೊರಿಸಿ ಹೊಡೆದು ಹತ್ಯೆಗೈಯ್ಯಲಾಗಿದೆ. ದೆಹಲಿಯ ಮೆಹರೌಲಿಯಲ್ಲಿ ಈ ಘಟನೆ ನಡೆದಿದೆ. 44 ವರ್ಷದ ಮಹಿಳೆ ಮಂಜೂ ಗೋಯಲ್ ಪತಿಯನ್ನು ಕಳೆದುಕೊಂಡಿದ್ದರು. ಮಕ್ಕಳು ಅತ್ತೆಯ ಮನೆಯಲ್ಲಿ ವಾಸವಿದ್ದರು. ಈಕೆಯ ಅಣ್ಣಂದಿರು ಕೋಟ್ಯಾಧಿಪತಿಗಳಾಗಿದ್ದರೂ ಈಕೆ ಸ್ವಾಭಿಮಾನದಿಂದ ದೂರವೇ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಟ್ಟೆಪಾಡಿಗಾಗಿ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಶನಿವಾರ ಮಾಲೀಕರು ಕಳ್ಳತನದ ಆರೋಪ ಹೊರಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಆಕೆಯ ಅಣ್ಣಂದಿರನ್ನು ಕರೆಸಿ ಗಾಯಗೊಂಡಿದ್ದ ಆಕೆಯನ್ನು ಒಪ್ಪಿಸಿದ್ದಾರೆ. ಮಂಜೂ ಅಣ್ಣಂದಿರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರಾದ್ರೂ ಬದುಕುಳಿಯಲಿಲ್ಲ. ಘಟನೆ ಸಂಬಂಧ ಮಹಿಳೆಯ ಅಣ್ಣಂದಿರು ಮೆಹರೌಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Contact Us for Advertisement

Leave a Reply