ವಿಡಿಯೋದಲ್ಲಿರೋದು ನಾನು ಅಲ್ವೇ ಅಲ್ಲ: ರಮೇಶ್ ಜಾರಕಿಹೊಳಿ

masthmagaa.com:

ಬೆಂಗಳೂರು: ನಿನ್ನೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ನನ್ನ ಜೀವನದಲ್ಲಿ ಇಂಥಾ ಹೊಲಸು ಕೆಲ್ಸ ಮಾಡಿಲ್ಲ. ನಂಗೂ ಶಾಕ್ ಆಗ್ತಿದೆ. ಇದೊಂದು ಷಡ್ಯಂತ್ರ. ಇದನ್ನ ಸೃಷ್ಟಿ ಮಾಡಿದ್ದು. ಅದನ್ನ ನೀವು ಕೂಡ ನೋಡಬಹುದು. ನಾನ್ ನೋಡಿಲ್ಲ, ನೋಡೋದು ಇಲ್ಲ. ನನ್ನ ಹತ್ರ ಯಾರೂ ಬಂದಿಲ್ಲ. ಯುವತಿ ಯಾರು ಅಂತ ಗೊತ್ತಿಲ್ಲ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿ. ನಾನು ತಪ್ಪಿತಸ್ಥ ಅಂತ ಸಾಬೀತಾದ್ರೆ ಮಂತ್ರಿ ಸ್ಥಾನಕ್ಕೆ ಮಾತ್ರವಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತೀನಿ. ರಾಜಕೀಯ ನಿವೃತ್ತಿ ಪಡೀತೀನಿ. ಯುವತಿಗೆ ಅನ್ಯಾಯ ಮಾಡಿದ್ರೆ ಭೂಮಿ ಮೇಲೆ ಇರೋಕೆ ಲಾಯಕ್ ಅಲ್ಲ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬಳಿಕ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply