2ನೇ ಪಂದ್ಯದಲ್ಲೂ ಭಾರತಕ್ಕೆ ಸೋಲು.. ಸರಣಿ ಗೆದ್ದ ಫಿಂಚ್ ಪಡೆ

masthmagaa.com:

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲೂ ಭಾರತ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ 375 ರನ್​​ ಟಾರ್ಗೆಟ್ ಕೊಟ್ಟಿದ್ದ ಆಸೀಸ್ ಪಡೆ, ಇವತ್ತು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ 4 ವಿಕೆಟ್​​​ಗೆ 389 ರನ್ ಚಚ್ಚಿತು.. 390 ರನ್​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಕೊಹ್ಲಿ ಪಡೆಗೆ ಮಯಾಂಕ್ ಅಗರ್​​ವಾಲ್ ಮತ್ತು ಶಿಖರ್ ಧವನ್ ಉತ್ತಮ ಓಪನಿಂಗ್ ಕೊಡಲಿಲ್ಲ. ನಂತರ ಬಂದ ಕೊಹ್ಲಿ 89 ರನ್ ಮತ್ತು ಕೆ.ಎಲ್. ರಾಹುಲ್ 76 ರನ್ ಸಿಡಿಸಿದರಾದ್ರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಭಾರತ 50 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿ ಸೋಲಿಗೆ ಶರಣಾಯ್ತು. 3 ದಿನಗಳ ಏಕದಿನ ಸರಣಿ ಇದಾಗಿದ್ದು, ಈಗಾಗಲೇ ಸರಣಿ ಕಾಂಗರೂಗಳ ಕೈವಶವಾಗಿದೆ. 3ನೇ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ.

-masthmagaa.com

Contact Us for Advertisement

Leave a Reply