ವಿರಾಟ್ ಕೊಹ್ಲಿ ಮತ್ತೊಂದು ಶತಕ..! ಮತ್ತೊಂದು ದಾಖಲೆ..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ತಂಡದ ನಾಯಕನಾಗಿ ಆಡಿದ ಪಂದ್ಯಗಳಲ್ಲಿ 40 ಸೆಂಚುರಿ ಬಾರಿಸಿದ ಭಾರತದ ಏಕೈಕ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಟೆಸ್ಟ್‍ನಲ್ಲಿ ವಿರಾಟ್ ಕೊಹ್ಲಿ ಒಟ್ಟು 26 ಶತಕಗಳನ್ನು ಸಿಡಿಸಿದ್ದು, ಏಕದಿನ ಕ್ರಿಕೆಟ್‍ನಲ್ಲಿ 43 ಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್‍ನಲ್ಲಿ 26 ಶತಕಗಳ ಮೂಲಕ ಅಗ್ರಸ್ಥಾನದಲ್ಲಿರೋ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ವೆಸ್ಟ್‍ಇಂಡೀಸ್‍ನ ಮಾಜಿ ಆಟಗಾರ ಗ್ಯಾರಿ ಸೋಬರ್ಸ್ ದಾಖಲೆ ಪುಡಿ ಮಾಡಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಕನ್ನಡಿಗ ಮಯಾಂಕ್ ಅಗರ್ ವಾಲ್, 2ನೇ ಪಂದ್ಯದಲ್ಲೂ ಶತಕ ಸಿಡಿಸಿ ಗಮನ ಸೆಳೆದಿದ್ದರು.

Contact Us for Advertisement

Leave a Reply