ಚೀನಾ, ರಷ್ಯಾ ನೌಕಾಭ್ಯಾಸದಲ್ಲಿ ಅಮೆರಿಕದ ಮಿತ್ರ ರಾಷ್ಟ್ರ ದಕ್ಷಿಣ ಆಫ್ರಿಕಾ ಜೊತೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಚೀನಾ, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾ ಜಂಟಿ ನೌಕಾಭ್ಯಾಸ ನಡೆಸೋಕೆ ಮುಂದಾಗಿವೆ. ಮಂದಿನ ತಿಂಗಳು ನಡೆಯೋ ಈ ಸಮರಾಭ್ಯಾಸದಲ್ಲಿ ಹೊಸ ತಲೆಮಾರಿನ ಹೈಪರ್‌ಸಾನಿಕ್‌ ಕ್ರೂಸ್‌ ವೆಪನ್‌ಗಳೊಂದಿಗೆ ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ನೌಕಾಪಡೆಗಳು ಭಾಗಿಯಾಗಲಿವೆ. ರಷ್ಯಾದ ಈ ಹೈಪರ್‌ಸಾನಿಕ್‌ ಮಿಸೈಲ್‌, ಶಬ್ದದ ವೇಗಕ್ಕಿಂತ 9 ಪಟ್ಟು ಹೆಚ್ಚು ವೇಗವನ್ನ ಹೊಂದಿದೆ. ಜೊತೆಗೆ ಸಾವಿರ ಕಿಲೋ ಮೀಟರ್‌ಗೂ ಅಧಿಕ ರೇಂಜ್‌ ಹೊಂದಿದೆ ಅಂತ ರಷ್ಯಾ ಹೇಳಿದೆ. ಇನ್ನು ಈ ನೌಕಾಭ್ಯಾಸ ಫೆಬ್ರವರಿ 17ರಿಂದ 27ರವರೆಗೆ ದಕ್ಷಿಣ ಆಫ್ರಿಕಾದ ಡರ್ಬನ್‌ ಹಾಗೂ ರಿಚರ್ಡ್ಸ್‌ ಬೇನಲ್ಲಿ ನಡೆಯಲಿದೆ. 2019ರ ನಂತರ ಈ ಮೂರು ದೇಶಗಳು ತಮ್ಮ ಸಂಬಂಧವನ್ನ ಮತ್ತಷ್ಟು ಗಟ್ಟಿಗಳಿಸೋ ನಿಟ್ಟಿನಲ್ಲಿ ಈ ನೌಕಾಭ್ಯಾಸ ಆಯೋಜಿಸಿವೆ. ಅಂದಹಾಗೆ ಇತ್ತೀಚಿಗೆ ರಷ್ಯಾ ಹಾಗೂ ಚೀನಾಗಳು ಆಫ್ರಿಕಾ ದೇಶಗಳ ಜೊತೆಗೆ ಗಾಢ ಸಂಬಂಧವನ್ನ ಬೆಳೆಸ್ತಿದ್ದು, ಅಮೆರಿಕ ಹಾಗೂ ಯುರೋಪ್‌ ದೇಶಗಳ ಪ್ರಭಾವವನ್ನ ಅಲ್ಲಿ ದೂರ ಮಾಡ್ತಿವೆ. ಇಂತಹ ಹೊತ್ತಲ್ಲೇ ಅಮೆರಿಕದ ಫ್ರೆಂಡ್‌ ಅಂತ ಕರೆಸಿಕೊಂಡಿರೋ ಸೌತ್‌ ಆಫ್ರಿಕಾ ಈಗ ರಷ್ಯಾ ಚೀನಾ ಜೊತೆಗೆ ಸಮಾರಾಭ್ಯಾಸದಲ್ಲಿ ಭಾಗಿಯಾಗ್ತಿರೋದು ತುಂಬಾ ಮಹತ್ವ ಪಡೆದುಕೊಂಡಿದೆ. ಇದು ಈಗಾಗಲೇ ಆಫ್ರಿಕಾ ದೇಶಗಳ ಮೇಲೆ ಪುಟಿನ್‌ ಕಣ್ಣಿಟ್ಟಿದ್ದಾರೆ ಅನ್ನೋ ವಾದಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದ್ದು ಜಾಗತಿಕ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply