1 ಡೋಸ್​ ಸ್ಪುಟ್ನಿಕ್​​​ ಲಸಿಕೆಗೆ ಎಷ್ಟು ರೂಪಾಯಿ ಗೊತ್ತಾ?

masthmagaa.com:

ಈ ನಡುವೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಯಾವಾಗ ಮಾರುಕಟ್ಟೆಗೆ ಬರುತ್ತೆ ಅಂತ ಕಾಯ್ತಿರೋರಿಗೆ ನಿರಾಸೆಯಾಗಿದೆ. ಯಾಕಂದ್ರೆ ಒಂದು ಡೋಸ್ ಲಸಿಕೆಗೆ 995 ರೂಪಾಯಿ 40 ಪೈಸೆ ಆಗುತ್ತೆ ಅಂತ ರೆಡ್ಡಿ ಲ್ಯಾಬೋರೇಟರೀಸ್ ಮಾಹಿತಿ ನೀಡಿದೆ. ಭಾರತದಲ್ಲಿ ಲಸಿಕೆಯ ಉತ್ಪಾದನೆ ಮತ್ತು ವಿತರಣೆಯ ಜವಾಬ್ದಾರಿ ಹೊತ್ತಿರೋ ಈ ಸಂಸ್ಥೆ, ರಷ್ಯಾದಿಂದ ಆಮದು ಮಾಡಿಕೊಂಡಿರೋ ಲಸಿಕೆ ದರ ಜಿಎಸ್​ಟಿ ಎಲ್ಲಾ ಸೇರಿಸಿ 995 ರೂಪಾಯಿ ಆಗುತ್ತೆ. ಭಾರತದಲ್ಲೇ ಉತ್ಪಾದನೆ ಶುರು ಮಾಡಿದ್ಮೇಲೆ ರೇಟ್ ಕಡ್ಮೆಯಾಗುತ್ತೆ ಅಂತ ತಿಳಿಸಿದೆ. ಅಂದಹಾಗೆ ಇವತ್ತು ಹೈದ್ರಾಬಾದ್​​ನಲ್ಲಿ ಕಸ್ಟಂ ಫಾರ್ಮಾ ಸಂಸ್ಥೆಯ ಗ್ಲೋಬಲ್ ಹೆಡ್ ದೀಪಕ್ ಸ್ಪ್ರಾ ಅನ್ನೋರಿಗೆ ಮೊದಲ ಡೋಸ್ ಕೂಡ ಹಾಕಲಾಯ್ತು. ಈ ಲಸಿಕೆ 91.6 ಪರ್ಸೆಂಟ್ ಪರಿಣಾಮಕಾರಿ ಅಂತ ಈಗಾಗಲೇ ಸಂಸ್ಥೆ ಹೇಳಿಕೊಂಡಿದೆ. ಇನ್ನು ಇದರ ಸಿಂಗಲ್ ಡೋಸ್​​ ಲಸಿಕೆಯಾದ ಸ್ಪುಟ್ನಿಕ್ ವಿ ಲೈಟ್​ನ್ನೂ ಭಾರತದಲ್ಲಿ ಬಳಸೋ ಬಗ್ಗೆ ರೆಡ್ಡಿ ಲ್ಯಾಬೋರೇಟರೀಸ್​​ ಜೂನ್ ತಿಂಗಳಲ್ಲಿ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಿದೆ.

-masthmagaa.com

Contact Us for Advertisement

Leave a Reply