ಚೀನಾದ ಗೊಬ್ರಾನು ಗಲೀಜು, ನಮಗೆ ಬೇಡ ಎಂದ ಶ್ರೀಲಂಕಾ!

masthmagaa.com:

ಶ್ರೀಲಂಕಾ ಚೀನಾದ ಸಾವಯವ ಗೊಬ್ಬರವನ್ನ ಬ್ಯಾನ್ ಮಾಡಿದೆ. ಶ್ರಿಲಂಕ ಹೇಳಿಕೇಳಿ ಇಡೀ ದೇಶದಲ್ಲಿ ರಸಾಯನಿಕ ಗೊಬ್ಬರ ಬ್ಯಾನ್ ಮಾಡಿದೆ. ಹೀಗಾಗಿ ಅಲ್ಲಿ ಇಳುವರಿ ಕಮ್ಮಿಯಾಗಿ ಆಹಾರದ ಸಮಸ್ಯೆ ಶುರುವಾಗಿದೆ. ಇಂತಾ ಹೊತ್ತಲ್ಲಿ ಸಾವಯವ ಗೊಬ್ಬರ ತುಂಬಾ ಅರ್ಜೆಂಟಾಗಿ ಆ ದೇಶಕ್ಕೆ ಬೇಕು. ಆದ್ರೆ ಚೀನಾ ಕಳಸಿರೋ ಸಾವಯವ ಗೊಬ್ಬರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇದೆ ಅಂತ ಗೊತ್ತಾಗಿ ಅದನ್ನ ಈಗ ಶ್ರೀಲಂಕಾ ಬ್ಯಾನ್ ಮಾಡಿದೆ. ನೀವು ಬಾಯ್ಕಾಟ್ ಚೀನಾ ಅಂದ್ರೆ ಆ ಟೆಕ್ಸ್ಟ್ ಇರೋ ಟಿ ಶರ್ಟನ್ನ ತಾನೇ ಉತ್ಪತ್ತಿ ಮಾಡಿ ನಿಮಗೇ ಮಾರೋ ದೇಶ ಚೀನಾ. ಶ್ರೀಲಂಕಾದಲ್ಲೂ ಸಾವಯುವ ಗೊಬ್ರ ಅಂತ ಗಲೀಜೆಲ್ಲ ತಂದು ಡಂಪ್ ಮಾಡಣ ಅಂತ ಹೊರಟಿತ್ತು. ಈಗ ಶ್ರೀಲಂಕಾ ಸರ್ಕಾರ ಅದನ್ನ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಗಾಬರಿಯಾಗಿದೆ. ಈ ಗೊಬ್ಬರ ಹಾಕಿದ್ರೆ ಮುಗಿದೇಹೋಯ್ತು ಅಂತ ಅದನ್ನ ಬ್ಯಾನ್ ಮಾಡಿದ್ದಾರೆ ಈಗ.

-masthmagaa.com

Contact Us for Advertisement

Leave a Reply