ಎರಡು ಹೊತ್ತಿನ ಊಟಕ್ಕು ಪರದಾಟ, ಪೆಟ್ರೊಲ್‌ ಹಡಗಿಗು ಕಾಸಿಲ್ಲ: ಲಂಕಾ ಬಿಕ್ಕಟ್ಟು

masthmagaa.com:

ಪಕ್ಕದ ದ್ವೀಪ ರಾಷ್ಟ್ರ ಲಂಕಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡ್ತಿದೆ. ಎರಡು ಹೊತ್ತಿನ ಊಟಕ್ಕೆ ಕೂಡ ಪರದಾಡೋ ಸ್ಥಿತಿ ನಿರ್ಮಾಣ ಆಗಿದೆ. ಅಲ್ಲಿನ ಕೂಲಿ ಕಾರ್ಮಿಕರು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಕೆಲ್ಸ ಕಳ್ಕೊಂಡ ಜನ್ರು ಊಟಕ್ಕಾಗಿ ರೋಡಿಗೆ ಇಳಿದು ಸರ್ಕಾರದ ವಿರುದ್ದ ಪ್ರತಿಭಟಿಸ್ತಿದಾರೆ. ಕೊಲೊಂಬೊದ ಟ್ರಸ್ಟ್‌ ಒಂದು ಆಹಾರವನ್ನ ಪೂರೈಸುತ್ತಿದ್ದು, ನೂರಾರು ಜನ್ರು ಗಾಲೆ ನಗರದಲ್ಲಿ ಊಟಕ್ಕಾಗಿ ಕ್ಯೂ ನಿಂತಿರೋದು ವರದಿಯಾಗಿದೆ. ಇನ್ನೊಂದ್‌ ಕಡೆ ಪೆಟ್ರೋಲ್‌ ಪರಿಸ್ಥಿತಿಯು ಇದೇ ರೀತಿ ಆಗಿದ್ದು, ಪೆಟ್ರೋಲ್‌ ಪಂಪ್‌ಗಳ ಮುಂದೆ ಜನ್ರು ಕ್ಯಾನ್‌ಗಳನ್ನ ಹಿಡಿದು ಸಾಲು ಸಾಲಾಗಿ ನಿಲ್ತಿದ್ದಾರೆ. ಆದ್ರೆ ಲಂಕಾ ಸರ್ಕಾರ ತನ್ನ ನಾಗರಿಕರಿಗೆ ಈ ರೀತಿ ನಿಲ್ಬೇಡಿ. ಈಗಾಗಲೇ ನಮ್ಮ ಜಲಪ್ರದೇಶದಲ್ಲಿ ಇಂಧನದ ಹಡಗು ಬಂದು ನಿಂತಿದೆ ಆದ್ರೆ ಅದಕ್ಕೆ ಪಾವತಿಸೋಕೆ ನಮ್‌ ಹತ್ರ ವಿದೇಶಿ ವಿನಿಮಯ ಹಣ ಇಲ್ಲ. ದಯವಿಟ್ಟು ಅರ್ಥ ಮಾಡ್ಕೊಳ್ಳಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply