ರಾಜಕೀಯ ನಿವೃತ್ತಿಯ ಮಾತಾಡಿದ ಶ್ರೀರಾಮುಲು..! ಯಾಕೆ ಗೊತ್ತಾ..?

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪಡೆಯಲು ಸಾಧ್ಯವಾಗದೇ ಇದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಅಂತ ಶ್ರೀರಾಮುಲು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಬಳಿ ಮಾತನಾಡಿದ್ದೇನೆ. ಇನ್ನು ನನಗೆ 2 ತಿಂಗಳು ಕೊಡಿ. ನಾನು ಮೀಸಲಾತಿ ತಂದು ವಾಲ್ಮೀಕಿ ಸಮುದಾಯದ ಋಣ ತೀರಿಸುತ್ತೇನೆ. ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 7.5ರಷ್ಟು ಮೀಸಲಾತಿ ನೀಡಬೇಕು ಅಂತ ಹೇಳಿದ್ದಾರೆ.

ಈ ನಡುವೆ ರಾಜ್ಯದಲ್ಲಿ ರಾಮುಲು ಡಿಸಿಎಂ ಕೂಗು ಕೂಡ ಜೋರಾಗ್ತಿದೆ. ಬಿಜೆಪಿಗೆ ಬಹುಮತ ಬಂದಿದ್ದರೆ ರಾಮುಲು ಡಿಸಿಎಂ ಆಗ್ತಿದ್ರು ಅಂತ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸುಗೂರು ಹೇಳಿದ್ದಾರೆ. ರಾಮುಲು ಡಿಸಿಎಂ ಆಗಬೇಕಿತ್ತು. ಆದ್ರೆ ಬಿಜೆಪಿಗೆ ಬಹುಮತ ಬಂದಿಲ್ಲವಾದ್ದರಿಂದ ಡಿಸಿಎಂ ಆಗಲು ಸಾಧ್ಯವಾಗಲಿಲ್ಲ. ಉಪಚುನಾವಣೆ ನಡೆದ ಬಳಿಕ ನಮ್ಮ ಸಮುದಾಯಕ್ಕೆ ಒಳ್ಳೆಯದಾಗುತ್ತೆ ಎಂದು ಭವಿಷ್ಯ ನುಡಿದ್ರು.

ಇದಕ್ಕೂ ಮುನ್ನ ಮಾತನಾಡಿದ್ದ ಸೋಮಶೇಖರ ರೆಡ್ಡಿ ಕೂಡ ರಾಮುಲು ಡಿಸಿಎಂ ಆಗಬೇಕು ಎಂದಿದ್ದಾರೆ. ಚುನಾವಣೆ ವೇಳೆ ರಾಮುಲು ಅವರನ್ನು ಡಿಸಿಎಂ ಮಾಡೋದಾಗಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ಆದ್ರೆ ಚುನಾವಣೆ ಬಳಿಕ ಅವರಿಗೆ ಡಿಸಿಎಂ ಸ್ಥಾನ ನೀಡಲಿಲ್ಲ. ರಾಮುಲು ಅವರಿಗೆ ಡಿಸಿಎಂ ಸ್ಥಾನ ಮತ್ತು ಬಳ್ಳಾರಿ ಉಸ್ತುವಾರಿ ನೀಡಬೇಕು. ಆಗ ಬಳ್ಳಾರಿ ಅಭಿವೃದ್ಧಿಯಾಗಲಿದೆ ಅಂತ ಹೇಳಿದ್ದರು.

Contact Us for Advertisement

Leave a Reply