ಆಡಂಬರದ ದಸರಾಗೆ ಬಿಜೆಪಿ ಸಂಸದ ಕೆಂಡಾಮಂಡಲ

ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಗೈರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಡಂಬರದ ದಸರಾ ವಿರುದ್ಧ ಕೆಂಡಕಾರಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನ ಪರದಾಡುತ್ತಿದ್ದಾರೆ. 100 ವರ್ಷಗಳಲ್ಲೇ ದೊಡ್ಡ ಪ್ರಮಾಣದ ಪ್ರವಾಹ ಬಂದಿದೆ. ಉತ್ತರ ಕರ್ನಾಟಕದ 22 ಜಿಲ್ಲೆಗಳ ಜನ ಅತಂತ್ರರಾಗಿದ್ದಾರೆ. ಸಾವಿರಾರು ಎಕರೆ ಬೆಳೆನಾಶವಾಗಿದ್ದು, ಮನೆಗಳು ಕೊಚ್ಚಿಹೋಗಿವೆ. ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಕೇಂದ್ರದಿಂದಲೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗ ಆಡಂಬರದ ದಸರಾ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಉನ್ನತ ಸಮಿತಿ ಸಭೆಯಲ್ಲಿ ನಾನು ಈ ಬಗ್ಗೆ ಸ್ಪಷ್ಟವಾಗಿ ಸಿಎಂ ಬಳಿ ಹೇಳಿದ್ದೆ. ದಸರಾ ರದ್ದು ಮಾಡಿ ಎಂದು ಹೇಳಿಲ್ಲ. ಬದಲಾಗಿ ನಾಡಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸೋಣ ಎಂದು ಹೇಳಿದ್ದೆ. ಆದರೂ ಈಗ ಆಡಂಬರವಾಗಿ ದಸರಾ ಆಚರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply