ಸರ್ಕಾರಿ ಆಸ್ಪತ್ರೆಯಲ್ಲೇ ರಾಮುಲು ವಾಸ್ತವ್ಯ..! ಅಲ್ಲೇ ಪೂಜೆ..!

ಶ್ರೀರಾಮುಲು ಅವರ ಡಿಸಿಎಂ ಕನಸು ಈಡೇರಲಿಲ್ಲ.. ಬಯಸಿದ ಖಾತೆಯೂ ಸಿಗಲಿಲ್ಲ. ಬಳ್ಳಾರಿ ಉಸ್ತುವಾರಿಯೂ ಬೇರೆಯವರ ಪಾಲಾಯ್ತು.. ಈಗ ಆರೋಗ್ಯ ಸಚಿವರಾಗಿರುವ ಶ್ರೀರಾಮುಲು ಜನನಾಯಕ ಅಂತ ಪ್ರೂವ್ ಮಾಡಲು ಹೊರಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆಸ್ಪತ್ರೆಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಅರಿಯುತ್ತಿದ್ದಾರೆ. ಅದೇ ರೀತಿ ನಿನ್ನೆ ಮಡಿಕೇರಿಗೆ ತೆರಳಿದ್ದ ಶ್ರೀರಾಮುಲು, ಸರ್ಕಾರಿ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆ ಶೌಚಾಲಯದಲ್ಲೇ ಸ್ನಾನ ಮುಗಿಸಿ, ಆಸ್ಪತ್ರೆಯಲ್ಲೇ ಶಿವಪೂಜೆ ಮುಗಿಸಿ ಆಸ್ಪತ್ರೆ ಸಿಬ್ಬಂದಿ ಜೊತೆ ಸಭೆ ನಡೆಸಿದ್ರು. ನಂತರ ಆಸ್ಪತ್ರೆಯ ಒಳರೋಗಿಗಳ ಬಳಿ ತೆರಳಿ ಆರೋಗ್ಯ ವಿಚಾರಿಸಿದ್ರು. ನಂತರ ಮಾತನಾಡಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಇಲಾಖೆಯಡಿಯಲ್ಲಿ ಕೆಲಸ ಮಾಡಿದ್ರೆ ಒಳ್ಳೆಯದು. ಈ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಅಂದ್ರು.

Contact Us for Advertisement

Leave a Reply