ಕಲ್ಲಿದ್ದಲು ಕೊರತೆಯೇ ಇಲ್ಲವೆಂದ ಕೇಂದ್ರ ಸರ್ಕಾರ!

masthmagaa.com:

ದೇಶದಲ್ಲಿ ಕಲ್ಲಿದ್ದಲು ಕೊರತೆ, ವಿದ್ಯುತ್ ಸಮಸ್ಯೆ ಬಗ್ಗೆ ಸುದ್ದಿಯಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸರ್ಕಾರ, ಕೋಲ್​ ಇಂಡಿಯಾ ಬಳಿ ರಾಜ್ಯಗಳು ಬಾಕಿ ಉಳಿಸಿಕೊಂಡಿರೋ 20 ಸಾವಿರ ಕೋಟಿ ರೂಪಾಯಿ ಬಾಕಿ ಪಾವತಿಸಬೇಕು ಅಂತ ತಿಳಿಸಿದೆ. ಮತ್ತೊಂದ್ಕಡೆ ಕಲ್ಲಿದ್ದಲು ಸಚಿವಾಲಯ ಕಳೆದ ಜನವರಿಯಿಂದಲೂ ರಾಜ್ಯಗಳಿಗೆ ಪತ್ರ ಬರೆದು ಕಲ್ಲಿದ್ದಲು ಸ್ಟಾಕ್ ತೆಗೆದುಕೊಂಡು ಹೋಗುವಂತೆ ತಿಳಿಸಿತ್ತು. ಆದ್ರೆ ರಾಜ್ಯಗಳು ಸ್ಟಾಕ್ ತಗೊಂಡು ಹೋಗಿರಲಿಲ್ಲ. ಇದ್ರಿಂದ ಪಂಜಾಬ್, ದೆಹಲಿಯಲ್ಲಿ ಕಲ್ಲಿದ್ದಲು ಘಟಕಗಳೇ ಕ್ಲೋಸ್ ಆಗಿದ್ವು. ಈಗಿನ ಪರಿಸ್ಥಿತಿ ಇದು ಕೂಡ ಕಾರಣವಾಗಿರಬಹುದು ಅಂತ ಕೂಡ ಸರ್ಕಾರಿ ಮೂಲಗಳು ತಿಳಿಸಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಕಲ್ಲಿದ್ದಲು ಉತ್ಪಾದನೆಯನ್ನು ಪ್ರಸ್ತುತ 19 ಲಕ್ಷ ಟನ್​​ನಿಂದ 20 ಲಕ್ಷ ಟನ್​​​ಗೆ ಏರಿಸಲು ಟಾರ್ಗೆಟ್ ನೀಡಲಾಗಿತ್ತು. ಇವತ್ತು 20 ಲಕ್ಷ ಟನ್​​ ಕಲ್ಲಿದ್ದಲು ಪೂರೈಸಿದ್ದೀವಿ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆ ಎದುರಾಗೋದಿಲ್ಲ ಎಂದು ಭರವಸೆ ನೀಡ್ತೀನಿ ಅಂತ ಹೇಳಿದ್ದಾರೆ.

ಕಲ್ಲಿದ್ದಲು ಮತ್ತು ಗಣಿ ಇಲಾಖೆಯ ರಾಜ್ಯಖಾತೆ ಸಚಿವ ರಾವ್ ಸಾಹೇಬ್ ಧನ್ವೆ ಮಾತನಾಡಿ, ರಾಜ್ಯಗಳು ಕಲ್ಲಿದ್ದಲಿಗಾಗಿ ಪತ್ರ ಬರೆಯುತ್ತಿವೆ. ಮಹಾರಾಷ್ಟ್ರದಲ್ಲಿ ಪ್ರಮಾಣದ ಸ್ಟಾಕ್ ಇದ್ರೂ ಕೂಡ ನಮ್ಮತ್ರ ಸ್ಟಾಕ್ ಇಲ್ಲ ಅಂತ ಹೇಳ್ತಿದ್ದಾರೆ. ಆದ್ರೆ ಕೇಂದ್ರದ ಬಳಿ 4 ಕೋಟಿ ಟನ್ ಕಲ್ಲಿದ್ದಲು ಮತ್ತು 70 ಲಕ್ಷ ಟನ್ ವಿದ್ಯುತ್ ಉತ್ಪಾದಕರ ಬಳಿ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply