ಬಳ್ಳಾರಿ ಉತ್ಸವ: ಗಾಯಕಿ ಮಂಗ್ಲಿ ಕಾರ್‌ ಮೇಲೆ ಕಲ್ಲು ತೂರಾಟ

masthmagaa.com:

ಪ್ರಸಿದ್ದ ಗಾಯಕಿ ಮಂಗ್ಲಿ ಬಳ್ಳಾರಿ ಉತ್ಸವಕ್ಕೆ ಬಂದ ವೇಳೆ, ಕೆಲ ಕಿಡಿಗೇಡಿಗಳು ಅವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಾಡುಗಳನ್ನ ಹೇಳಿ ವಾಪಾಸ್‌ ತೆರಳುವಾಗ ಮಂಗ್ಲಿ ನೋಡಲು ಯುವಕರು ಮುಗಿಬಿದ್ದಿದ್ದಾರೆ. ಅಲ್ಲದೇ ವೇದಿಕೆ ಹಿಂಬಾಗದಲ್ಲಿದ್ದ ಮೇಕಪ್‌ ಟೆಂಟ್‌ಗೆ ನುಗ್ಗಿ ಅಲ್ಲಿಯೂ ಗಲಾಟೆ ಮಾಡಿದ್ದಾರೆ. ತಕ್ಷಣ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ. ಈ ವೇಳೆ ಮಂಗ್ಲಿ ಹೋಗ್ತಿದ್ದ ಕಾರಿನ ಮೇಲೆ ಪುಂಡರು ಕಲ್ಲೆಸೆದಿದ್ದಾರೆ.

-masthmagaa.com

Contact Us for Advertisement

Leave a Reply