ಮುಂದಿನ ಯುದ್ಧವನ್ನು ನಮ್ಮದೇ ವ್ಯವಸ್ಥೆ ಮೂಲಕ ಗೆಲ್ಲೋ ಭರವಸೆ ಇದೆ: ಸೇನಾ ಮುಖ್ಯಸ್ಥ

ನಾವು ಮುಂದಿನ ಯುದ್ಧವನ್ನು ಸ್ವದೇಶಿ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳ ಮೂಲಕವೇ ಗೆಲ್ಲೋಣ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಡಿಆರ್​ಡಿಒ(ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ)ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಭವಿಷ್ಯದಲ್ಲಿ ಯುದ್ಧದಲ್ಲಿ ಕೆಲಸಕ್ಕೆ ಬರುವಂತಹ ವ್ಯವಸ್ಥೆಯನ್ನು ಎದುರು ನೋಡುತ್ತಿದ್ದೇವೆ. ನಮಗೆ ಸೈಬರ್, ಸ್ಪೇಸ್​​, ಎಲೆಕ್ಟ್ರಾನಿಕ್​​, ರೋಬೋಟಿಕ್ ಟೆಕ್ನಾಲಜಿಗಳ ವಿಕಾಸದ ಬಗ್ಗೆ ಗಮನ ಹರಿಸಬೇಕು. ಡಿಆರ್​​ಡಿಒ ದೇಶದ ಎಲ್ಲಾ ಅಗತ್ಯಗಳನ್ನು ಪೂರೈಸುವ ಭರವಸೆ ನೀಡಿದೆ. ಹೀಗಾಗಿ ಮುಂದಿನ ಯುದ್ಧವನ್ನು ನಾವು ನಮ್ಮ ವ್ಯವಸ್ಥೆಯ ಮೂಲಕವೇ ಮಾಡಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ ಅಂದ್ರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​, ಯಾವುದೇ ಪ್ರಮುಖ ಕಾರ್ಯಾಚರಣೆಯಲ್ಲಿ ಹಣ ಮತ್ತು ಟೆಕ್ನಾಲಜಿ ತುಂಬಾ ಪ್ರಮುಖ ಪಾತ್ರ ವಹಿಸುತ್ತೆ. ಆದ್ರೆ ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತ ಯಾವಾಗಲೂ ರನ್ನರ್ ಅಪ್ ಆಗಿದೆ. ಅದಕ್ಕೆ ಯಾವುದೇ ಟ್ರೋಫಿ ಸಿಗಲ್ಲ ಎಂದಿದ್ದಾರೆ. ಭಾರತದ ವಾಯು, ಜಲ ಮತ್ತು ಭೂಸೇನೆ ಸೇರಿದಂತೆ ಮತ್ತಿತ್ತರ ಭದ್ರತಾ ಪಡೆಗಳಲ್ಲಿ ಆಧುನಿಕ ಟೆಕ್ನಾಲಜಿ ಅಭಿವೃದ್ಧಿಪಡಿಸೋ ಅಗತ್ಯತೆ ಇದೆ ಎಂದಿದ್ದಾರೆ.

Contact Us for Advertisement

Leave a Reply