ಭಾರತ್ ಮಾತಾ ಕೀ ಜೈ ವಿವಾದ: ಗುಂಪುಗಳ ನಡುವೆ ಮಾರಾಮಾರಿ

masthmagaa.com:

ಮಧ್ಯಪ್ರದೇಶದ ಅಗರ್​​ ಮಾವ್ಲಾ ಜಿಲ್ಲೆಯಲ್ಲಿ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗೋ ವಿಚಾರವಾಗಿ ಓರ್ವ ವಿದ್ಯಾರ್ಥಿ ಮತ್ತು ಶಿಕ್ಷಕನನ್ನು ಥಳಿಸಲಾಗಿದೆ. ಭರತ್ ಸಿಂಗ್ ಎಂಬಾತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಶಾಲೆಯೊಂದರಲ್ಲಿ ಪ್ರಾರ್ಥನೆಯಾದ ಬಳಿ ಎಲ್ಲರೂ ಭಾರತ್ ಮಾತಾಕೀ ಜೈ ಅಂತ ಘೋಷಣೆ ಕೂಗಿದ್ದಾರೆ. ಆದ್ರೆ ಈ ವೇಳೆ ಕೆಲೆ ಮುಸ್ಲಿಂ ಯುವಕರು ಘೋಷಣೆ ಕೂಗಲು ನಿರಾಕರಿಸಿದ್ದಾರೆ. ಇದನ್ನು ನಾನು ವಿರೋಧಿಸಿದೆ. ನಂತರ ಆ ಮುಸ್ಲಿಂ ಯುವಕರು ಅವರ ಸ್ನೇಹತರೊಂದಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ನಾನು ಮತ್ತು ನನ್ನ ಸ್ನೇಹಿತರಿಗೆ ಥಳಿಸಿದ್ದಾರೆ ಅಂತ ಭರತ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಅದರ ಆಧಾರದ ಮೇಲೆ 9 ಮಂದಿ ಪರಿಚಿತ ಮತ್ತು 8ರಿಂದ 10 ಮಂದಿ ಅಪರಿಚಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply