ಬಿಜೆಪಿ ಸೇರುತ್ತಾರಾ ಸಂಸದೆ ಸುಮಲತಾ ಅಂಬರೀಷ್..?

ಸುಮಲತಾ ಬಿಜೆಪಿಗೆ ಸೇರುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಇವತ್ತು ಬಿಜೆಪಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬೆಂಬಲದಿಂದ ಗೆದಿದ್ದ ಸುಮಲತಾ ನಂತರವೂ ಬಿಜೆಪಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ಈಗ ಬಿಜೆಪಿ ಕಚೇರಿಗೆ ಭೇಟಿ ನೀಡ್ತಿರೋದು ಯಾಕೆ..? ಬಿಜೆಪಿ ಸೇರುತ್ತಾರಾ ಎಂಬ ಚರ್ಚೆ ಶುರುವಾಗಿದೆ.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಬಿಜೆಪಿ ಅಧ್ಯಕ್ಷ, ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಂತಲೇ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಅವರು ನಮ್ಮ ಪಕ್ಷಕ್ಕೆ ಬಂದರೆ ಖಂಡಿತ ಸ್ವಾಗತಿಸುತ್ತೇವೆ. ಚುನಾವಣೆ ಬಳಿಕ ತಮಗೆ ಬೆಂಬಲಿಸಿದ ಪದಾಧಿಕಾರಿಗಳಿಗೆ ಅವರು ಧನ್ಯವಾದ ತಿಳಿಸಲು ಆಗಿರಲಿಲ್ಲ. ಹೀಗಾಗಿ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಕಚೇರಿಗೆ ಬರುತ್ತಿರಬಹುದು ಎಂದಿದ್ದಾರೆ. ಆದ್ರೆ ಸುಮಲತಾ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

Contact Us for Advertisement

Leave a Reply