masthmagaa.com:

ಶಂಕಿತ ಬೌಲಿಂಗ್ ಶೈಲಿಯಿಂದ ನಿಷೇಧಕ್ಕೆ ಒಳಗಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನಿಲ್​ ನರೈನ್​ ಮುಂದಿನ ಪಂದ್ಯಕ್ಕೆ ಲಭ್ಯವಾಗಿದ್ದಾರೆ. ಅವರ ಮೇಲೆ ಹೇರಿದ್ದ ನಿಷೇಧವನ್ನು ಐಪಿಎಲ್​ ಶಂಕಿತ ಬೌಲಿಂಗ್​ ಸಮಿತಿಯು ತೆಗೆದುಹಾಕಿದೆ.

ಅಂದ್ಹಾಗೆ ಅಕ್ಟೋಬರ್​ 10ರಂದು ಕೆಕೆಆರ್ ಮತ್ತು ಪಂಜಾಬ್​ ನಡುವಿನ ಪಂದ್ಯದ ವೇಳೆ ಸುನಿಲ್ ನರೈನ್ ಶಂಕಾಸ್ಪದ ಶೈಲಿಯಲ್ಲಿ ಬೌಲಿಂಗ್ ಮಾಡಿದ್ದರು. ಇದರ ಬೆನ್ನಲ್ಲೇ ನರೈನ್ ಅವರನ್ನು ಐಪಿಎಲ್ ವಾರ್ನಿಂಗ್ ಲಿಸ್ಟ್​ನಲ್ಲಿ ಇಡಲಾಗಿತ್ತು. ನಂತರ ಕೆಕೆಆರ್ ತಂಡವು ಈ ಬಗ್ಗೆ ಅಧಿಕೃತ ಮೌಲ್ಯಮಾಪನ ನಡೆಸಬೇಕು ಅಂತ ಐಪಿಎಲ್ ಶಂಕಿತ ಬೌಲಿಂಗ್ ಆಕ್ಷನ್ ಕಮಿಟಿಗೆ (IPL Suspect Bowling Action Committee) ಮನವಿ ಮಾಡಿತ್ತು. ಜೊತೆಗೆ ನರೈನ್ ಬೌಲಿಂಗ್ ಕುರಿತ ಸ್ಲೋ ಮೋಷನ್ ವಿಡಿಯೋಗಳನ್ನು ಕೂಡ ಕಳುಹಿಸಿಕೊಟ್ಟಿತ್ತು.

ಇದೀಗ ಸಮಿತಿಯು ಎಲ್ಲಾ ವಿಡಿಯೋಗಳನ್ನ ಪರಿಶೀಲಿಸಿದ್ದು, ನರೈನ್ ಅವರ ಬೌಲಿಂಗ್ ಶೈಲಿಯು ಮೊಣಕೈ ಬೆಂಡ್ ಆಗಲು ಅನುಮತಿಸುವ ಮಿತಿಯ ವ್ಯಾಪ್ತಿಯಲ್ಲಿದೆ ಅನ್ನೋ ತೀರ್ಮಾನಕ್ಕೆ ಬಂದಿದೆ  ಅಂತ ತಿಳಿಸಿದೆ. ಆದ್ರೆ ಮುಂದಿನ ಪಂದ್ಯಗಳಲ್ಲಿ ಆಡುವಾಗ ಸುನಿಲ್ ನರೈನ್​ ಇದೇ ಬೌಲಿಂಗ್ ಶೈಲಿಯನ್ನು ಕಾಪಾಡಿಕೊಳ್ಳಬೇಕು ಅಂತ ತಿಳಿಸಿದೆ. ಇಲ್ಲದಿದ್ರೆ ಮತ್ತೆ ಅವರನ್ನು ವಾರ್ನಿಂಗ್ ಲಿಸ್ಟ್​ಗೆ ಸೇರಿಸುವ ಸಾಧ್ಯತೆ ಇರುತ್ತದೆ.

2014ರಲ್ಲೂ ಸುನಿಲ್​ ನರೈನ್ ಅಕ್ರಮ ಬೌಲಿಂಗ್ ಶೈಲಿಯಿಂದ ಸುದ್ದಿಯಾಗಿದ್ರು. ಬಳಿಕ ಇಂಗ್ಲೆಂಡ್​ನ ಕಾರ್ಲ್ ಕ್ರೌವ್ ಅವರು ನರೈನ್ ಬೌಲಿಂಗ್ ಶೈಲಿಯನ್ನು ಸರಿಪಡಿಸಲು ಪ್ರಯತ್ನಿಸಿದ್ರು. ಈ ಬಾರಿ ಆನ್​-ಫೀಲ್ಡ್​ ಅಂಪೈರ್​ಗಳು ಮತ್ತೊಮ್ಮೆ ಶಂಕಿತ ಬೌಲಿಂಗ್ ಶೈಲಿ ಬಗ್ಗೆ ವರದಿ ಮಾಡಿದ ಬೆನ್ನಲ್ಲೇ ಸುನಿಲ್ ನರೈನ್ ಮತ್ತೆ ಕಾರ್ಲ್ ಕ್ರೌವ್ ಮೊರೆ ಹೋಗಿದ್ದರು.

-masthmagaa.com

Contact Us for Advertisement

Leave a Reply