ಜಪಾನ್‍ನಲ್ಲಿ ಹೆಗಿಬಿಸ್ ಅಬ್ಬರ..14 ಸಾವು..ನೂರಾರು ಮಂದಿಗೆ ಗಾಯ

ದ್ವೀಪರಾಷ್ಟ್ರ ಜಪಾನ್‍ಗೆ ಹೆಗಿಬಿಸ್ ಚಂಡಮಾರುತ ಬಂದು ಅಪ್ಪಳಿಸಿದ್ದು, ದೇಶದಾದ್ಯಂತ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಈವರೆಗೆ 14 ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಪಾನ್ ಸರ್ಕಾರ ಕೂಡ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಚಂಡಮಾರುತದಿಂದಾಗಿ ಹಲವೆಡೆ ಭಾರಿ ಮಳೆಯ ಜೊತೆ ಭೂಕುಸಿತ ಉಂಟಾಗುತ್ತಿದೆ. ವಿವಿಧ ಅಪಾಯಕಾರಿ ಸ್ಥಳಗಳಲ್ಲಿ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಎಚ್ಚರಿಸಿದೆ. ಇನ್ನು ಹಲವರು ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಆರಂಭಿಸಿದೆ.

1958ರಲ್ಲಿ ಚಂಡಮಾರುತ ಬೀಸಿ ಕಾಂಟೋ ಮತ್ತು ಇಜೂ ಪ್ರದೇಶದಲ್ಲಿ 1200 ಜನ ಸಾವನ್ನಪ್ಪಿದ್ದರು. ಈಗ ಬೀಸುತ್ತಿರುವ ಹೆಗಿಬಿಸ್ ಚಂಡಮಾರುತ ಕೂಡ ಅದಕ್ಕೆ ಸಮನಾಗಿದೆ ಅಂತ ತಜ್ಞರು ಹೇಳಿದ್ದಾರೆ.

Contact Us for Advertisement

Leave a Reply