ಈ ಸೂಪರ್‌ ವಾಸುಕಿ ಬಗ್ಗೆ ನಿಮಗೆಷ್ಟು ಗೊತ್ತು?

masthmagaa.com:

ಭಾರತೀಯ ರೈಲ್ವೆ ಸ್ವಾತಂತ್ರ್ಯ ದಿನದಂದು ಭಾರತದ ಅತಿ ಉದ್ಧವಾದ ಮತ್ತು ಭಾರವಾದ ಸರಕು ರೈಲನ್ನ ಪರಿಕ್ಷೆಗೆ ಒಳಪಡಿಸಿದೆ. ಇದೀಗ ಇದರ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದ್ದು, ಈ ಟ್ರೈನ್‌ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಲುವಾಗಿ ಕಾರ್ಯನಿರ್ವಹಿಸಿದೆ. ಇನ್ನು ಈ ಸರಕು ರೈಲಿನ ವಿಶೇಷತೆ ಏನು ಅನ್ನೋದನ್ನ ನೋಡೋಣ… ಈ ರೈಲಿನ ಉದ್ದ 3.5ಕಿಮೀ ಆಗಿದ್ದು, 295 ಲೋಡ್‌ ವ್ಯಾಗನ್ಗಳನ್ನ ಹೊಂದಿದೆ. ಇದು 27 ಸಾವಿರ ಟನ್‌ ಕಲ್ಲಿದ್ದಲನ್ನ ಹೊತ್ತುಕೊಂಡು ಛತ್ತೀಸ್ಗಢದ ಕೊರ್ಬಾ ಮತ್ತು ನಾಗ್ಪುರದ ರಜ್ನಾಂಡ್ಗಾವೊ ನಡುವೆ ಸಾಗಾಟ ನಡೆಸಿದೆ. ಇನ್ನು ಈ ಟ್ರೈನ್‌ 5 ಸಾಮಾನ್ಯ ಗೂಡ್ಸ್‌ ಟ್ರೈನ್‌ಗಳನ್ನ ಜೋಡಿಸಿದಾಗ ಎಷ್ಟು ಉದ್ದ ಆಗುತ್ತೋ ಅಷ್ಟು ಉದ್ದ ಇದೆ. ಭಾರತೀಯ ರೈಲ್ವೆಯ ಪ್ರಕಾರ ಇದು ಈಗಿನ ಲೆಕ್ಕಾಚಾರದಲ್ಲಿ ದೇಶದಲ್ಲೇ ಅತ್ಯಂತ ದೊಡ್ಡದಾದ ಮತ್ತು ಭಾರವಾದ ರೈಲು. ಇದು ರೈಲ್ವೇ ನಿಲ್ದಾಣವನ್ನ ದಾಟಲು ನಾಲ್ಕು ನಿಮಿಷಗಳನ್ನ ತೆಗೆದುಕೊಳ್ಳುತ್ತದೆ. ಇನ್ನು ಇದಕ್ಕೆ ಸೂಪರ್‌ ವಾಸುಕಿ ಅಂತ ಹೆಸರಿಡಲಾಗಿದ್ದು ಈಗ ಪರೀಕ್ಷಾರ್ಥವಾಗಿ ಹೊತ್ತ ಕಲ್ಲಿದ್ದಲಿನ ಪ್ರಮಾಣ ಒಂದು ಸಂಪೂರ್ಣ ದಿನಕ್ಕೆ 3 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸೋಕೆ ಸಾಕಾಗುತ್ತೆ ಅಂತ ಅಂದಾಜು ಮಾಡಲಾಗಿದೆ.

-masthmagaa.com

Contact Us for Advertisement

Leave a Reply