ಸೂಪರ್​​​ಬಗ್ ಕಾಯಿಲೆಗೆ 1 ಕೋಟಿ ಮಂದಿ ಬಲಿ!

masthmagaa.com:

2019ರಲ್ಲಿ ಸೂಪರ್​ಬಗ್ ಇನ್​ಫೆಕ್ಷನ್​ನಿಂದ 12 ಲಕ್ಷ ಮಂದಿ ಪ್ರಾಣ ಕಳ್ಕೊಂಡಿದ್ದಾರೆ ಅಂತ ವರದಿಯಾಗಿದೆ. ಲ್ಯಾನ್ಸೆಟ್ ಜರ್ನಲ್​​ನಲ್ಲಿ ಈ ವರದಿ ಪ್ರಕಟವಾಗಿದ್ದು, ಸೂಪರ್​​ಬಗ್ ಇನ್​ಫೆಕ್ಷನ್ ಅಂದ್ರೆ ಔಷಧ ನಿರೋಧಕ ಸೂಕ್ಷ್ಮಜೀವಿಗಳ ಇನ್​​ಫೆಕ್ಷನ್​​​​… ವೈರಾಣು, ಬ್ಯಾಕ್ಟೀರಿಯಾದಂತ ಯಾವುದೇ ಸೂಕ್ಷ್ಮಜೀವಿಗಳಿಂದ ಸಂಭವಿಸೋ ಸೋಂಕು. Anti-microbial resistant bacteria ಸೋಂಕಿನಿಂದ ಎಚ್​ಐವಿ, ಮಲೇರಿಯಾಗೆ ಎಷ್ಟು ಮಂದಿ ಬಲಿಯಾಗಿದ್ದಾರೋ ಅದಕ್ಕಿಂತಲೂ ಹೆಚ್ಚು ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಈ ವೈರಾಣು, ಬ್ಯಾಕ್ಟೀರಿಯಾ, ಫಂಗಸ್​​ ಕಾಲ ಕಳೆದಂತೆ ಬದಲಾಗುತ್ತವೆ. ಇದ್ರಿಂದ ಹಿಂದಿನ ರೂಪದ ವೈರಾಣುವಿಗೆ ಮಾಡಿದ ಮೆಡಿಸಿನ್ ಈಗ ಬದಲಾದ ವೈರಾಣುವಿಗೆ ಆಗೋದಿಲ್ಲ. ಹೀಗಾಗಿ ಅಂತಹ ವೈರಾಣುಗಳನ್ನು, ಬ್ಯಾಕ್ಟೀರಿಯಾ, ಫಂಗೈ ನಂತ ಮೈಕ್ರೋಬ್ಗಳನ್ನ ಸುಪರ್​ಬಗ್ ಅಂತ ಕರೆಯಲಾಗುತ್ತೆ. ಜೊತೆಗೆ ನಿರಂತರವಾಗಿ ಆ್ಯಂಟಿ ಬಯೋಟಿಕ್ ಬಳಕೆ ಜಾಸ್ತಿಯಾದ್ರೂ ಈ ಸಮಸ್ಯೆ ಉಂಟಾಗುತ್ತೆ. ಹೋಗ್ತಾ ಹೋಗ್ತಾ ಆ್ಯಂಟಿ ಬಯೋಟಿಕ್ ವರ್ಕೇ ಆಗಲ್ಲ ಅವ್ರ ಮೇಲೆ. ಆ ಥರ ಆಗುತ್ತೆ. ಇಂಥಾ ಸಮಸ್ಯೆಗಳಿಂದ 2019ರ ವರ್ಷವೊಂದ್ರಲ್ಲಿ 12 ಲಕ್ಷ ಮಂದಿ ನೇರವಾಗಿ ಬಲಿಯಾದ್ರೆ, ಪರೋಕ್ಷವಾಗಿ 36.8 ಲಕ್ಷ ಮಂದಿಯ ಸಾವಿನಲ್ಲಿ ಇದು ಪಾತ್ರ ವಹಿಸಿದೆ ಅಂತ ವರದಿಯಲ್ಲಿ ಹೇಳಲಾಗಿದೆ. 2050ರ ವೇಳೆ ಈ ಸುಪರ್​ಬಗ್ಸ್​​​​ನಿಂದ ವರ್ಷಕ್ಕೆ 1 ಕೋಟಿ ಜನ ಪ್ರಾಣ ಕಳ್ಕೋಬೋದು ಅಂತ ಅಂದಾಜಿಸಲಾಗಿತ್ತು. ಆದ್ರೆ ಈಗಿನ ಅಂಕಿ ಅಂಶ ಗಮನಿಸಿದ್ರೆ ಸುಪರ್​ಬಗ್​​ನಿಂದ ವರ್ಷಕ್ಕೆ 1 ಕೋಟಿ ಜನಸಂಖ್ಯೆ ಸಾಯೋ ಕಾಲ ತುಂಬಾ ಬೇಗನೇ ಬರುತ್ತೆ ಅಂತ ಈ ವರದಿಯಲ್ಲಿ ಎಚ್ಚರಿಸಲಾಗಿದೆ.

-masthmagaa.com

Contact Us for Advertisement

Leave a Reply