‘ತಾಂಡವ್​’ ಆಯ್ತು.. ಈಗ ‘ಮಿರ್ಜಾಪುರ್​’ ವೆಬ್​ ಸರಣಿ ವಿವಾದ

masthmagaa.com:

ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗ್ತಿರುವ ಒಂದೊಂದೇ ವೆಬ್​ ಸಿರೀಸ್ ವಿವಾದದ ಕೇಂದ್ರಬಿಂದುವಾಗ್ತಿದೆ. ಕಳೆದ ಕೆಲ ದಿನಗಳಿಂದ ‘ತಾಂಡವ್’ ವೆಬ್ ಸರಣಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದ್ರಲ್ಲಿ ಹಿಂದೂ ದೇವತೆಗಳನ್ನ ಅವಮಾನ ಮಾಡಲಾಗಿದೆ, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ ಹೇಳಲಾಗಿತ್ತು. ಈ ಸಂಬಂಧ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಹಲವು ಎಫ್​ಐಆರ್ ದಾಖಲಾಗಿತ್ತು. ವಿವಾದದ ಬಳಿಕ ಕ್ಷಮೆ ಕೇಳಿದ್ದ ಚಿತ್ರತಂಡ, ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದೀಗ ಉತ್ತರಪ್ರದೇಶದಿಂದ ಮುಂಬೈಗೆ ಬಂದಿರುವ ಪೊಲೀಸರು ತಾಂಡವ್​ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್​ಗೆ ನೋಟಿಸ್​ ಕೊಟ್ಟಿದ್ಧಾರೆ. ಜನವರಿ 27ರಂದು ವಿಚಾರಣೆಗೆ ಬರುವಂತೆ ಅದರಲ್ಲಿ ಸೂಚಿಸಲಾಗಿದೆ.

ಇನ್ನು ತಾಂಡವ್ ಬಳಿಕ ಇದೀಗ ಮಿರ್ಜಾಪುರ್ ವೆಬ್​ ಸಿರೀಸ್​ ಕೂಡ ವಿವಾದಕ್ಕೆ ಗ್ರಾಸವಾಗಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 2018ರಲ್ಲಿ ರಿಲೀಸ್ ಆಗಿದ್ದ ಈ ವೆಬ್​​ ಸರಣಿಯಲ್ಲಿ ಉತ್ತರಪ್ರದೇಶದ ಮಿರ್ಜಾಪುರ್‌ ಹೆಸರಿಗೆ ಧಕ್ಕೆಯುಂಟು ಮಾಡಲಾಗಿದೆ. ಮಿರ್ಜಾಪುರವನ್ನ ಗೂಂಡಾ ಮತ್ತು ವ್ಯಭಿಚಾರಿಗಳ ನಗರವೆಂದು ಬಿಂಬಿಸಲಾಗಿದೆ ಅಂತ ಮಿರ್ಜಾಪುರದ ಪತ್ರಕರ್ತರೊಬ್ರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮಿರ್ಜಾಪುರ್‌ ನಿರ್ಮಾಪಕರು ಮತ್ತು ಅಮೆಜಾನ್​ ಪ್ರೈಂಗೆ ವಿಡಿಯೋಗೆ ನೋಟಿಸ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply