ಸುಪ್ರೀಂಕೋರ್ಟ್​​ನಲ್ಲಿ ಗುರುವಾರದಿಂದ ಪೆಗಾಸಸ್ ವಿಚಾರಣೆ ಶುರು!

masthmagaa.com:

ಇಡೀ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರೋ ಪೆಗಾಸಸ್ ಸಂಬಂಧ ಸಲ್ಲಿಕೆಯಾಗಿರೋ ಅರ್ಜಿಗಳನ್ನು ಗುರುವಾರದಿಂದ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್​ ತಿಳಿಸಿದೆ. ಇಸ್ರೇಲಿ ಮೂಲದ ಸ್ಪೈವೇರ್ ಪೆಗಾಸಸ್ ಮೂಲಕ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಫೋನ್ ಹ್ಯಾಕ್ ಮಾಡಲಾಗಿದೆ ಅನ್ನೋ ವಿಚಾರ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಸಂಬಂಧ ವಿಶೇಷ ತನಿಖೆ ನಡೆಯಬೇಕು ಅಂತ ಒತ್ತಾಯಿಸಿ ಸುಪ್ರೀಂಕೋರ್ಟ್​​​ಗೆ ಅರ್ಜಿಗಳು ಸಲ್ಲಿಕೆಯಾಗಿದ್ವು. ಈ ಸಂಬಂಧ ಗುರುವಾರದಿಂದ ಮುಖ್ಯನ್ಯಾಯಮೂರ್ತಿ ಎನ್​​ವಿ ರಮಣ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಈ ಬೆಂಚ್​​​ನ ಮತ್ತೋರ್ವ ಜಡ್ಜ್ ಆಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಗೂಢಚರ್ಯೆ ಮಾಡೋದ್ರಲ್ಲಿ ಕಾಂಗ್ರೆಸ್ ಜೇಮ್ಸ್ ಬಾಂಡ್ ಆಗಿತ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply