masthmagaa.com:

ಕೋರ್ಟ್​ ವಿಚಾರಣೆಯ ವೀಡಿಯೊ ಕಾನ್ಫರೆನ್ಸ್ ಲಿಂಕ್‌ಗಳನ್ನ ಹಂಚಿಕೊಳ್ಳಲು ಇನ್ಮುಂದೆ ವಾಟ್ಸಾಪ್ ಗ್ರೂಪ್​ಗಳನ್ನ ಬಳಸೋದಿಲ್ಲ ಅಂತ ಸುಪ್ರೀಂಕೋರ್ಟ್ ಪ್ರಕಟಣೆ ಹೊರಡಿಸಿದೆ. ಮಾರ್ಚ್​ 1ರಿಂದ ವಿಡಿಯೋ ಕಾನ್ಫರೆನ್ಸ್ ಲಿಂಕ್​ಗಳನ್ನ ವಾಟ್ಸಾಪ್ ಬದಲು ವಕೀಲರು ಮತ್ತು ಕಕ್ಷಿದಾರರ ಇ-ಮೇಲ್ ಐಡಿಗೆ ಅಥವಾ ಎಸ್​ಎಂಎಸ್​​ ಮೂಲಕ ಮೊಬೈಲ್ ನಂಬರ್​ಗೆ ಕಳಿಸಲಾಗುತ್ತೆ. ಫೇಸ್​ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೊಸ ನಿಯಮಗಳನ್ನ ಬಿಡುಗಡೆ ಮಾಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್​ ಈ ನಿರ್ಧಾರಕ್ಕೆ ಬಂದಿದೆ.

-masthmagaa.com

Contact Us for Advertisement

Leave a Reply