ಕಿಮ್ಮಣ್ಣನ ಮಗಳು ವಾಸಿಸುವ ಮನೆಯಲ್ಲಿ ಇರುವ ಸೌಲಭ್ಯಗಳೇನು?

masthmagaa.com:

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ರ ಮಗಳು ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತ್ರ ಅವರ ಬಗ್ಗೆ ಕೆಲ ಮಾಹಿತಿಗಳು ಬಹಿರಂಗವಾಗಿವೆ. ಕಿಮ್‌ರ ಪುತ್ರಿ ಜು ಏ ಐಷರಾಮಿ ಬಂಗಲೆಯಲ್ಲಿ ವಾಸ ಮಾಡ್ತಿದ್ದಾಳೆ. ಈ ಬಂಗಲೆ ಸ್ವಿಮಿಂಗ್‌ಪೂಲ್‌, ಟೆನಿಸ್‌ ಕೋರ್ಟ್‌, ಫುಟ್ಬಾಲ್‌ ಮೈದಾನ ಸೇರಿದಂತೆ ಹಲವು ಸೌಲಭ್ಯಗಳನ್ನ ಹೊಂದಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ದೇಶಾದ್ಯಂತ 15 ಬಂಗಲೆಗಳನ್ನ ಕಿಮ್ ಫ್ಯಾಮಿಲಿ ಹೊಂದಿದ್ದು, ಒಂದರಿಂದ ಒಂದಕ್ಕೆ ಟನೆಲ್‌ಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಕಿಮ್‌ ಜಾಂಗ್‌ ಓಡಾಟ ಫಾರೆನ್‌ ಏಜೆನ್ಸಿಗಳಿಗೆ ಗೊತ್ತಾಗಬಾರ್ದು ಅಂತ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಅಂದ್ಹಾಗೆ ಕಿಮ್‌ ಟಫ್‌ ವ್ಯಕ್ತಿಯಾಗಿದ್ರು ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ ಅಂತ ಕುಟುಂಬದ ಆಪ್ತರೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply