ಸ್ವಿಸ್ ಬ್ಯಾಂಕ್‍ನಲ್ಲಿ ದುಡ್ಡು ಇಟ್ಟವರಿಗೆ ಆಪತ್ತು..! `ನಮೋ’ ಸರ್ಕಾರಕ್ಕೆ ಗೆಲುವು

ತೆರಿಗೆ ವಂಚಿಸಿ ಇದ್ದ ಬದ್ದ ದುಡ್ಡನ್ನೆಲ್ಲಾ ಸ್ವಿಸ್ ಬ್ಯಾಂಕ್‍ನಲ್ಲಿ ತುಂಬಿಟ್ಟಿರುವ ಕಳ್ಳರಿಗೆ ಸಂಕಷ್ಟ ಎದುರಾಗಿದೆ. ಸ್ವಿಸ್ ಬ್ಯಾಂಕ್‍ನಲ್ಲಿ ದುಡ್ಡು ಇಟ್ಟಿರೋ ಭಾರತೀಯರ ಪೈಕಿ ಮೊದಲ ಪಟ್ಟಿ ಮೋದಿ ಸರ್ಕಾರಕ್ಕೆ ಸಿಕ್ಕಿದೆ. ಸ್ವಿಸ್ ಬ್ಯಾಂಕ್‍ನಲ್ಲಿ ಖಾತೆ ತೆರೆದಿರುವ ಭಾರತೀಯರ ಮಾಹಿತಿಯನ್ನು ಸ್ವಿಡ್ಜರ್ ಲ್ಯಾಂಡ್ ಸರ್ಕಾರ ಭಾರತ ಸರ್ಕಾರಕ್ಕೆ ನೀಡಿದೆ. ಈ ಮಾಹಿತಿಯನ್ನು ಪಡೆದ ಕೆಲವೇ ದೇಶಗಳ ಪೈಕಿ ಭಾರತವೂ ಒಂದಾಗಿದೆ.

ಸ್ವಿಡ್ಜರ್ ಲ್ಯಾಂಡ್‍ನ ತೆರಿಗೆ ಇಲಾಖೆ ಮಾಹಿತಿಯಂತೆ 2020ರಲ್ಲಿ ಭಾರತ ಸರ್ಕಾರಕ್ಕೆ ಮತ್ತಷ್ಟು ಮಾಹಿತಿ ಸಿಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರದ ಮೂಲಗಳು, ಮಾಹಿತಿ ಸಿಕ್ಕಿರುವ ಎಲ್ಲಾ ಖಾತೆಗಳು ಕಾನೂನು ಬಾಹಿರವಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ ಎಂದಿದೆ.

ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ಜಗತ್ತಿನ 75 ದೇಶಗಳ ಒಟ್ಟು 31 ಲಕ್ಷ ಖಾತೆಗಳು ರಡಾರ್‍ನಲ್ಲಿದ್ದು, ಅದರಲ್ಲಿ ಭಾರತದ ಕೆಲ ಖಾತೆಗಳೂ ಸೇರಿವೆ.

Contact Us for Advertisement

Leave a Reply