ಕೇರಳ: ಅದಾನಿ ಗ್ರೂಪ್ ಪೋರ್ಟ್ ವಿರೋಧಿಸಿ ಹೆಚ್ಚಾದ ಪ್ರತಿಭಟನೆ
masthmagaa.com: ಕೇರಳದ ವಿಳಿಂಜಮ್‌ನಲ್ಲಿ(Vizhinjam) ಅದಾನಿ ಗ್ರೂಪ್ ನಿರ್ಮಾಣ ಮಾಡ್ತಿರೋ ಬಂದರಿಗೆ ವಿರೋಧ ಹೆಚ್ಚಾಗಿದೆ. ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪಿದೆ. ಪ್ರತಿಭಟನಾಕಾರರು ವಿಳಿಂಜಮ್ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವೇಳೆ 36 ಜನ ಪೊಲೀಸರು ಮತ್ತು 20 ಜನ ಪ್ರತಿಭಟನಕಾರರು ಗಾಯಗೊಂಡಿದ್ದು, ವಾಹನಗಳ ದ್ವಂಸ ಸೇರಿದಂತೆ ಒಟ್ಟು 85 ಲಕ್ಷ ನಷ್ಟ ಆಗಿದೆ. ಸ್ಟೇಷನ್ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದ 3 ಸಾವಿರ ಮೀನುಗಾರರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಅಂದ್ಹಾಗೆ ಪೋರ್ಟ್ ನಿರ್ಮಾಣದಿಂದ ತಮ್ಮ ಜೀವನಕ್ಕೆ ತೊಂದ್ರೆ ಅಗುತ್ತೆ ಅಂತ ಅಲ್ಲಿನ ಮೀನುಗಾರರು ಪ್ರತಿಭಟನೆ ಮಾಡ್ತಿದ್ರು. ಈ ವೇಳೆ 5 ಜನರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ರು, ಇದ್ರಿಂದ ಕೋಪಗೊಂಡ ಪ್ರತಿಭಟನಾಕಾರರು ಅವ್ರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಠಾಣೆ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇತ್ತ ಕೇರಳದ ಬಂದರು ಅಭಿವೃದ್ಧಿ ಸಚಿವ ಅಹ್ಮದ್ ದೆವರ್‌ಕೊವಿಲ್ ಸರ್ವ ಪಕ್ಷಗಳ ಸಭೆಯನ್ನ ಕರೆದಿದ್ದಾರೆ ಹಾಗೂ ಆ ಭಾಗದಲ್ಲಿ ಶಾಂತಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. -masthmagaa.com Share on: WhatsAppContact Us forRead More →