masthmagaa.com: ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದೆ. ಸಖತ್ ಇಂಟ್ರಸ್ಟಿಂಗ್ ಆಗಿರೋ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು. ‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್Read More →

masthmagaa.com: ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್. ಕೆ ಪ್ರಕಾಶ್ ಈ ಬಾರಿಯ ದೀಪಾವಳಿಗೆ ನಟ ಅಜಯ್ ರಾವ್ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿಯೂ ಹೊಸ ಪ್ರತಿಭೆಗೆ ಅವಕಾಶ ನೀಡಿರುವ ನಿರ್ಮಾಪಕರು ಇಂಟ್ರಸ್ಟಿಂಗ್ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ. ಅದುವೇ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’. ಇದು ಹೆಚ್. ಕೆ ಪ್ರಕಾಶ್ ಅವರ ಶ್ರೀದೇವಿ ಎಂಟರ್ಟೈನರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಐದನೇ ಸಿನಿಮಾವಾಗಿದೆ. ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಕಥೆ ಕೇಳಿ ಥ್ರಿಲ್ ಆಗಿರೋ ನಟ ಅಜಯ್ ರಾವ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಪ್ರತಿ ಬಾರಿ ನವ ನಿರ್ದೇಶಕರಿಗೆ ಮೊದಲ ಆದ್ಯತೆ ನೀಡುವ ನಿರ್ಮಾಪಕರಾದ ಹೆಚ್ ಕೆ ಪ್ರಕಾಶ್ ಈ ಬಾರಿಯೂ ನವ ಹಾಗೂ ಪ್ರತಿಭಾವಂತ ನಿರ್ದೇಶಕನೊಂದಿಗೆ ಕೈ ಜೋಡಿಸಿದ್ದಾರೆ. ಅಭಿಷೇಕ್ ಎಂ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪರಿಚಿತರಾಗುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತುRead More →

masthmagaa.com: ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ ಪ್ರತಿಮೆ ಕೂಡಯಿದ್ದು, ಇಬ್ಬರು ದಿಗ್ಗಜರ ಪ್ರತಿಮೆ ಮುಂದೆ “ಶೋಕಿವಾಲ” ಚಿತ್ರದ ಟೀಸರ್, ಶ್ರೀರಾಮನವಮಿಯ ಪುಣ್ಯದಿನದಂದು ಬಿಡುಗಡೆಯಾಗಿದ್ದು ವಿಶೇಷ. ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ…‌ ಮುಂದಿನ ದಿನಗಳಲ್ಲಿ “ಶೋಕಿವಾಲ” ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇವೆ. ಇದೇ ತಿಂಗಳು 29 ರಂದು ಚಿತ್ರವನ್ನು ಕರ್ನಾಟಕದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ. ವಿತರಕರ ಕಡೆಯಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು, ಅಜಯ್ ರಾವ್ ಅವರಿಗೆ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದುಕೊಡಲಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಅವಕಾಶ ನೀಡಿದ ನಿರ್ಮಾಪಕರಿಗೆ ನಿರ್ದೇಶಕರು ಧನ್ಯವಾದ ತಿಳಿಸಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಅಜಯ್ ರಾವ್,Read More →

masthmagaa.com: ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟಿಸಿರುವ ಶೋಕಿವಾಲ ಚಿತ್ರದ ಮೊದಲನೇ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಆಗಸ್ಟ್ 20th ರಂದು ಬಿಡುಗಡಯಾಗುತ್ತಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಅನ್ವೇಷ ಹಾಡನ್ನು ಹಾಡಿರುವುದು ವಿಶೇಷವಾಗಿದೆ. ಜಯಂತ್ ಕಾಯ್ಕಿಣಿ ರವರು ಬರೆದಿರುವ ಹಾಡನ್ನು ಹಿಂದಿ ಸಿನಿಮಾ “ಪ್ರೇಮ್ ರತನ್ ದನ್ ಪಾಯೋ” ಸಿನಿಮಾದ ಸಿಂಗರ್ “ಅನ್ವೇಷ” ನಮ್ಮ ಚಿತ್ರಕ್ಕೆ ಹಾಡಿರುವುದು ತುಂಬಾ ಖುಷಿಯಾಗಿದೆ. ಇದೆ ಹಾಡನ್ನು ತೆಲುಗಿಗೆ ಕನ್ನಡದ ಸಿಂಗರ್ ಆದ ಶ್ವೇತ ದೇವನಹಳ್ಳಿ ಯವರು ಹಾಡಿದ್ದಾರೆ… ಕನ್ನಡ ಮತ್ತು ತೆಲುಗು ಮೇಲ್ ವರ್ಷನ್ ಅನ್ನ ಸಂತೋಷ್ ವೆಂಕಿ ಹಾಡಿದ್ದಾರೆ, ಕನ್ನಡದ ಪ್ರತಿಭೆಗಳಿಗೆ ಬೇರೆ ಭಾಷೆಯ ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ. ಈ ತೆಲುಗಿನ ಹಾಡನ್ನು ಗೌಸ್ಪಿರ್ ರವರು ಬರೆದಿದ್ದು ತುಂಬಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಂದಿನ ಹಾಡುಗಳ ಬಗ್ಗೆ ಮಾಹಿತಿ ನೀಡುತ್ತಾ ಬರುತ್ತೆವೆ ಎಂದು ನಿರ್ಮಾಪಕ ಡಾ” T.R.ಚಂದ್ರಶೇಖರ್ ಹಾಗೂ ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಆಗಷ್ಟ್ 20 ಕ್ಕೆRead More →

masthmagaa.com: ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.ಕಳೆದ 11 ವರ್ಷದಿಂದ ಅಜಯ್ ರಾವ್ ಅವರಿಗೆ ಮೇಕಪ್ ಮಾಡಿದ್ದ ಜಯರಾಮ್ ನಿಧನದಿಂದ ನನಗೆ ಬಹಳ ದುಃಖವಾಗಿದೆ ಎಂದು ನಟ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. RIP ಜಯರಾಮ್ ಎಂದು ನಟ ಬರೆದುಕೊಂಡಿದ್ದು ಕೆಲ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.ಕಳೆದ 11 ವರ್ಷದಿಂದ ಅಜಯ್ ರಾವ್ ಅವರಿಗೆ ಮೇಕಪ್ ಮಾಡಿದ್ದ ಜಯರಾಮ್ ನಿಧನದಿಂದ ನನಗೆ ಬಹಳ ದುಃಖವಾಗಿದೆ ಎಂದು ನಟ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. RIP ಜಯರಾಮ್ ಎಂದು ನಟ ಬರೆದುಕೊಂಡಿದ್ದು ಕೆಲ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. -masthmagaa.com Share on: WhatsAppContact Us for AdvertisementRead More →