masthmagaa.com: ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಕಚೇರಿಯನ್ನ ಮುಂಬೈ ಪಾಲಿಕೆ ಅಧಿಕಾರಿಗಳು ಕೆಡವಿದ್ದು ಕೆಟ್ಟ ಉದ್ದೇಶದಿಂದ ಕೂಡಿದೆ. ಹೀಗಾಗಿ ಕಟ್ಟಡಕ್ಕೆ ಆದ ಹಾನಿಯನ್ನು ಪರಿಶೀಲಿಸಲು ಮೌಲ್ಯಮಾಪಕರನ್ನು ನೇಮಿಸುವಂತೆ ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಮೌಲ್ಯಮಾಪಕರು ಕೋರ್ಟ್​ಗೆ ವರದಿ ಸಲ್ಲಿಸುತ್ತಾರೆ. ಬಳಿಕವಷ್ಟೇ ಕಂಗನಾ ರಣಾವತ್​ಗೆ ಎಷ್ಟು ಹಣವನ್ನ ಪರಿಹಾರವಾಗಿ ನೀಡಬೇಕು ಅನ್ನೋ ಬಗ್ಗೆ ಕೋರ್ಟ್​ ಆದೇಶ ಹೊರಡಿಸಲಿದೆ ಅಂತ ಬಾಂಬೆ ಹೈಕೋರ್ಟ್​ ಹೇಳಿದೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಬಗ್ಗೆ ಕಾಮೆಂಟ್​ ಮಾಡುವಾಗ ಸಂಯಮ ತೋರಬೇಕು ಅಂತ ಕಂಗನಾ ರಣಾವತ್​ಗೆ ಸೂಚಿಸಲಾಗಿದೆ. ಅಂದ್ಹಾಗೆ ಸೆಪ್ಟೆಂಬರ್​ನಲ್ಲಿ ಮುಂಬೈನ ಪಾಲಿ ಹಿಲ್​​ನಲ್ಲಿದ್ದ ಕಂಗನಾ ರಣಾವತ್ ಅವರ ಕಚೇರಿ ಮತ್ತು ಬಂಗಲೆಯನ್ನ ಬಿಎಂಸಿ ಅಧಿಕಾರಿಗಳು ಕೆಡವಿ ಹಾಕಿದ್ರು. ಈ ಸಂಬಂಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾ, ಆಗಿರುವ ನಷ್ಟಕ್ಕೆ 2 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ರು. ಆದ್ರೆ ಕಂಗನಾ  2 ಕೋಟಿ ಕೇಳೋದ್ರಲ್ಲಿ ಅರ್ಥಾನೇ ಇಲ್ಲ ಅಂತ ಬಿಎಂಸಿ ಕೋರ್ಟ್​ಗೆ ತಿಳಿಸಿತ್ತು. ಇದೀಗ ಕೋರ್ಟ್ ಬಿಎಂಸಿRead More →

masthmagaa.com: ಬಾಲಿವುಡ್‌ ಡ್ರಗ್ಸ್​‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯಿಂದ ಬಂಧಿತರಾಗಿದ್ದ ಹಾಸ್ಯನಟಿ ಭಾರ್ತಿ ಸಿಂಗ್‌ ಹಾಗೂ ಆಕೆಯ ಪತಿ ಹಾರ್ಷ್‌ ಲಿಂಬಾಚಿಯಾಗೆ ಮುಂಬೈ ಕೋರ್ಟ್‌ ಜಾಮೀನು ನೀಡಿದೆ. ನಿನ್ನೆಯಷ್ಟೇ ಕೋರ್ಟ್‌ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿಯನ್ನು ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಬಳಿಕ ಆರೋಪಿಗಳ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ. ಬಾಲಿವುಡ್​ ಡ್ರಗ್ಸ್ ನಂಟು ಆರೋಪದಡಿ ಎನ್​ಸಿಬಿ ಅಧಿಕಾರಿಗಳು ನವೆಂಬರ್ 21ರಂದು ನಟಿ ಭಾರ್ತಿ ಸಿಂಗ್​​ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 80 ಗ್ರಾಂಗೂ ಹೆಚ್ಚು ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ವಿರುದ್ಧ FIR ದಾಖಲಿಸುವಂತೆ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಕಾಸ್ಟಿಂಗ್ ಡೈರೆಕ್ಟರ್ ಸಾಹಿಲ್ ಸೈಯ್ಯದ್, ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕಲಾವಿದರನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸಿದ್ದಾರೆ. ಜೊತೆಗೆ ಎರಡು ಕೋಮುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸಿದ್ದಾರೆ ಅಂತ ಆರೋಪಿಸಿದ್ರು. ಅಲ್ಲದೆ ಕಂಗನಾ ಮಾಡಿದ್ದ ಕೆಲವೊಂದು ಟ್ವೀಟ್​​ಗಳನ್ನು ಕೂಡ ಸಾಕ್ಷಿಯಾಗಿ ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಕಂಗನಾ ರಾಣಾವತ್ ಓರ್ವ ಪ್ರಸಿದ್ಧ ನಟಿಯಾಗಿದ್ದು, ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಅವರ ಟ್ವೀಟ್​ ತುಂಬಾ ಜನರನ್ನು ರೀಚ್ ಆಗುತ್ತೆ ಅಂತ ಸಾಹಿಲ್ ಸಯ್ಯದ್ ಮಾಹಿತಿ ನೀಡಿದ್ರು. ಅರ್ಜಿ ವಿಚಾರಣೆ ನಡೆಸಿದ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್​​ ಕೋರ್ಟ್​​​, ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ವಿರುದ್ಧ ಎಫ್​​​​ಐಆರ್ ದಾಖಲಿಸುವಂತೆ ಬಾಂದ್ರಾ ಪೊಲೀಸರಿಗೆ ಸೂಚನೆ ನೀಡಿದೆ. ಮ್ಯಾಜಿಸ್ಟ್ರೇಟ್ ಜಯದೇವ್ ಘುಲೆRead More →

masthmagaa.com: ಪೇಶಾವರ: ಪಾಕಿಸ್ತಾನದ ಖೈಬರ್-ಪಖ್ತುಂಖ್ವಾದ ಪ್ರಾಂತೀಯ ಸರ್ಕಾರ ಖ್ಯಾತ ಬಾಲಿವುಡ್​​ ನಟರಾದ ರಾಜ್​ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಮನೆಗಳನ್ನು ಖರೀದಿಸಲು ನಿರ್ಧರಿಸಿದೆ. ಶಿಥಿಲಗೊಂಡ ಮತ್ತು ತೆರವುಗೊಳಿಸಬೇಕಾದ ಸ್ಥಿತಿಯಲ್ಲಿರೋ ಈ ಕಟ್ಟಡವನ್ನು ಐತಿಹಾಸಿಕ ಕಟ್ಟಡಗಳ ರೂಪದಲ್ಲಿ ಇರಿಸಲು ಚಿಂತನೆ ನಡೆಸಿದೆ. ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಿದ್ದು, ಪೇಶಾವರ್ ನಗರದ ಹೃದಯಭಾಗದಲ್ಲಿರೋ ಈ ಕಟ್ಟಡವನ್ನು ರಾಷ್ಟ್ರೀಯ ಪರಂಪರೆಯಾಗಿ ಘೋಷಿಸಲು ಪ್ಲಾನ್ ಮಾಡಲಾಗಿದೆ. ಈ ಎರಡೂ ಕಟ್ಟಡಗಳನ್ನು 1918 ಮತ್ತು 1922ರಲ್ಲಿ ಈ ನಟರಿಬ್ಬರ ಅಜ್ಜಂದಿರು ಕಟ್ಟಿಸಿದ್ರು. ಈಗಾಗಲೇ ಕಟ್ಟಡದ ಬೆಲೆ ನಿಗದಿಪಡಿಸುವಂತೆ ಪೇಶಾವರ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸರ್ಕಾರ, ಈ ಜಾಗದಲ್ಲಿ ಭಾರತೀಯ ಚಿತ್ರರಂಗದ ಇಬ್ಬರು ಶ್ರೇಷ್ಠರು ವಿಭಜನೆಗೂ ಮುನ್ನ ಹುಟ್ಟಿ, ಬೆಳೆದಿದ್ದರು ಅಂತ ಹೇಳಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಮುಂಬೈ: ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಿಬಿಐ ತನಿಖೆ ತೀವ್ರಗೊಂಡಿದ್ದು, ಒಂದೊಂದೇ ರಹಸ್ಯಗಳು ಹೊರಬೀಳಲಾರಂಭಿಸಿವೆ. ಈವರೆಗೆ ಮಾದಕ ವಸ್ತುವಿಗೂ ನನಗೂ ಸಂಬಂಧವೇ ಇಲ್ಲ ಎಂದಿದ್ದ ರಿಯಾ ಚಕ್ರಬರ್ತಿ, ಡ್ರಗ್ಸ್ ಪಡೆದಿದ್ದು ಮಾತ್ರವಲ್ಲದೇ ಡ್ರಗ್ಸ್ ಮಾರಾಟ ಕೂಡ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಸಿಬಿಐ ತನಿಖೆ ವೇಳೆ ವಾಟ್ಸಾಪ್​ ಚಾಟ್ ಮೂಲಕ ಈ ಸತ್ಯಾಂಶಗಳು ಹೊರಬೀಳುತ್ತಿವೆ. ಆರಂಭದಿಂದಲೂ ಸುಶಾಂತ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ರಿಯಾಗೆ ಇದ್ರಿಂದ ಸಂಕಷ್ಟ ಮತ್ತಷ್ಟು ಹೆಚ್ಚಬಹುದು. ಈಗಾಗಲೇ ರಿಯಾ ಸಹೋದರ ಶೋವಿಕ್ ಚಕ್ರಬರ್ತಿಯವರನ್ನು ಪೊಲೀಸರು ಬಂಧಿಸಿದ್ದು, ರಿಯಾಗೂ ನಾಳೆ ಎನ್​ಸಿಬಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ನಡುವೆ ಸಿಬಿಐ ಅಧಿಕಾರಿಗಳು ಏಮ್ಸ್ ವೈದ್ಯರ ಜೊತೆಗೆ ಸುಶಾಂತ್ ಸಿಂಗ್ ರಜಪೂತ್​​ರ ಬಾಂದ್ರಾದ ನಿವಾಸಕ್ಕೆ ತೆರಳಿದ್ಧಾರೆ. ಈ ಹಿಂದೆ ಫಾರೆನ್ಸಿಕ್ ಅಧಿಕಾರಿಗಳ ಜೊತೆ ಸೇರಿ ಕ್ರೈಂ ಸೀನ್ ರೀ ಕ್ರಿಯೇಟ್ ಮಾಡಿದ್ದ ಅಧಿಕಾರಿಗಳು, ಇಂದು ಪುನಃ ಬೇರೆ ರೀತಿಯಲ್ಲಿ ಕ್ರೈಂ ಸೀನ್ ರೀಕ್ರಿಯೇಟ್ ಮಾಡಲಿದ್ಧಾರೆ. ಈ ವೇಳೆ ಸುಶಾಂತ್ ಸಹೋದರಿ ಮೀತೂ ಸಿಂಹ, ಸಿದ್ಧಾರ್ಥ್ ಪಿಠಾನಿ, ನೀರಜ್ ಕೂಡRead More →

masthmagaa.com: ಮುಂಬೈ: ಕಂಗನಾ ಮುಂಬೈಗೆ ಬಂದ್ರೆ ಶಿವಸೇನೆಯ ಮಹಿಳಾ ಸದಸ್ಯರು ಕಪಾಳಮೋಕ್ಷ ಮಾಡ್ತಾರೆ ಎಂದಿದ್ದ ಶಿವಸೇನೆ ಶಾಸಕ ಪ್ರತಾಪ್ ಸರ್​​ನಾಯಕ್​​ಗೆ ಸಂಕಷ್ಟ ಎದುರಾದಂತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ನಟಿ ಕಂಗನಾ​​ಗೆ ಪ್ರತಾಪ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಕೂಡಲೇ ಸುಮೋಟೋ ಕೇಸ್ ದಾಖಲಿಸಿ, ಶಾಸಕರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ ಕೈವಾಡವಿದೆ ಅಂತ ಕಂಗನಾ ಆರೋಪಿಸಿದ್ರು. ಇದ್ರ ಬೆನ್ನಲ್ಲೇ ತಿರುಗೇಟು ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಕಂಗನಾ ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕಂಗನಾ ಮುಂಬೈಗೆ ಬಂದ್ರೆ ಗೃಹ ಇಲಾಖೆಯಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ರು. ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಂಗನಾ, ಶಿವಸೇನೆ ನಾಯಕ ನಾನು ಮುಂಬೈಗೆ ಬರಬಾರದು ಅಂತ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಂಬೈ  ಪಾಕ್ ಆಕ್ರಮಿತ ಕಾಶ್ಮೀರದಂತೆ ಯಾಕೆ ಅನ್ನಿಸುತ್ತಿದೆ ಅಂದಿದ್ರು. ಈ ವೇಳೆ ಒಂದು ಹೆಜ್ಜೆ ಮುಂದೆ ಹೋಗಿ ನಾಲಗೆ ಹರಿಬಿಟ್ಟಿದ್ದRead More →

masthmagaa.com: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಸಿಬಿಐ ಅಧಿಕಾರಿಗಳು ನಟಿ ರಿಹಾ ಚಕ್ರಬರ್ತಿಯನ್ನು ಮುಂಬೈನ ಡಿಆರ್​ಡಿಒ ಗೆಸ್ಟ್​ ಹೌಸ್​ನಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಬಿಐ ತಂಡದ ನೇತೃತ್ವ ವಹಿಸಿರುವ ನೂಪರ್ ಪ್ರಸಾದ್ ರಿಹಾಳ ಹೇಳಿಕೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೇ ಕೆಲ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ರಿಹಾ ಚಕ್ರಬರ್ತಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ನನಗೆ ‘ಪುಟ್ಟ ಸುಶಾಂತ್ ಬೇಕು ಅಂತ ಕೇಳಿದ್ದೆ’ ಎಂಬುದರಿಂದ ಹಿಡಿದು ‘ಆತ ಡಿಪ್ರೆಶನ್​ ಒಳಗಾಗುತ್ತಿದ್ದ’ ಎಂಬ ವಿಚಾರದವರೆಗೆ ಹಲವು ವಿಷಯಗಳನ್ನ ಪ್ರಸ್ತಾಪಿಸಿದ್ರು. ಜೊತೆಗೆ ಕರ್ನಾಟಕದ ಕೊಡಗಿನಲ್ಲಿ ಸೆಟಲ್ ಆಗಲು ಜೂನ್​ ಆರಂಭದಿಂದಲೇ ಸುಶಾಂತ್ ತಯಾರಿ ನಡೆಸಿದ್ದ. ಜೂನ್​ 8ರಂದು ನನ್ನನ್ನ ಮನೆಯಿಂದ ಹೊರ ಕಳಿಸಿದ. ನಿರ್ದೇಶಕ ಮಹೇಶ್ ಭಟ್ ನನ್ನ ತಂದೆಯ ರೀತಿ. ಕೆಲ ಮಾಧ್ಯಮಗಳು ಆಧಾರರಹಿತ ಆರೋಪಗಳನ್ನ ಮಾಡುತ್ತಿವೆ ಅಂತ ರಿಹಾ ಚಕ್ರಬರ್ತಿ ಹೇಳಿದ್ದಾರೆ. ಸಂದರ್ಶನದ ಬೆನ್ನಲ್ಲೇ #JusticeForRhea ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್ ಆಗ್ತಿದೆ. ರಿಹಾ ಚಕ್ರಬರ್ತಿ ಸಂದರ್ಶನ ನೀಡಿದ ಕೆಲ ಹೊತ್ತಿನಲ್ಲೇ ಪತ್ರಕರ್ತ ಅರ್ನಬ್ ಗೋಸ್ವಾಮಿಯ ಕಾರ್ಯಕ್ರಮದಲ್ಲಿRead More →

masthmagaa.com: ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್​ ಅವರದ್ದು ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಅಂತ ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ ಹೇಳಿದ್ದಾರೆ. ಹರಿಯಾಣದ ಫರಿದಾಬಾದ್​ನಲ್ಲಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಮತ್ತು ಸಹೋದರಿ ರಾಣಿ ಸಿಂಗ್ ಭೇಟಿಯಾದ ಬಳಿಕ ಸಚಿವರು ಈ ಹೇಳಿಕೆ ಕೊಟ್ಟಿದ್ದಾರೆ. ‘ಸುಶಾಂತ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದಲ್ಲ. ಅದೊಂದು ಕೊಲೆ ಅನ್ನೋದು ನನ್ನ ಅನಿಸಿಕೆ. ಅವರ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ. ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಡೆಯುತ್ತಿರುವ ಸಿಬಿಐ ತನಿಖೆ ಬಗ್ಗೆ ಕುಟುಂಬಸ್ಥರು ತೃಪ್ತರಾಗಿದ್ದಾರೆ’ ಅಂತ ರಾಮ್​ದಾಸ್ ಅಠಾವಳೆ ಹೇಳಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಮೋದಿ ಸಂಪುಟದ ಸಚಿವರೊಬ್ಬರು ಈ ರೀತಿ ಹೇಳಿಕೆ ಕೊಟ್ಟಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸದ್ಯ ಕೇಂದ್ರದ ಮೂರು ತನಿಖಾ ಸಂಸ್ಥೆಗಳಾದ CBI, ED ಮತ್ತು NCB ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಸುಶಾಂತ್ ಅವರ ಗೆಳತಿ ರಿಹಾ ಚಕ್ರಬರ್ತಿಗೆ ಡ್ರಗ್ ಡೀಲರ್​ಗಳ ಜೊತೆ ಸಂಪರ್ಕ ಇತ್ತು ಎಂಬ ವಿಚಾರ ಬಾಲಿವುಡ್​ನಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ. ಇದರ ಬೆನ್ನಲ್ಲೇ ಸುಶಾಂತ್ ಪ್ರಕರಣದಲ್ಲಿ ಡ್ರಗ್​ ವಿಚಾರ ಕುರಿತು ತನಿಖೆ ನಡೆಸಲು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಅಧಿಕಾರಿಗಳ ತಂಡ ದೆಹಲಿಯಿಂದ ಮುಂಬೈಗೆ ಹೊರಟಿದೆ. ಮುಂಬೈನಲ್ಲಿರುವ ಡ್ರಗ್ ಪೆಡ್ಲರ್​ಗಳ ಜಾಲದ ಕುರಿತು ತನಿಖೆ ಶುರು ಮಾಡಲು ಮುಂಬೈನಲ್ಲಿರುವ ಎನ್​ಸಿಬಿ ತಂಡಕ್ಕೆ ಈಗಾಗಲೇ ಸೂಚಿಸಲಾಗಿದೆ. ಜೊತೆಗೆ ಬಾಲಿವುಡ್​​ನಲ್ಲಿ ಆ್ಯಕ್ಟಿವ್ ಆಗಿರುವ ಡ್ರಗ್ ಜಾಲದ ಮೇಲೂ ಕಣ್ಣಿಡುವಂತೆ ಸೂಚಿಸಲಾಗಿದೆ ಅಂತ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ ತಿಳಿಸಿದೆ. ಶೀಘ್ರದಲ್ಲೇ ರಿಹಾ ಚಕ್ರಬರ್ತಿಗೆ NCB ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಇನ್ನು ರಿಹಾ ಚಕ್ರಬರ್ತಿಗೆ ಡ್ರಗ್​ ಡೀಲರ್​ಗಳ ಜೊತೆ ಸಂಪರ್ಕ ಇತ್ತು ಎಂಬ ವಿಚಾರ ಬೆಳಕಿಗೆ ಬರ್ತಿದ್ದಂತೇ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ‘ರಿಹಾ ಚಕ್ರಬರ್ತಿ ಕೊಲೆಗಾತಿ. ಆಕೆ ನನ್ನ ಮಗನಿಗೆRead More →

masthmagaa.com: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಗರ್ಲ್​ ಫ್ರೆಂಡ್ ಆಗಿದ್ದ ರಿಹಾ ಚಕ್ರಬರ್ತಿ ವಿರುದ್ಧ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ದೂರು ದಾಖಲಿಸಿದ್ದಾರೆ. ಇದರಲ್ಲಿ ರಿಹಾ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಲಾಗಿದ್ದು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಆಕೆಯೇ ಕಾರಣ ಅಂತ ಆರೋಪಿಸಲಾಗಿದೆ. ಬಿಹಾರದ ಪಾಟ್ನಾದ ರಾಜೀವ್​ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್​ಐಆರ್ ದಾಖಲಾಗಿದೆ. ಎಫ್​ಐಆರ್​ನಲ್ಲಿ ಏನಿದೆ..? ಸುಶಾಂತ್ ಸಿಂಗ್ ರಜಪೂತ್​ ಅವರ ಡೇ ಟು ಡೇ ಲೈಫ್​ನಲ್ಲಿ ರಿಹಾ ಚಕ್ರಬರ್ತಿ ಮತ್ತು ಆಕೆಯ ಕುಟುಂಬಸ್ಥರು ತುಂಬಾ ಇಂಟರ್​ಫಿಯರ್ ಮಾಡುತ್ತಿದ್ದರು. ಆತನನ್ನು ಭೇಟಿಯಾಗಲು ನಮಗೆ ಬಿಡುತ್ತಿರಲಿಲ್ಲ. ಆತ​ ವಾಸವಿದ್ದ ಮನೆಯಲ್ಲಿ ದೆವ್ವ, ಭೂತ ಇದೆ ಅಂತ ಆ ಮನೆಯನ್ನೇ ಖಾಲಿ ಮಾಡಿಸಿದ್ರು. ಬೇಕು ಅಂತಾನೆ ಸುಶಾಂತ್​ಗೆ ಹೆಚ್ಚು ಹೆಚ್ಚು ಔಷಧ, ಮಾತ್ರೆಗಳನ್ನ ನೀಡುತ್ತಿದ್ದಳು. ಆತನ ಜೊತೆಗಿದ್ದ ಸಿಬ್ಬಂದಿಯನ್ನ ಬದಲಿಸಿ ತನಗಿಷ್ಟ ಬಂದವರನ್ನ ನೇಮಿಸಿದ್ದಳು. ಅಷ್ಟೇ ಅಲ್ಲ ಆತನ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿದ್ದ ಆಕೆ ಬ್ಯಾಂಕ್ ಅಕೌಂಟ್​ ಮೇಲೆRead More →