masthmagaa.com: ಹಡಗಿನಲ್ಲಿ ಮಾದಕ ಪಾರ್ಟಿ ಪ್ರಕರಣ ಸಂಬಂಧ ಅರೆಸ್ಟ್ ಆಗಿರೋ ಶಾರೂಖ್ ಖಾನ್ ಮಗ ಆರ್ಯನ್ ಖಾನ್​​ಗೆ ಜಾಮೀನು ನೀಡಲು ಮುಂಬೈ ಕೋರ್ಟ್ ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎನ್​ಸಿಬಿ, ಆರ್ಯನ್ ಖಾನ್ ಮತ್ತು ನಟಿಯೊಬ್ಬರ ನಡುವಿನ ಮಾದಕ ವಸ್ತುಗಳಿಗೆ ಸಂಬಂಧಿಸಿದ ವಾಟ್ಸಾಪ್ ಚಾಟ್​​ನ್ನು ಕೋರ್ಟ್​​​ಗೆ ಒಪ್ಪಿಸಿದ್ದೀವಿ ಅಂತ ಹೇಳಿದ್ದಾರೆ. ಅಕ್ಟೋಬರ್ 8ರಂದು ಆರ್ಯನ್ ಖಾನ್ ಮತ್ತು ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್​​ಗೆ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಸದ್ಯ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಅಕ್ಟೋಬರ್ 3ರಂದು ಈ ಪ್ರಕರಣ ಸಂಬಂಧ ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಸೇರಿದಂತೆ ಐವರನ್ನು ಅರೆಸ್ಟ್ ಮಾಡಿದ್ರು. ಇದೀಗ ಆರ್ಯನ್ ಪರ ವಕೀಲರು ಬಾಂಬೆ ಹೈಕೋರ್ಟ್​ ಮೊರೆ ಹೋಗಲು ನಿರ್ಧರಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಲಖೀಂಪುರ್​ಖೇರಿಯಲ್ಲಿ ನಡೆದ ಹಿಂಸಾಚಾರ ಖಂಡನೀಯ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ಧಾರೆ. ಅಮೆರಿಕ ಪ್ರವಾಸದಲ್ಲಿರೋ ನಿರ್ಮಲಾ ಸೀತಾರಾಮನ್ ಹಾರ್ವರ್ಡ್​ ಕೆನಡಿ ಸ್ಕೂಲ್​ನಲ್ಲಿ ಲಖೀಂಪುರ್​ಖೇರಿ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ, ಹಿರಿಯ ಸಚಿವರು ಸೇರಿದಂತೆ ಎಲ್ಲರೂ ಯಾಕೆ ಮೌನವಾಗಿದ್ದೀರಿ ಅಂತ ಪ್ರಶ್ನಿಸಲಾಯ್ತು. ಅದಕ್ಕೆ ಉತ್ತರರಿಸಿದ ನಿರ್ಮಲಾ ಸೀತಾರಾಮನ್​​, ಲಖೀಂಪುರ್​​ಖೇರಿ ಹಿಂಸಾಚಾರ ನಿಜಕ್ಕೂ ಖಂಡನೀಯ. ಆದ್ರೆ ಕೆಲ ರಾಜಕೀಯ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ.. ದೇಶದ ವಿವಿಧ ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೀತಾ ಇವೆ. ಆದ್ರೆ ಬಿಜೆಪಿ ಅಧಿಕಾರದಲ್ಲಿರೋ ರಾಜ್ಯದಲ್ಲಿ ಮಾತ್ರ ಈ ವಿಚಾರವನ್ನು ದೊಡ್ಡದು ಮಾಡಲಾಗ್ತಿದೆ ಅಂದ್ರು. ಇನ್ನು ಲಖೀಂಪುರ್​ಖೇರಿ ಹಿಂಸಾಚಾರ ಸಂಬಂಧ ಆಶಿಶ್ ಮಿಶ್ರಾ ಸ್ನೇಹಿತ ಅಂಕಿತ್ ದಾಸ್​ ವಿಶೇಷ ತನಿಖಾ ದಳದ ಮುಂದೆ ವಿಚಾರಣೆಗೆ ಹಾಜರಾದ್ರು. ಅಂದಹಾಗೆ ಅಂಕಿತ್ ದಾಸ್ ಮಾಜಿ ಸಚಿವ ಅಖಿಲೇಶ್ ದಾಸ್​​ ಅವರ ಅಳಿಯ. ರೈತರಿಗೆ ಡಿಕ್ಕಿಯಾಗಿ ನಾಲ್ವರ ಸಾವಿಗೆ ಕಾರಣವಾದ ಕಾರು ಈತನಿಗೇ ಸೇರಿದ್ದು ಅಂತ ಕೂಡ ಹೇಳಲಾಗ್ತಿದೆ. ಇವತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿRead More →

masthmagaa.com: ನೀಲಿ ದೃಶ್ಯಗಳ ತಯಾರಿಕೆಯ ಆರೋಪಿಗಳಾ ರಾಜ್ ಕುಂದ್ರಾ ಹಾಗೂ ರ್ಯಾನ್ ಥೋರ್ಪೆ ಜಾಮೀನು ಅರ್ಜಿಯನ್ನ ಮುಂಬೈನ ನ್ಯಾಯಾಲಯ ರಿಜೆಕ್ಟ್ ಮಾಡಿದೆ. ಇನ್ನು ಪ್ರಕರಣದಲ್ಲಿ ರಾಜ್ ಕುಂದ್ರಾ ಕಂಪನಿಯ ನಾಲ್ವರು ನಿರ್ಮಾಪಕರುಗಳ ಮೇಲೂ ಕೇಸ್ ಹಾಕಲಾಗಿದೆ. ನಟಿ ಗೆಹನಾ ವಸಿಷ್ಟ್ ರನ್ನ ಕೂಡ ಆರೋಪಿ ಮಾಡಲಾಗಿದೆ. -masthmagaa.com Share on: WhatsAppContact Us for AdvertisementRead More →