masthmagaa.com: ಡ್ರಗ್ಸ್​ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬಾಲಿವುಡ್ ಹಾಸ್ಯ ನಟಿ ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ಹಾರ್ಷ್​ ಲಿಂಬಾಚಿಯಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮುಂಬೈ ಕೋರ್ಟ್​ ಆದೇಶ ನೀಡಿದೆ. ಭಾರ್ತಿ ಸಿಂಗ್​​ಗೆ ಸೇರಿದ ಪ್ರೊಡಕ್ಷನ್ ಕಚೇರಿ ಮತ್ತು ಮನೆ ಮೇಲೆ ಶನಿವಾರ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 86.5 ಗ್ರಾಂನಷ್ಟು ಗಾಂಜಾ ಸಿಕ್ಕಿತ್ತು. ಈ ಹಿನ್ನೆಲೆ ಭಾರ್ತಿ ಸಿಂಗ್​ ಅವರನ್ನ ಶನಿವಾರವೇ ಬಂಧಿಸಿದ್ದ ಎನ್​ಸಿಬಿ, ಭಾನುವಾರ ಬೆಳಗ್ಗೆ ಹಾರ್ಷ್​ ಲಿಂಬಾಚಿಯಾ ಅವರನ್ನ ಅರೆಸ್ಟ್​ ಮಾಡಿತ್ತು. ಇದೀಗ ಇಬ್ಬರಿಗೂ ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಂದ್ಹಾಗೆ 1 ಕೆಜಿಯಷ್ಟು ಗಾಂಜಾವನ್ನು ಸಣ್ಣ ಪ್ರಮಾಣದ್ದು ಅಂತ ಪರಿಗಣಿಸಲಾಗುತ್ತದೆ. ಆದರೂ ಇಷ್ಟು ಪ್ರಮಾಣದ ಗಾಂಜಾ ಇಟ್ಟುಕೊಂಡರೆ 6 ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. 1 ಕೆಜಿಯಿಂದ 20 ಕೆಜಿಯಷ್ಟು ಗಾಂಜಾ ಇಟ್ಟುಕೊಂಡರೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದು. 20 ಕೆಜಿ ಅಥವಾ ಅದಕ್ಕಿಂತ ಹೆಚ್ಚುRead More →

masthmagaa.com: ಡ್ರಗ್ಸ್ ಪ್ರಕರಣ ಸಂಬಂಧ ಮಾಜಿ ಸಚಿವ ಮತ್ತು ಹಾವೇರಿ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ​ ಸೇರಿ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಸುಜಯ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆತನಿಂದ ಅರ್ಧ ಕೆಜಿಯಷ್ಟು ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮತ್ತು ಸುನೇಶ್ ಎಂಬುವರು ತಲೆಮರೆಸಿಕೊಂಡಿದ್ದರು. ಅವರಿಬ್ಬರ ಬಂಧನಕ್ಕಾಗಿ ಸಿಸಿಬಿ ತಂಡ ಗೋವಾಕ್ಕೆ ತೆರಳಿತ್ತು‌. ಅಲ್ಲಿಯೇ ಅವರಿಬ್ಬರನ್ನು ಬಂಧಿಸಲಾಗಿದೆ‌. ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ಸಹಕಾರ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಕೂಡ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ದರ್ಶನ್ ಲಮಾಣಿ ತಂದೆ ರುದ್ರಪ್ಪ ಲಮಾಣಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರೋ ರುದ್ರಪ್ಪ ಲಮಾಣಿ, ‘ನನ್ನ ಪುತ್ರ ಅರೆಸ್ಟ್ ಆಗಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಬೆಂಗಳೂರಿಗೆ ಹೋಗ್ತೀನಿ ಅಂತ ಬಂದಿದ್ದ. ಬಳಿಕ ಫ್ರೆಂಡ್ಸ್ ಜೊತೆ ಗೋವಾಕ್ಕೆ ಹೋಗಿದ್ದಾನೆ ಅನ್ನೋದುRead More →

masthmagaa.com: ಬಾಲಿವುಡ್​ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾ ಅವರ ಪತ್ನಿ ಶಬಾನಾ ಸಯೀದ್​ ಅವರನ್ನ ಎನ್​ಸಿಬಿ (Narcotics Control Bureau) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುಂಬೈನ ಜುಹುನಲ್ಲಿದ್ದಅವರ ನಿವಾಸದ ಮೇಲೆ ಇವತ್ತು ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ 10 ಗ್ರಾಂನಷ್ಟು ಗಾಂಜಾ ಸಿಕ್ಕಿದೆ. ಈ ಹಿನ್ನೆಲೆ ಎನ್​ಡಿಪಿಎಸ್ (Narcotic Drugs and Psychotropic Substances)​ ಕಾಯ್ದೆ ಅಡಿಯಲ್ಲಿ ಶಬಾನಾ ಸಯೀದ್​ರನ್ನ ಬಂಧಿಸಲಾಗಿದೆ ಅಂತ ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾಗೆ ಸಮನ್ಸ್​ ನೀಡಲಾಗಿದೆ. ಫಿರೋಜ್ ನಾಡಿಯದ್​ವಾಲಾ ಅವರು ಬಾಲಿವುಡ್​ನ ‘ಹೇರಾ ಫೇರಿ-3’, ‘ಫಿರ್ ಹೇರಾ ಫೇರಿ’, ‘ವೆಲ್​ಕಮ್​’, ‘ವೆಲ್​ಕಮ್ ಬ್ಯಾಕ್​’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಕಡೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ಮಂಗಳವಾರ (ನವೆಂಬರ್ 10) ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಹುಡುಕಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ನಿನ್ನೆ ಮುಂಬೈಗೆ ಹೋಗಿದ್ದರು. ಮುಂಬೈನಲ್ಲಿರುವ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು. ಅಂದ್ಹಾಗೆ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಆಳ್ವ ಒಬೆರಾಯ್ ಅವರು ಆದಿತ್ಯ ಆಳ್ವ ಅವರ ಸಹೋದರಿ. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಿಯಾಂಕಾ ಆಳ್ವಗೂ ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಡ್ರಗ್​ ಪ್ರಕರಣದಲ್ಲಿ ವಿವೇಕ್ ಒಬೆರಾಯ್ ಮತ್ತು ಸಂದೀಪ್​ ಸಿಂಗ್​ನನ್ನು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಮುಂಬೈಗೆ ಬಂದಿದ್ದರು. ಆದ್ರೆ ಎನ್​ಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅವರಿಗೆ ಮೇಲಿನಿಂದ ಒತ್ತಡ ಹೇರಲಾಗುತ್ತಿದೆ. ಡ್ರಗ್​ ಕೇಸ್​ನಲ್ಲಿ ವಿವೇಕ್ ಒಬೆರಾಯ್ ಲಿಂಕ್​ ಬಗ್ಗೆ ಎನ್​ಸಿಬಿ ತನಿಖೆ ನಡೆಸಬೇಕು ಅಂತ ನಾವು ಮನವಿ ಮಾಡುತ್ತೇವೆ. ಒಂದ್ವೇಳೆ ಅವರಿಗೆ ಆಗದಿದ್ದರೆ ಮುಂಬೈ ಪೊಲೀಸರೇ ತನಿಖೆ ನಡೆಸುತ್ತಾರೆ’ ಅಂತ ಅನಿಲ್Read More →

masthmagaa.com: ಬೆಂಗಳೂರು: ಕೇಂದ್ರೀಯ ಅಪರಾಧ ವಿಭಾಗ (CCB) ಪೊಲೀಸರ ಜೊತೆಗೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ (ISD) ಸ್ಯಾಂಡಲ್​ವುಡ್​ ನಟ ಮತ್ತು ಲೂಸ್ ಮಾದ ಖ್ಯಾತಿಯ ಯೋಗೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗಿ, ‘ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು. ರಾಗಿಣಿ ಬಗ್ಗೆಯಾಗಲೀ ಅಥಾ ಬೇರೆ ಯಾರ ಬಗ್ಗೆಯೂ ನನ್ನ ಬಳಿ ಏನೂ ಕೇಳಿಲ್ಲ. ರಾಗಿಣಿ ಮತ್ತು ನನ್ನ ಜೊತೆ ಯಾವುದೇ ಸಂಬಂಧವಿಲ್ಲ. 2013ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದು ಬಿಟ್ಟರೆ ಅದಾದ ಬಳಿಕ ಒಂದೇ ಒಂದು ಮೆಸೇಜ್ ಮಾಡಿಲ್ಲ, ಕಾಲ್ ಮಾಡಿಲ್ಲ. ದಯವಿಟ್ಟು ರಾಗಿಣಿ ಜೊತೆ ನನ್ನ ಹೆಸರನ್ನು ಸೇರಿಸಬೇಡಿ. ನನಗೆ ಮದುವೆಯಾಗಿದೆ, ಒಂದು ವರ್ಷದ ಮಗು ಇದೆ’ ಅಂತ ಹೇಳಿದ್ದಾರೆ. ನಾನು ಪಾರ್ಟಿ ಮಾಡಿಲ್ಲ ಅಂತ ಹೇಳಲ್ಲ. ಮಾಡಿದ್ದೀನಿ ಅದು 2012-13ರಲ್ಲಿ ಅಷ್ಟೇ. ನಾನು ಸಿಗರೆಟ್​ ಸೇದ್ತೀನಿ, ಡ್ರಿಂಕ್ಸ್ ಮಾಡ್ತೀನಿ, ಗುಟ್ಕಾ ಹಾಕ್ತೀನಿ. ಇದನ್ನು ಬಿಟ್ಟು ಬೇರೆನೂ ಅಭ್ಯಾಸ ಇಲ್ಲ. ಶ್ರೀಲಂಕಾಗೆ ರಾಜ್​ಕಪ್​ ಆಡಲುRead More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರೋ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ವಿಚಾರದಲ್ಲಿ ಮತ್ತೆ ಹಿನ್ನಡೆಯಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್ ವಿಶೇಷ​ ಕೋರ್ಟ್​ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಇದರೊಂದಿಗೆ ಬೇಲ್ ಪಡೆದು ಜೈಲಿನಿಂದ ಹೊರಬರಬೇಕು ಅಂತ ಕಾಯ್ತಿದ್ದ ರಾಗಿಣಿ ಮತ್ತು ಸಂಜನಾ ಮತ್ತಷ್ಟು ದಿನ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯಲಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಂಗಳೂರು: ರಾಜ್ಯದಲ್ಲಿ ಡ್ರಗ್ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪಬ್​ಗಳನ್ನು ಮುಚ್ಚಿಸುವಂತೆ ಅಲ್ಲಿನ ಪೊಲೀಸ್ ಕಮಿಷನರ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್​ ಸೂಚಿಸಿದ್ದಾರೆ ಅಂತ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಂದುವರೆದು ಸರ್ಕಾರದ ಕೈಯಲ್ಲಿ ಆಗದಿದ್ರೆ ಯುವಕರೇ ಕೋರ್ಟ್​ಗೆ ಹೋಗಿ ಪಬ್​ಗಳನ್ನು ಬಂದ್ ಮಾಡಿ ಅಂತ ಕಟೀಲ್ ಹೇಳಿದ್ದಾರೆ. ‘ನಮ್ಮ ಕಾಲದಲ್ಲಿ ಪಬ್​ಗಳ ಕಾರ್ಯಾಚರಣೆಯನ್ನು ನಾವು ನಿಲ್ಲಿಸಿದ್ದೆವು. ಈಗ ನಮ್ಮ ಜಿಲ್ಲೆಯಲ್ಲಿರುವ (ದಕ್ಷಿಣ ಕನ್ನಡ) ಎಲ್ಲಾ ಪಬ್​ಗಳನ್ನು ಮುಚ್ಚಬೇಕೆಂದು ಕಮಿಷನರ್​ಗೆ ಹೇಳಿದ್ದೇನೆ. ಈ ಪಬ್​ಗಳು ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿವೆ. ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯದ ಮೂಲಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಯುವ ಮೋರ್ಚಾಗೆ ತಿಳಿಸುತ್ತೇನೆ’ ಅಂತ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ. -masthmagaa.com   Share on: WhatsAppContact Us for AdvertisementRead More →

masthmagaa.com: ಮಾದಕ ವಸ್ತು ದಂಧೆ ಪ್ರಕರಣದ ಆರೋಪಿ ನಂಬರ್ 6 ಆದಿತ್ಯ ಆಳ್ವಗೆ ಸಿಸಿಬಿ ಶಾಕ್ ನೀಡಿದೆ. ಆದಿತ್ಯ ಆಳ್ವಗೆ ಸೇರಿದ ಬೆಂಗಳೂರಿನ ಹೆಬ್ಬಾಳದಲ್ಲಿರುವ ‘ಹೌಸ್ ಆಫ್ ಲೈಫ್’ ರೆಸಾರ್ಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೋರ್ಟ್​ನಿಂದ ಸರ್ಚ್​ ವಾರಂಟ್ ಪಡೆದು ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ. ಈ ವೇಳೆ ರೆಸಾರ್ಟ್​ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ ಅಂತ ವರದಿಯಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್‌ಗಳಾದ ಅಂಜುಮಾಲಾ ನಾಯಕ್, ಹರೀಶ್, ಪುನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ರೆಸಾರ್ಟ್‌ನಲ್ಲಿ ಕೆಲಸದವರು ಮಾತ್ರ ಇದ್ದರು. ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಆಳ್ವ ಸದ್ಯ ತಲೆಮರೆಸಿಕೊಂಡಿದ್ದಾನೆ. ಆದ್ರೆ ಮ್ಯಾನೇಜರ್ ರಾಮದಾಸ್‌ನನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್​ ಪ್ರಕರಣದಲ್ಲಿ ‘ಈ ವಾರ ಮಹತ್ವದ್ದು’ ಅಂತ ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆದಿತ್ಯ ಆಳ್ವಗೆ ಸೇರಿದ ರೆಸಾರ್ಟ್​ನಲ್ಲಿ ಸಿಸಿಬಿ ಪೊಲೀಸರು ಶೋಧಕಾರ್ಯ ನಡೆಸುತ್ತಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. -masthmagaa.com Share on:Read More →

masthmagaa.com: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಿಸಿದಂತೆ ನಾನು ಸಂಜನಾ ಜೊತೆ ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಅಂತ ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪ್ರಶಾಂತ್ ಸಂಬರಗಿ ಕೌಂಟರ್ ಕೊಟ್ಟಿದ್ದಾರೆ. ಶ್ರೀಲಂಕಾಗೆ ಜಮೀರ್ ಅಹ್ಮದ್ ಖಾನ್ ಹೋಗಿಲ್ಲ ಅಂದ್ರೆ ತಮ್ಮ ಪಾಸ್​ಪೋರ್ಟ್​ನ ಪ್ರತಿಯನ್ನು ಮಾಧ್ಯಮಗಳ ಮುಂದೆ ತೋರಿಸಲಿ ಅಂತ ಚಾಲೆಂಜ್ ಹಾಕಿದ್ದಾರೆ. ಪ್ರಶಾಂತ್ ಸಂಬರಗಿ ಹೇಳಿದ್ದೇನು..? 2019ರ ಜೂನ್ 8ರಂದು ನೀವು (ಜಮೀರ್ ಅಹ್ಮದ್ ಖಾನ್) ಶ್ರೀಲಂಕಾದ ಕೊಲೊಂಬೋದಲ್ಲಿರುವ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೀರಾ..? ಇದಕ್ಕೆ ಹೌದು ಅಥವಾ ಇಲ್ಲ ಅಂತ ಉತ್ತರ ಕೊಡಿ. ಗ್ಯಾಂಬ್ಲಿಂಗ್​ ಬಗ್ಗೆ ಕರ್ನಾಟಕದ ಯುವ ಜನತೆಗೆ ನೀವು ನೀಡುವ ಸಂದೇಶ ಏನು..? ಗ್ಯಾಂಬ್ಲಿಂಗ್ ಬಗ್ಗೆ ನಿಮ್ಮ ಪಕ್ಷದ ನಿಲುವೇನು..? ಅಂತ ಟ್ವೀಟ್ ಮೂಲಕ ಅವರನ್ನು ಕೇಳಿದ್ದೆ. ಆದ್ರೆ ನನ್ನ ಟ್ವೀಟ್ ಅನ್ನು ತಿರುಚಿ ನನ್ನ ಮೇಲೆ ಕಂಪ್ಲೇಂಟ್ ಕೊಡಲಾಗಿದೆ. ಜನರ ದಾರಿಯನ್ನು ತಪ್ಪಿಸಲಾಗ್ತಿದೆ. ಜಮೀರ್ ಅಹ್ಮದ್ ಖಾನ್ ಸಂಜನಾ ಜೊತೆ ಹೋಗಿದ್ದರೋ, ಇಲ್ವೋ ಅಂತRead More →

masthmagaa.com: ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಯನ್ನು ಅರೆಸ್ಟ್ ಮಾಡಿದ್ದಾರೆ. ಇವತ್ತು ಬೆಳಗ್ಗೆ 6.30ರ ಸುಮಾರಿಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ಮೊದಲು ದಾಳಿ ನಡೆಸಿದ್ದರು. ಮನೆಯಲ್ಲಿ ನಾಲ್ಕೈದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಚಾಮರಾಜಪೇಟೆಯ ಕಚೇರಿಯಲ್ಲಿ ಇನ್ಸ್​ಪೆಕ್ಟರ್​ ಅಂಜುಮಾಲಾ ನಾಯಕ್​, ಡಿಸಿಪಿ ರವಿಕುಮಾರ್ ಮತ್ತು ಎಸಿಪಿ ಗೌತಮ್ ವಿಚಾರಣೆಗೆ ಒಳಪಡಿಸಿದ್ದರು. ಬೆಳಗ್ಗೆ 11.30ರಿಂದ ಸಂಜೆ 6.30ರವರೆಗೆ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಇದೀಗ ರಾಗಿಣಿ ದ್ವಿವೇದಿಯನ್ನು ಅರೆಸ್ಟ್ ಮಾಡಿದ್ದಾರೆ. ಅಂದ್ಹಾಗೆ ಡ್ರಗ್​​ ಮಾಫಿಯಾಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೆಪ್ಟೆಂಬರ್ 2ರಂದು ರಾಗಿಣಿಗೆ ನೋಟಿಸ್​ ನೀಡಿದ್ದರು. ಆದ್ರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬದಲಾಗಿ ತಮ್ಮ ವಕೀಲರನ್ನು ಕಳಿಸಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಜೊತೆಗೆ ಸೆಪ್ಟೆಂಬರ್ 7ರಂದು ವಿಚಾರಣೆಗೆ ಹಾಜರಾಗುತ್ತೇನೆ ಅಂತ ಟ್ವೀಟ್ ಮಾಡಿ ತಿಳಿಸಿದ್ದರು.Read More →