masthmagaa.com: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಪಕ್ಷದ ಮುಖಂಡ ವಿ.ಎಸ್. ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ನಡುವೆ ನಡೆದ ಸಂಭಾಷಣೆಯ ತುಣುಕು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸುದ್ದಿಗೋಷ್ಠಿ ನಡೆಸೋವಾಗ ಮೈಕ್ ಆಫ್​ ಆಗಿದೆ ಅನ್ಕೊಂಡೋ ಅಥವಾ ಮೈಕ್​ನಲ್ಲಿ ಕೇಳಿಸಲ್ಲ ಅನ್ಕೊಂಡೋ ಉಗ್ರಪ್ಪ ಮತ್ತು ಸಲೀಂ ಗುಸುಗುಸು ಮಾತಾಡಿಕೊಂಡ ಮಾತುಗಳು ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಇವರ ಸಂಭಾಷಣೆಯಲ್ಲಿ ಪರ್ಸೆಂಟೇಜ್​, ​ಡಿಕೆ ಹೆಸರು ಹಾಗೂ ಇತರ ಮೂವರ ಹೆಸರು ಬರುತ್ತೆ. ಎಂ.ಎ. ಸಲೀಂ ಮೊದಲು ಮಾತನಾಡಿ, 6ರಿಂದ 8 ಪರ್ಸೆಂಟ್​ ಇತ್ತು ಸಾರ್​. ಅದನ್ನ 12 ಪರ್ಸೆಂಟ್ ಮಾಡಿಸಿದ್ದಾರೆ. ಇದರಲ್ಲಿ ಡಿಕೆದು ಅಡ್ಜಸ್ಟ್​ಮೆಂಟ್​ ಇದೆ. ಉಪ್ಪಾರ್, ಜಿ.ಶಂಕರ್, ಹನುಮಂತಪ್ಪ ಎಲ್ಲಾ ಇದ್ದಾರೆ. ಇದು ದೊಡ್ಡ ಸ್ಕ್ಯಾಂಡಲ್​. ಕೆದಕುತ್ತಾ ಹೋದ್ರೆ ಇವರದ್ದು ಹೊರಗೆ ಬರುತ್ತೆ. ನಿಮಗೆ ಗೊತ್ತಲಾ ಸಾರ್​, ಈ ಮುಳಗುಂದನೇ 50ರಿಂದ 100 ಕೋಟಿ ಮಾಡಿಕೊಂಡಿದ್ದಾನೆ. ಈ ಮುಳಗುಂದ ಬರೀ ಕಲೆಕ್ಷನ್ ಗಿರಾಕಿ. ಅವನೇ ಇಷ್ಟು ಮಾಡಿಕೊಂಡಿದ್ದಾನೆ. ಇನ್ನು ಈRead More →

masthmagaa.com: ನಂಗೆ ನೀವು ಬೇಗ ಮದ್ವೆ ಮಾಡ್ದೇ ಇದ್ರೆ ಟವರ್‌ ಇಂದ ಹಾರಿ ಆತ್ಮ ಹತ್ಯೆ ಮಾಡಿಕೊಳ್ತೀನಿ, ಅಂತ 23 ವರ್ಷದ ಚಿರಂಜೀವಿ ಅನ್ನೋ ಯುವಕ, ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿಗೆ ಈಗಾಗಲೇ ಹುಡುಗಿ ಸೆಟ್ಟ್‌ ಆಗಿದ್ದಾಳೆ. ಆದ್ರೆ ಮದ್ವೆನ ಚಿರಂಜೀವಿಯ ಅಣ್ಣನ ಮದ್ವೆ ಆದ್ಮೇಲೆ ಮಾಡೋದಾಗಿ ಮನೆಯಲ್ಲಿ ಹೇಳಿದ್ದಾರೆ. ಇದ್ರಿಂದ ಕೋಪಗೊಂಡ ಚಿರಂಜೀವಿ ಕುಡಿದ ಅಮಲಲ್ಲಿ ಟವರ್‌ ಹತ್ತಿದ್ದಾನೆ. ನಂತ್ರ ಪೊಲೀಸರು, ಹುಡುಗಿಯ ಅಣ್ಣಾ ಎಲ್ರೂ ಚಿರಂಜೀವಿಯ ಮನ ಒಲಿಸಿದ ನಂತ್ರ, ಕೆಳಗಿಳಿದ ಮೇಲೆ, ನಂಗ್ಯಾರು ಹೊಡಿಬಾರ್ದು ಅಂತ ಷರತ್ತು ಹಾಕಿ ಚಿರಂಜೀವಿ ಕೆಳಗಿಳ್ದಿದ್ದಾನೆ. -masthmagaa.com Share on: WhatsAppContact Us for AdvertisementRead More →