masthmagaa.com: ಜಾಗತಿಕ ಪಿಡುಗಾಗಿರೋ ಕೊರೋನಾ ವೈರಸ್​ಗೆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೆ ಇದುವರೆಗೆ 979 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 6 ಜನ ಮೃತಪಟ್ಟಿದ್ದು, 186 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಗುಜರಾತ್​ನಲ್ಲಿ 4, ಕರ್ನಾಟಕದಲ್ಲಿ 3, ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಕೊರೋನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 258ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.  ಶುಕ್ರವಾರ ಒಂದೇ ದಿನ 50 ಹೊಸ ಪ್ರಕರಣಗಳು ದೃಢಪಟ್ಟಿತ್ತು. ಶನಿವಾರ ಬೆಳಗ್ಗೆ 9 ಗಂಟೆವರೆಗೆ ಮತ್ತೆ 35 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 250ರ ಗಡಿ ದಾಟಿದೆ. ಈ ಪೈಕಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಪಂಜಾಬ್​ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 258 ಜನ ಕೊರೋನಾ ಸೋಂಕಿತರಲ್ಲಿ 219 ಮಂದಿ ಭಾರತೀಯರಾಗಿದ್ದು, 39 ಜನ ವಿದೇಶಿಗರಾಗಿದ್ದಾರೆ. ಇದುವರೆಗೆ 23 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರೋದು ಮಹಾರಾಷ್ಟ್ರದಲ್ಲಿ. ಅಲ್ಲಿ 52 ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಕೇರಳದಲ್ಲಿ 40, ದೆಹಲಿಯಲ್ಲಿ 26, ಉತ್ತರಪ್ರದೇಶದಲ್ಲಿ 24, ತೆಲಂಗಾಣದಲ್ಲಿ 19, ರಾಜಸ್ಥಾನದಲ್ಲಿ 17, ಹರಿಯಾಣದಲ್ಲಿ 17, ಕರ್ನಾಟಕದಲ್ಲಿ 15 ಪ್ರಕರಣಗಳು ದೃಢಪಟ್ಟಿವೆ. -masthmagaa.com Share on: WhatsAppContact Us forRead More →

masthmagaa.com: ದೇಶದಲ್ಲಿ ಕೊರೋನಾ ವೈರಸ್​ ಸೋಂಕು ತಗುಲಿದವರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಪೈಕಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಪಂಜಾಬ್​ನಲ್ಲಿ ತಲಾ ಒಬ್ಬೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ 19 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ವಾಪಸ್ ಮನೆ ಸೇರಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ದೃಢಪಟ್ಟಿರೋದು ಮಹಾರಾಷ್ಟ್ರದಲ್ಲಿ. ಇಲ್ಲಿ ಮೂವರು ವಿದೇಶಿಗರು ಸೇರಿದಂತೆ ಒಟ್ಟು 47 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಕೇರಳ ಎರಡನೇ ಸ್ಥಾನದಲ್ಲಿದ್ದು 28 ಜನರಲ್ಲಿ ಸೋಂಕು ದೃಢಪಟ್ಟಿದೆ. ಉತ್ತರ ಪ್ರದೇಶದಲ್ಲಿ 19, ದೆಹಲಿ 17, ಹರಿಯಾಣ 17, ಕರ್ನಾಟಕದ 15 ಮಂದಿಯಲ್ಲಿ ಕೊರೋನಾ ವೈರಸ್​ ದೃಢಪಟ್ಟಿದೆ ಅಂತ ಆರೋಗ್ಯ ಸಚಿವಾಲಯ ತಿಳಿಸಿದೆ. -masthmagaa.com Share on: WhatsAppContact Us for AdvertisementRead More →

masthmagaaa.com: ಕೊರೋನಾ ವೈರಸ್​​ಗೆ ಕಲಬುರಗಿಯ 76 ವರ್ಷದ ವೃದ್ಧ ದೇಶದಲ್ಲಿ ಮೊದಲ ಬಲಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದರ ನಡುವೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕಲಬುರಗಿಯ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ಕೊರೋನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದನ್ನ ಕಲಬುರಗಿ ಜಿಲ್ಲಾಧಿಕಾರಿ ಶರತ್ ಖಚಿತಪಡಿಸಿದ್ದಾರೆ. ಸದ್ಯ 63 ವರ್ಷದ ವೈದ್ಯ ಹಾಗೂ ಆತನ ಕುಟುಂಬಸ್ಥರನ್ನ ಮನೆಯಲ್ಲಿರಿಸಿ, ತೀವ್ರ ನಿಗಾ ಇಡಲಾಗಿದೆ. ಇವತ್ತು ಅವರನ್ನ ಐಸೋಲೇಷನ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗುವುದು ಅಂತ ಜಿಲ್ಲಾಧಿಕಾರಿ ತಿಳಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಇದುವರೆಗೆ ಇಬ್ಬರನ್ನು ಬಲಿ ಪಡೆದು ಸಾಕಷ್ಟು ಭೀತಿ ಹುಟ್ಟಿಸಿರೋ ಕೊರೋನಾ ವೈರಸ್ ಕುರಿತು ದಿನಕ್ಕೊಂದು ವಿಚಿತ್ರ ಸುದ್ದಿಗಳು ವರದಿಯಾಗ್ತಿವೆ. ಇದೀಗ ಕೊರೋನಾ ವೈರಸ್​ ಸೋಂಕು ತಗುಲಿದ ಐವರು ಶಂಕಿತರು ತಾವು ದಾಖಲಾಗಿದ್ದ ಆಸ್ಪತ್ರೆಯಿಂದಲೇ ಪರಾರಿಯಾಗಿರೋ ಘಟನೆ ನಡೆದಿದೆ. ಇದು ನಡೆದಿರೋದು ಮಹಾರಾಷ್ಟ್ರದ ನಾಗ್ಪುರದಲ್ಲಿ. ಜ್ವರ, ಶೀತ, ಗಂಟಲು ನೋವು ಹಿನ್ನೆಲೆ 5 ಜನ ಕೊರೋನಾ ವೈರಸ್​ ಶಂಕಿತರು ಐಸೋಲೇಷನ್​ ವಾರ್ಡ್​ಗೆ ದಾಖಲಾಗಿದ್ದರು. ತಕ್ಷಣ ವೈದ್ಯರು ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ವರದಿಯಲ್ಲಿ ಒಂದು ಪ್ರಕರಣ ನೆಗೆಟಿವ್ ಅಂತ ಬಂದಿತ್ತು. ಆದ್ರೆ ಉಳಿದವರ ವರದಿ ಬರುವ ಮುನ್ನವೇ ಎಲ್ಲರೂ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಸದ್ಯ ಅವರನ್ನು ಪತ್ತೆಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಐಸೋಲೇಷನ್​ ವಾರ್ಡ್​ಗೆ ದಾಖಲಿಸೋದಾಗಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthamagaa.com: ದೇಶದಲ್ಲಿ ಕೊರೋನಾ ವೈರಸ್​ಗೆ ಮೊದಲ ವ್ಯಕ್ತಿ ಬಲಿಯಾದ ಬೆನಲ್ಲೇ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೋಂಕು​ ಹರಡದಂತೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ನಡುವೆಯೇ ಒಡಿಶಾದಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರ್ಚ್​ 31ರವರೆಗೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದ್ರೆ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಅಂತ ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಅಷ್ಟಕ್ಕೇ ಸೀಮಿತವಾಗದೆ ಚಿತ್ರಮಂದಿರ, ಜಿಮ್ ಹಾಗೂ ಈಜುಕೊಳಗಳನ್ನು ಕೂಡ ಮಾರ್ಚ್​ 31ರವರೆಗೆ ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಇನ್ನು ದೆಹಲಿ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಚಿತ್ರಮಂದಿರಗಳಿಗೆ ಬೀಗ ಬಿದ್ದಿವೆ. ಬೆಂಗಳೂರಿನಲ್ಲಿ 1ರಿಂದ 6ನೇ ತರಗತಿವರೆಗಿನ ಎಲ್ಲಾ  ಮಕ್ಕಳಿಗೆ ರಜೆ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 73 ಜನರಲ್ಲಿ ಕೊರೋನಾ ವೈರಸ್​ ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಸೋಂಕಿತರನ್ನು ತೀವ್ರ ನಿಗಾದಲ್ಲಿ ಇಡಲಾಗಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ನಿಗಾ ಇಡುವ ಕೆಲಸ ನಡೀತಿದೆ. -masthamagaa.com Share on: WhatsAppContact Us for AdvertisementRead More →

masthmagaa.com: ಕೊರೋನಾ ವೈರಸ್​ನಿಂದ ಕಲಬುರಗಿಯ ವೃದ್ಧ ಮೃತಪಟ್ಟಿರುವ ಬೆನ್ನಲ್ಲೇ ಬೆಂಗಳೂರಿನ ಗೂಗಲ್ ಉದ್ಯೋಗಿಯೋರ್ವರಿಗೆ ಕೊರೋನಾ ವೈರಸ್​ ತಗುಲಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದನ್ನು ಖಚಿತಪಡಿಸಿರುವ ಗೂಗಲ್ ಸಂಸ್ಥೆ, ಕೊರೋನಾ ಟೆಸ್ಟ್​ನಲ್ಲಿ ತನ್ನ ಸಿಬ್ಬಂದಿಗೆ ಪಾಸಿಟಿವ್ ಫಲಿತಾಂಶ ಬಂದಿದೆ ಎಂದಿದೆ. ಹೀಗಾಗಿ ಎಲ್ಲಾ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಉದ್ಯೋಗಿಯನ್ನ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕೋವಿಡ್-19 ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆ ಕಚೇರಿಯ ಎಲ್ಲಾ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್‌ಗೆ ಆದೇಶ ನೀಡಿರುವ ಗೂಗಲ್ ಸಂಸ್ಥೆ, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಜಾಗತಿಕವಾಗಿ 3,800ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್​ ಇದೀಗ ಡೆಲಿವರಿ ಬಾಯ್​ಗೂ ತಗುಲಿರುವ ಘಟನೆ ನಡೆದಿದೆ. ಅಂದ್ಹಾಗೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ, ಬದಲಾಗಿ ಜಪಾನ್​ನಲ್ಲಿ. ಜಪಾನ್​ನ ಸಾಗವಾ ಎಕ್ಸ್​ಪ್ರೆಸ್​ ಕಂಪನಿಯ 60 ವರ್ಷದ ಡೆಲಿವರಿ ಬಾಯ್​ಗೆ ಸೋಂಕು ತಗುಲಿದೆ. ಹೀಗಾಗಿ ಆ  ವ್ಯಕ್ತಿ ಕೆಲಸ ಮಾಡುತ್ತಿದ್ದ ಘಟಕವನ್ನು ಬಂದ್​ ಮಾಡಲಾಗಿದೆ. ಜೊತೆಗೆ ಆತನ ಸಂಪರ್ಕದಲ್ಲಿದ್ದವರು ತಮ್ಮ ತಮ್ಮ ಮನೆಯಲ್ಲೇ ಇರುವಂತೆ ಕಂಪನಿ ಪ್ರಕಟಣೆ ಹೊರಡಿಸಿದೆ. ಇನ್ನು ಕೊರೋನಾ ವೈರಸ್ ಹರಡದಂತೆ ತಡೆಯಲು ಕತಾರ್ ದೇಶ ಭಾರತ ಸೇರಿದಂತೆ 14 ದೇಶಗಳ ಪ್ರಯಾಣಿಕರ ಆಗಮನದ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಹೀಗಾಗಿ ಚೀನಾ, ಭಾರತ, ಈಜಿಪ್ಟ್​, ಇರಾಕ್, ಇರಾನ್, ಲೆಬನಾನ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಫಿಲಿಪ್ಪೀನ್ಸ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಸಿರಿಯಾ ಹಾಗೂ ಥಾಯ್​ಲ್ಯಾಂಡ್ ದೇಶಗಳ ಪ್ರಯಾಣಿಕರು ಕತಾರ್​ಗೆ ಹೋಗುವಂತಿಲ್ಲ. ಕತಾರ್​ ಏರ್​ವೇಸ್​ ಕೂಡ ಇಟಲಿಗೆ ಹಾಗೂ ಇಟಲಿಯಿಂದ ತನ್ನ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. -masthmagaa.com Share on: WhatsAppContactRead More →