masthmagaa.com: ಇರಾನ್​​ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆಗಳು ಮಂದುವರೆದಿದೆ. ಇದರ ನಡುವೆಯೇ ಇರಾನ್‌ನ ಸುಪ್ರೀಂ ಲೀಡರ್‌ ಅಯತುಲ್ಲಾಹ್‌ ಅಲಿ ಖಮೇನಿ ಸೊಸೆ ಫರೀದೆ ಮೊರಾದ್ಭಾನಿ ತಮ್ಮ ಅಂಕಲ್‌ ವಿರುದ್ದವೇ ವಾಗ್ದಾಳಿ ಮಾಡಿದ್ದಾರೆ. ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿರೋ ಮೊರಾದ್ಖಾನಿ, ʼಖಮೇನಿ ಹಿಟ್ಲರ್‌ ಮುಸಲೋನಿ, ಸದ್ದಾಂ ಹುಸೇನ್‌, ಗಡಾಫಿ ರೀತಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ಕೂಡಲೇ ಇಡೀ ವಿಶ್ವ ಇರಾನ್‌ ಜೊತೆಗೆ ಎಲ್ಲ ಸಂಬಂಧವನ್ನ ಕಳೆದುಕೊಳ್ಳಬೇಕು. ಇರಾನ್‌ ಸರ್ಕಾರ, ಮಕ್ಕಳ ಹಾಗೂ ಮಹಿಳೆಯರನ್ನ ಸಾಯಿಸಿ ಅಧಿಕಾರ ಮಾಡ್ತಿದೆ. ಇರಾನ್‌ನ ಜನ ಈ ಮುಸ್ಲಿಂ ಆಡಳಿತವನ್ನ ಕಿತ್ತೊಗೆಯಬೇಕು ಅಂತ ಮನವಿ ಮಾಡಿದ್ದಾರೆ. ಈ ವಿಡಿಯೋವನ್ನ ಮೊರಾದ್ಖಾನಿ ಸಹೋದರ ಶೇರ್‌ ಕೂಡ ಮಾಡಿದ್ದು ನವೆಂಬರ್‌ 23 ರಂದು ಈಕೆಯನ್ನ ಬಂಧಿಸಲಾಗಿದೆ ಅಂತ ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಮೊರಾದ್ಭಖಿ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಸಿಸ್ಟರ್, ಬದ್ರಿ‌ಯವರ ಮಗಳು. ಈ ಬದ್ರಿ, 1980ರ ದಶಕದಲ್ಲಿ ಖಮೇನಿ ಕುಟುಂಬದಿಂದ ಓಡಿ ಹೋಗಿ ಬೇರೆ ಮದುವೆಯಾಗಿ ಇರಾಕ್‌ಗೆ ಹೋದ್ರು. ತದನಂತರ ಇರಾನ್‌ನಲ್ಲಿ ಖಮೇನಿ ವಿರೋಧಿಯಾಗಿರೋ ಅಲಿ ತೆಹ್ರಾನ್‌Read More →