masthmagaa.com: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43,082 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 492 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 93.09 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,35,715 ಆಗಿದೆ. ಕಳೆದ 24 ಗಂಟೆಗಳಲ್ಲಿ 39,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 87.18 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 4.55 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಗುಣಮುಖ ಪ್ರಮಾಣ 93.65% ಇದ್ದು, ಸಾವಿನ ಪ್ರಮಾಣ 1.46% ರಷ್ಟಿದೆ. ನವೆಂಬರ್‌ 26ರಂದು 11.31 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 13.70 ಕೋಟಿ ಕೊರೋನಾ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: AIMIM ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಚಾಲೆಂಜ್ ಹಾಕಿದ್ದಾರೆ. ಅದು ಹೈದ್ರಾಬಾದ್​ ಮಹಾ ನಗರ ಪಾಲಿಕೆ (GHMC) ಚುನಾವಣೆಗೆ ಸಂಬಂಧಿಸಿದಂತೆ. ಹೌದು, ‘ಡಿಸೆಂಬರ್ 1ರಂದು ನಡೆಯಲಿರುವ ಹೈದ್ರಾಬಾದ್ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಬಿಜೆಪಿಯವರು ಬೇಕಿದ್ರೆ ಪ್ರಾಧನಿ ಮೋದಿಯನ್ನೇ ಕರೆಸಲಿ. ನೋಡೋಣ ಎಷ್ಟು ಸೀಟು ಗೆಲ್ತಾರೆ’ ಅಂತ ಓವೈಸಿ ಚಾಲೆಂಜ್ ಹಾಕಿದ್ಧಾರೆ. ಅಂದ್ಹಾಗೆ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರ ನಾಯಕರನ್ನೇ ಪ್ರಚಾರಕ್ಕೆ ಕಳಿಸಿದೆ. ಇದರ ಬೆನ್ನಲ್ಲೇ ಓವೈಸಿ ಈ ರೀತಿ ಹೇಳಿದ್ಧಾರೆ. ಇತ್ತೀಚೆಗಷ್ಟೇ ‘ಬಿಜೆಪಿ ಕಡೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೂಡ ಪ್ರಚಾರಕ್ಕೆ ಬರಬಹುದು’ ಅಂತ ಟಿಆರ್​ಎಸ್​ ಲೇವಡಿ ಮಾಡಿತ್ತು. ಇದೀಗ ಓವೈಸಿ ಪ್ರಧಾನಿ ಮೋದಿಗೆ ಚಾಲೆಂಜ್ ಹಾಕಿದ್ದಾರೆ. ಇದೆಲ್ಲದರ ನಡುವೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಾಳೆ ಹೈದ್ರಾಬಾದ್​ನಲ್ಲಿ ರೋಡ್​ ಶೋ ನಡೆಸಲಿದ್ದಾರೆ ಅನ್ನೋದು ಗೊತ್ತಾಗಿದೆ. ಒಂದು ಪಾಲಿಕೆ ಚುನಾವಣೆಯನ್ನ ಬಿಜೆಪಿ ಈ ಪರಿ ಗಂಭೀರವಾಗಿ ತೆಗೆದುಕೊಂಡಿರೋದು ಇದೇ ಮೊದಲು ಅನ್ಸುತ್ತೆ. -masthmagaa.com ShareRead More →

masthmagaa.com: ಕೊರೋನಾ ಕಂಟ್ರೋಲ್ ಮಾಡಿರುವ ನ್ಯೂಜಿಲ್ಯಾಂಡ್​ನಲ್ಲಿ ಪಾಕ್​ ಕ್ರಿಕೆಟಿಗರು ನಿಯಮಗಳನ್ನ ಗಾಳಿಗೆ ತೂರಿ ಅಲ್ಲಿನ ಸರ್ಕಾರದ ಟೆನ್ಷನ್ ಹೆಚ್ಚಿಸಿದ್ದಾರೆ. ಏನಾಗಿದೆ ಅಂದ್ರೆ, ಪಾಕ್ ಕ್ರಿಕೆಟ್​​ ತಂಡ ನ್ಯೂಜಿಲ್ಯಾಂಡ್​​ಗೆ ಕ್ರಿಕೆಟ್ ಟೂರ್ ಕೈಗೊಂಡಿದೆ. ಪಾಕ್​ ಕ್ರಿಕೆಟಿಗರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 54 ಜನ ಲಾಹೋರ್​ನಿಂದ ನ್ಯೂಜಿಲ್ಯಾಂಡ್​ನ ಕ್ರೈಸ್ಟ್​ಚರ್ಚ್​​ಗೆ ಬಂದಿದ್ದಾರೆ. ಬಂದವರಿಗೆ ಕೊರೋನಾ ಟೆಸ್ಟ್ ಮಾಡಿದಾಗ 6 ಜನರಿಗೆ ಪಾಸಿಟಿವ್ ಬಂದಿದೆ. ತಕ್ಷಣ ಅವರನ್ನ ಕ್ವಾರಂಟೈನ್​ಗೆ ಒಳಪಡಿಸಿ, ಉಳಿದವರನ್ನ ಐಸೋಲೇಷನ್​ನಲ್ಲಿ ಇರಿಸಲಾಯ್ತು. ಬೇರೆ ದೇಶಕ್ಕೆ ಹೋದ್ಮೇಲೆ ಅಲ್ಲಿ ಹೇಳಿದ ರೀತಿಯಲ್ಲಿ, ಅಲ್ಲಿನ ರೂಲ್ಸ್ ಫಾಲೋ ಮಾಡ್ಕೊಂಡು ಇರ್ಬೇಕು ತಾನೇ.. ಅದನ್ನ ಬಿಟ್ಟು ಈ ಪಾಕ್​ ಕ್ರಿಕೆಟಿಗರು ಮತ್ತು ಸಿಬ್ಬಂದಿ ನಿಯಮಗಳನ್ನ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದ್ದಾರೆ. ಇವರ ಆಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ನ್ಯೂಜಿಲ್ಯಾಂಡ್ ಸರ್ಕಾರ, ‘ನ್ಯೂಜಿಲ್ಯಾಂಡ್​ಗೆ ಕ್ರಿಕೆಟ್ ಆಡೋಕೆ ಬರೋದೇ ಒಂದು ಭಾಗ್ಯ. ಹೀಗಾಗಿ ಆಟಗಾರರು ಕೂಡ ಕೊರೋನಾ ನಿಯಮಗಳನ್ನ ಪಾಲಿಸಬೇಕು. ನಮ್ಮ ಸಿಬ್ಬಂದಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು’ ಅಂತ ಫೈನಲ್​ ವಾರ್ನಿಂಗ್ ಕೊಟ್ಟಿದೆ.Read More →

masthmagaa.com: ಕರ್ನಾಟಕದ ಕೋವಿಡ್ ಟೆಸ್ಟ್ ರಿಪೋರ್ಟ್ ಮೇಲೆ ಕೇರಳ ಸರ್ಕಾರಕ್ಕೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಂಡು, ಕೊರೋನ ಪರೀಕ್ಷೆ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಶಬರಿಮಲೆಗೆ ಹೋದರೂ ತಡೀತಿದಾರೆ. ಮತ್ತೆ 625 ರೂಪಾಯಿ ಕಿತ್ಕೊಂಡು ಹೊಸತಾಗಿ ಕೇರಳದಲ್ಲಿ ಪರೀಕ್ಷೆ ಮಾಡಿಸ್ತಿದಾರೆ. ನಂತರ ಅಲ್ಲೂ ನೆಗೆಟಿವ್ ಬಂದ ಭಕ್ತರಿಗೆ ಮಾತ್ರ ಪಂಪಾ ನದಿ ದಾಟುವ ಅವಕಾಶ ನೀಡಲಾಗುತ್ತಿದೆ. ಇದು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. -masthmagaa.com Share on: WhatsAppContact Us for AdvertisementRead More →

masthamagaa.com: ಲಂಚ ಕೊಡೋದರಲ್ಲಿ, ಲಂಚ ಪಡೆಯೋದ್ರಲ್ಲಿ ನಾವು ಭಾರತೀಯರು ಏಷ್ಯಾ ಖಂಡದಲ್ಲೇ ಅತ್ಯಂತ ಭ್ರಷ್ಟರು ಅಂತಾ `ದಿ ಟ್ರಾನ್ಸ್ಪರೆನ್ಸಿ ಇಂಟರ್​ನ್ಯಾಶನಲ್’ ವರದಿ ಮಾಡಿದೆ. ಭಾರತದಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಲಂಚ ಕೊಡಲೇಬೇಕು. ನಮ್ಮ ಜನ ಕೂಡಾ ಅಷ್ಟೆ. ಸರ್ಕಾರಿ ಸಿಬ್ಬಂದಿ ಲಂಚ ಕೇಳಿದಾಗ ಸರಿ ಇಲ್ಲ ಸಿಸ್ಟಮ್ ಅಂತಾ ಬೈತಾರೆ. ಆದ್ರೆ ತಮ್ಮದೇ ಏನಾದ್ರೂ ಅಕ್ರಮ, ಕಾನಾನು ಬಾಹಿರ ಕೆಲಸ ಆಗೋದಿದ್ದಾಗ, ಅದೇ ಜನ ತಾವೇ ಲಂಚ ಕೊಟ್ಟು ಅಡ್ಡಕೆಲಸ ಮಾಡಿಸಿಕೊಂಡು ಬರ್ತಾರೆ. ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ನ ನೂತನ ವರದಿಯ ಪ್ರಕಾರ, ಇಲ್ಲಿ ಶೇ 50ಕ್ಕಿಂತ ಹೆಚ್ಚಿನ ಜನ ಲಂಚ ಕೊಟ್ಟು ಕೆಲಸ ಮಾಡಿಸ್ಕೋತಾರೆ. ಶೇ 32ರಷ್ಟು ಜನ ಪರಿಚಯ, ಇನ್ಫ್ಲುಯೆನ್ಸ್ ಆಧಾರ ಮೇಲೆ ಸರ್ಕಾರಿ ಸೇವೆ ಪಡೀತಾರೆ. ಒಟ್ನಲ್ಲಿ ಭ್ರಷ್ಟತೆ ಅನ್ನೋದು ಇತ್ತೀಚೆಗೆ ಈ ದೇಶದ ರಕ್ತದಲ್ಲೇ ಸೇರ್ಕೊಂಡುಬಿಟ್ಟಿದೆ. ಮಾತಾಡೋದ್ ಮಾತ್ರ ಫುಲ್ ದೊಡ್ಡ ದೊಡ್ಡದು. ಆದ್ರೆ ಸಂದರ್ಭ ಬಂದಾಗ ತಾನೊಬ್ಬ ಒಂಚೂರು ಸಣ್ಣ ಭ್ರಷ್ಟಾಚಾರ ಮಾಡಿದ್ರೆ ಏನಾಗಲ್ಲ ಅನ್ನೋ ಮನಸ್ಥಿತಿ. ಇದು ಹೋಗೋ ತನಕ ಉದ್ದಾರ ಆಗೋದುRead More →

masthmmagaa.com: ನಿನ್ನೆಯಷ್ಟೇ ಕುಸಿತ ಕಂಡಿದ್ದ ಷೇರುಪೇಟೆ ಇಂದು ತುಸು ಏರಿಕೆ ಕಂಡಿದೆ. ಇವತ್ತು ಸಂವೇದಿ ಸೂಚ್ಯಂಕ 432 ಅಂಕ ಏರಿಕೆ ಕಂಡು 44,260ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 129 ಅಂಕ ಏರಿಕೆ ಕಂಡು  12,987 ಆಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ 3 ಪೈಸೆ ಗಳಿಕೆ ಕಂಡು 73 ರೂಪಾಯಿ 88 ಪೈಸೆ ಆಗಿದೆ. ಚಿನ್ನ-ಬೆಳ್ಳಿ ಬೆಲೆಯಲ್ಲಿ ಇವತ್ತು ಅಷ್ಟೇನು ಬದಲಾವಣೆ ಆಗಿಲ್ಲ. ಇವತ್ತು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಕೇವಲ 37 ರೂಪಾಯಿ ಜಾಸ್ತಿಯಾಗಿ 48,972 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 69 ರೂಪಾಯಿ ಜಾಸ್ತಿಯಾಗಿ 60,260 ರೂಪಾಯಿ ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರುವುದಿಲ್ಲ. -masthamagaa.com Share on: WhatsAppContact Us for AdvertisementRead More →

masthmagaa.com: ಆಕ್ಸ್‌ಫರ್ಡ್‌ ಲಸಿಕೆಯನ್ನ ಭಾರತದಲ್ಲಿ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಕಂಪನಿಗೆ ಪ್ರಧಾನಿ ಮೋದಿ ಇದೇ ಶನಿವಾರ (ನವೆಂಬರ್ 28ರಂದು) ಭೇಟಿ ನೀಡ್ತಾರೆ ಅಂತ ಗೊತ್ತಾಗಿದೆ. ಈ ವೇಳೆ ಪ್ರಾಯೋಗಿಕವಾಗಿ ಲಸಿಕೆ ಪಡೆದ ಸ್ವಯಂ ಸೇವಕರ ಆರೋಗ್ಯ, ಲಸಿಕೆ ಉತ್ಪಾದನೆ ಸ್ಟೇಟಸ್, ಲಸಿಕೆ ಪೂರೈಕೆ ತಯಾರಿಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ ಎನ್ನಲಾಗಿದೆ. ಅಂದ್ಹಾಗೆ ಜಗತ್ತಿನಲ್ಲಿ ಲಸಿಕೆ ಉತ್ಪಾದನೆಯ ಅತಿ ದೊಡ್ಡ ಕಂಪನಿ ಭಾರತದ ಸೀರಂ ಇನ್​ಸ್ಟಿಟ್ಯೂಟ್​ ಆಗಿದೆ. ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಈ ಕಂಪನಿ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿರುವ ಬೆನ್ನಲ್ಲೇ, ಬೆಳಗಾವಿ ಜಿಲ್ಲೆ ವಿಭಜನೆಗೂ ಕೂಗು ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೆಳಗಾವಿ, ಚಿಕ್ಕೋಡಿ, ಗೋಕಾಕ್ ಮೂರು ಜಿಲ್ಲೆ ಮಾಡಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಬೆಳಗಾವಿಯು 18 ವಿಧಾನಸಭಾ ಕ್ಷೇತ್ರ ಹೊಂದಿರುವ ಬೃಹತ್ ಜಿಲ್ಲೆ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆಯಾಗಬೇಕು, ಆಡಳಿತ ಸುಗಮ ಆಗಬೇಕು ಅಂತ ಅವರು ಆಗ್ರಹ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳು ಈಗ ರಾಜ್ಯ-ರಾಜ್ಯಗಳ ನಡುವೆ ಜಗಳ ತಂದಿಟ್ಟಿದೆ. ಏನಾಗಿದೆ ಅಂದ್ರೆ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ಸೇರಿದಂತೆ ವಿವಿಧ ರಾಜ್ಯದ ರೈತರು ‘ದೆಹಲಿ ಚಲೋ’ ಮೆರವಣಿಗೆ ಕೈಗೊಂಡಿದ್ದಾರೆ. ಆದ್ರೆ ಪ್ರತಿಭಟನಾಕಾರರನ್ನ ಹರಿಯಾಣದಲ್ಲೇ ತಡೆ ಹಿಡಿಯಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ‘ರೈತರು ದೆಹಲಿಗೆ ಹೋಗೋದನ್ನ ಹರಿಯಾಣ ಸರ್ಕಾರ ತಡೆಯುತ್ತಿದೆ. ಇಂತಹ ಕ್ರಮ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದನ್ನ ನಾವು ಖಂಡಿಸುತ್ತೇವೆ’ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಆಡಳಿತವಿರುವ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್, ‘ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೇ ನಾನು ಮತ್ತೊಮ್ಮೆ ಹೇಳ್ತಿದ್ದೀನಿ, ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆಗೆ (MSP) ಏನಾದ್ರೂ ತೊಂದರೆ ಇದ್ರೆ ನಾನು ರಾಜಕೀಯವನ್ನೇ ಬಿಟ್ಟುಬಿಡ್ತೀನಿ. ಹೀಗಾಗಿ ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ. ಕಳೆದ 3 ದಿನಗಳಿಂದ ನಿಮ್ಮನ್ನ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ನೀವು ಮಾತ್ರ ನಂಗೆ ಸಿಗ್ಲೇ ಬಾರ್ದು ಅನ್ಕೊಂಡಿದ್ದೀರಾRead More →

masthmagaa.com: ಜಮ್ಮು-ಕಾಶ್ಮೀರದ ಶ್ರೀನಗರ ಹೊರವಲಯದಲ್ಲಿ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಾರಿನಲ್ಲಿ ಬಂದ ಮೂವರು ಉಗ್ರರು ಗಸ್ತು ತಿರುಗುತ್ತಿದ್ದ ತಂಡದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ರು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ʻಮೂವರು ಉಗ್ರರಲ್ಲಿ ಬಹುಶಃ ಇಬ್ಬರು ಪಾಕಿಸ್ತಾನಿ ಹಾಗೂ ಓರ್ವ ಸ್ಥಳೀಯನಿರಬಹುದು. ಘಟನೆ ನಡೆದ ಸ್ಥಳದಲ್ಲಿ ಜೈಷ್‌‌ ಉಗ್ರ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಸಂಜೆಯೊಳಗೆ ದಾಳಿ ನಡೆಸಿದ ಗುಂಪನ್ನು ಪತ್ತೆ ಹಚ್ಚುತ್ತೇವೆʼ ಅಂತ ಕಾಶ್ಮೀರ ಐಜಿ ತಿಳಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →