masthmagaa.com: ನಾಳೆ, ಅಂದ್ರೆ ಅಕ್ಟೋಬರ್ 25ರಿಂದ ರಾಜ್ಯಾದ್ಯಂತ 1 ರಿಂದ 5ನೇ ತರಗತಿ ಶಾಲೆ ಓಪನ್ ಆಗ್ತಿದೆ. ಸುಮಾರು 20 ತಿಂಗಳ ಬಳಿಕ ಶಾಲೆಗಳಲ್ಲಿ ಮತ್ತೆ ಪುಟ್ಟ ಮಕ್ಕಳು ಕಾಣಿಸಿಕೊಳ್ತಾರೆ. ಕೊರೋನ ನಿಯಂತ್ರಣಕ್ಕೆ ಬಂದಿದೆ ಅಂತ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದ್ರೆ ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿರೋ ಕೋವಿಡ್‌ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಪಾಲಿಸ್ಬೇಕು ಅಂತ ಸೂಚಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕವಾಗಿ ಘೋಷಿಸುವ ನಿರ್ಧಾರವನ್ನ ಸರ್ಕಾರ ಕೈಗೊಂಡಿದೆ. ಈ ಹಿಂದೆ ಹೈದರಾಬಾದ್‌ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಅಂತ ಘೋಷಿಸಲಾಗಿತ್ತು. ಇದೀಗ ಕಿತ್ತೂರು ಉತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕ ಅಂತ ಘೋಷಿಸಲಾಗುತ್ತೆ ಅಂತ ಭರವಸೆ ಕೊಟ್ಟಿದ್ದಾರೆ. -masthmagaa.com:   Share on: WhatsAppContact Us for AdvertisementRead More →

masthmagaa.com: ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮತ್ತು ಆತನ ಬೆಂಬಲಿಗರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಶೈಕತ್ ಮಂಡಲ್ ಅಕ್ಟೋಬರ್ 17ರಂದು ರಂಗ್​ಪುರದ ಪೀರ್​ಗಂಜ್​​ನಲ್ಲಿ ನಡೆದ ಹಿಂಸಾಚಾರದ ಮಾಸ್ಟರ್ ಮೈಂಡ್ ಆಗಿದ್ದ. ಹಿಂಸಾಚಾರಕ್ಕೂ ಮುನ್ನ ಈತ ಮಾಡಿದ್ದ ಫೇಸ್​ಬುಕ್ ಲೈವ್​​ನಿಂದ ಜನ ಪ್ರಚೋದನೆಗೆ ಒಳಗಾಗಿದ್ರು ಅಂತ ಗೊತ್ತಾಗಿದೆ. ಪೀರ್​ಗಂಜ್​ನಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ 70 ಮನೆ ಮತ್ತು ಹಲವಾರು ಅಂಗಡಿ ಮುಂಗಟ್ಟುಗಳನ್ನು ಸುಟ್ಟುಹಾಕಲಾಗಿತ್ತು. ನಿನ್ನೆಯಷ್ಟೇ ಬಾಂಗ್ಲಾ ಪೊಲೀಸರು ಇಕ್ಬಲ್ ಹೊಸ್ಸೇನ್ ಅನ್ನೋ ವ್ಯಕ್ತಿಯನ್ನು ಕಾಕ್ಸ್​ಬಜಾರ್​ನಿಂದ ಅರೆಸ್ಟ್ ಮಾಡಿದ್ರು. ಈತನೇ ದುರ್ಗಿಯ ಕಾಲ ಬಳಿ ಕುರಾನ್ ಇಟ್ಟು, ವಿಡಿಯೋ ವೈರಲ್ ಮಾಡಿದ್ದು ಅಂತ ಗೊತ್ತಾಗಿದೆ. ಬಾಂಗ್ಲಾದ ಇಡೀ ಹಿಂಸಾಚಾರಕ್ಕೆ ಈ ಘಟನೆಯೇ ಪ್ರಮುಖ ಕಾರಣವಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂಸಾಚಾರ ಸಂಬಂಧ ಈವರಗೆ ಸುಮಾರು 600 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. 2019ರ ಆಗಸ್ಟ್​ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಮಿತ್ ಶಾರ ಮೊದಲ ಪ್ರವಾಸ ಇದಾಗಿದೆ. ಶ್ರೀನಗರಕ್ಕೆ ಬಂದಿಳಿದ ಅವರನ್ನು ಜಮ್ಮು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ ಸ್ವಾಗತಿಸಿದ್ರು. ನಂತರ ಇದೇ ತಿಂಗಳು ಉಗ್ರರ ಗುಂಡಿಗೆ ಬಲಿಯಾದ ಪೊಲೀಸ್ ಇನ್​​ಸ್ಪೆಕ್ಟರ್ ಪರ್ವೇಜ್ ಅಹ್ಮದ್ ಅವರ ಕುಟುಂಬಸ್ಥರನ್ನು ಭೇಟಿಯಾದ್ರು. ಮತ್ತು ಪರ್ವೇಜ್ ಅಹ್ಮದ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ರು. ಇದ್ರ ನಡುವೆಯೇ ಶ್ರೀನಗರದಲ್ಲಿ ಅಮಿತ್ ಶಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ರು. 13 ದಿನಗಳಿಂದ ನಡೀತಿರೋ ಉಗ್ರ ನಿಗ್ರಹ ಕಾರ್ಯಾಚರಣೆ, ನಾಗರಿಕರನ್ನು ಗುರಿಯಾಗಿಸಿ ಉಗ್ರರು ನಡೆಸ್ತಿರೋ ದಾಳಿಯಲ್ಲಿ ಹೆಚ್ಚಳ, ಗಡಿ ನುಸುಳುವಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯ್ತು. ನಂತರ ಜಮ್ಮು ಕಾಶ್ಮೀರದ ಯುವ ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2019ರ ಆಗಸ್ಟ್​ 5 ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ., ಆ ದಿನದಿಂದ ಕಾಶ್ಮೀರದಲ್ಲಿRead More →

masthmagaa.com: ರಾಜ್ಯದಲ್ಲಿ‌ ಎಲ್ಲಾ ಬಗೆಯ ಆನ್‌ಲೈನ್‌ ಗೇಮಿಂಗ್‌ ಆಪ್‌ಗಳನ್ನ ಬ್ಯಾನ್‌ ಮಾಡ್ಬೇಕು ಅಂತ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿತ್ತು. ಇದೀಗ ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌, ಗ್ಯಾಲಕ್ಟಸ್‌ ಪೊನ್‌ ವೇರ್‌ ಟೆಕ್ನಾಲಜೀಸ್‌ ಸೇರಿದಂತೆ ಹಲವು ಕಂಪನಿಗಳು ರಾಜ್ಯ ಸರ್ಕಾರದ ಈ ನಿರ್ಧಾರವನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದೆ. ಹಾಗೂ ಇದು ರಾಜ್ಯ ಸರ್ಕಾರದ ಸಂವಿಧಾನ ಬಾಹಿರ ನಿರ್ಧಾರ ಅಂತ ಹೇಳಿದೆ. ಅಕ್ಟೋಬರ್‌ 27 ರಂದು ಈ ಬಗ್ಗೆ ಹೈಕೋರ್ಟ್​​ ಆದೇಶ ಹೊರಡಿಸಲಿದೆ. ಇನ್ನು ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್‌ ಗೇಮ್‌, ಆನ್‌ಲೈನ್‌ ಜೂಜು, ಬೆಟ್ಟಿಂಗ್‌ಗೆ ನಿಷೇಧ ಹೇರಿತ್ತು. ಈ ಹಿಂದೆ ಕೇರಳ ರಾಜ್ಯ ಸರ್ಕಾರ ಆನ್​ಲೈನ್ ರಮ್ಮಿಯನ್ನು ಇದೇ ರೀತಿ ನಿಷೇಧಿಸಿತ್ತು. ಆಗ ಹೈಕೋರ್ಟ್‌ ಈ ನಿರ್ಧಾರ ಸರಿ ಅಲ್ಲ ಅಂತ ರದ್ದು ಮಾಡಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಕೊರೋನಾ ಹಾವಳಿ, ಲಾಕ್​ಡೌನ್​ ಅಂತೆಲ್ಲಾ ವಾಹನ ಸಂಚಾರ ಬಂದ್ ಆಗಿತ್ತು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪೆಟ್ರೋಲ್​-ಡೀಸೆಲ್​ ಮೇಲಿನ ತೆರಿಗೆಯಿಂದ ಬರ್ತಿದ್ದ ಆದಾಯ ಕೂಡ ಖೋತಾ ಆಗಿತ್ತು. ಆದ್ರೀಗ ಕೊರೋನಾ ಕಮ್ಮಿಯಾಗಿ, ಎಲ್ಲಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯ ಸರ್ಕಾರಕ್ಕೆ ಬಂಪರ್​ ಆದಾಯ ಬಂದಿದೆ. ಈ ವರ್ಷದ ಏಪ್ರಿಲ್​ 1ರಿಂದ ಸೆಪ್ಟೆಂಬರ್​ 30ರವರೆಗೆ ಪೆಟ್ರೋಲ್​-ಡೀಸೆಲ್​ ಮೇಲಿನ ಟ್ಯಾಕ್ಸ್​ನಿಂದ 9,720 ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಬಂದ ಆದಾಯಕ್ಕಿಂತ 48 ಪರ್ಸೆಂಟ್ ಹೆಚ್ಚು. ಪೆಟ್ರೋಲ್ ಮತ್ತು ಡೀಸೆಲ್​ ರೇಟ್​ ಈಗಿರುವಷ್ಟೇ ಇದ್ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 20,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಅಂತ ಕಮರ್ಷಿಯಲ್​ ಟ್ಯಾಕ್ಸ್ ಡಿಪಾರ್ಟ್​ಮೆಂಟ್​​ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಅಂತ ವರದಿಯಾಗಿದೆ. ಅಂದ್ಹಾಗೆ ಪೆಟ್ರೋಲ್​ ಮೇಲೆ ರಾಜ್ಯ ಸರ್ಕಾರ 35 ಪರ್ಸೆಂಟ್​ ಮತ್ತು ಡೀಸೆಲ್​ ಮೆಲೆRead More →

masthmagaa.com: ರಾಜ್ಯದಲ್ಲಿ ಇಂದು 378 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 11 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,85,227 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,995 ಆಗಿದೆ. ಇಂದು 464 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,38,312 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 8,891 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.03 ಲಕ್ಷಕ್ಕು ಅಧಿಕ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.99 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 6.28 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 7 ದಾವಣಗೆರೆ 1 ಧಾರವಾಡ 1 ಕೋಲಾರ 1 ತುಮಕೂರು 1 -masthmagaa.com Share on: WhatsAppContact Us for AdvertisementRead More →

masthmagaa.com: ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 336 ರೂಪಾಯಿ ಜಾಸ್ತಿಯಾಗಿ, ₹47,805 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ₹44,550 ಆಗಿದ್ದು ನಿನ್ನೆ ಮತ್ತು ಇವತ್ತು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ . 1 ಕೆ.ಜಿ ಬೆಳ್ಳಿ ಬೆಲೆ 294 ರೂಪಾಯಿ ಜಾಸ್ತಿಯಾಗಿ 65,294 ಆಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 102 ಅಂಕ ಇಳಿಕೆ ಕಂಡು 60,822 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 63 ಅಂಕ ಇಳಿಕೆ ಕಂಡು 18,115 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.90 ಆಗಿದೆ (74. ರುಪಾಯಿ 90ಪೈಸೆ ) -masthmagaa.com Share on: WhatsAppContact Us for AdvertisementRead More →

masthmagaa.com: ಬಿಜೆಪಿ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕ ಟಾಕ್​ ಫೈಟ್​ ಮುಂದುವರಿದಿದೆ. ಇವತ್ತು ಮತ್ತೆ ಟ್ವೀಟ್​ ಮಾಡಿರೋ ರಾಜ್ಯ ಬಿಜೆಪಿ, ‘ಮಾನ್ಯ ಕುಮಾರಸ್ವಾಮಿಯವರೇ ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಅಂತ ಹೇಳೋ ನಿಮ್ಮ ಧೈರ್ಯ ಅಭಿನಂದನೀಯ. ಆದ್ರೆ ಕಾನೂನು ಪ್ರಕಾರ ‘ಪಾರದರ್ಶಕ ಕಾಯ್ದೆ’ ಉಲ್ಲಂಘನೆಯೂ ಅಪರಾಧವಲ್ಲವೇ? ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ! ಅಂತ ಹೇಳಿದೆ. ಕುಮಾರಸ್ವಾಮಿ ಸುಮ್ನಿರ್ತಾರಾ, ಅವರು ಕೂಡ ತಿರುಗೇಟು ಕೊಟ್ಟಿದ್ದಾರೆ. ‘ನಾನು ಯಾವುದೇ ಕುಟುಂಬವನ್ನ ಹಾಳು ಮಾಡಿಲ್ಲ. ಕೆಪಿಎಸ್​​ಸಿಯಲ್ಲಿ ಆಯ್ಕೆಯಾದ ಅಧಿಕಾರಿಯೊಬ್ಬರ ಪತಿ ಕೆಆರ್​ಎಸ್​ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ರು. ಯಾರಿಂದ ಬಿದ್ರು, ಯಾಕೆ ಆತ್ಮಹತ್ಯೆ ಮಾಡಿಕೊಂಡ್ರು, ಇದಕ್ಕೆ ಕಾರಣೀಕರ್ತರು ಯಾರು, ಆ ಫ್ಯಾಮಿಲಿಯನ್ನ ಹಾಳು ಮಾಡಿದ್ದು ಯಾರು ಅಂತ ಸಿಟಿ ರವಿ ಸ್ವಲ್ಪ ಸ್ಮರಿಸಿಕೊಳ್ಳಲಿ. ಇಂಥಾ ಹಲ್ಕಾ ಕೆಲಸ ನಾನು ಮಾಡಿಲ್ಲ. ಆರ್​ಎಸ್​​ಎಸ್​ ಸಂಚಾಲಕರ ಮಕ್ಕಳನ್ನೇ ಕ್ಯಾರಿಯಿಂಗ್ ಮಾಡಿ ಬಾಂಬೆಗೆ ಕದ್ದು ಓಡಿದ್ರಲಾ ಇದರ ಬಗ್ಗೆ ನಳಿನ್​ ಕುಮಾರ್ ಕಟೀಲ್​ ಏನಾದ್ರೂ ಹೇಳ್ತಾರಾ?Read More →