masthmagaa.com: ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗ್ತಿರುವ ಒಂದೊಂದೇ ವೆಬ್​ ಸಿರೀಸ್ ವಿವಾದದ ಕೇಂದ್ರಬಿಂದುವಾಗ್ತಿದೆ. ಕಳೆದ ಕೆಲ ದಿನಗಳಿಂದ ‘ತಾಂಡವ್’ ವೆಬ್ ಸರಣಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದ್ರಲ್ಲಿ ಹಿಂದೂ ದೇವತೆಗಳನ್ನ ಅವಮಾನ ಮಾಡಲಾಗಿದೆ, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ ಹೇಳಲಾಗಿತ್ತು. ಈ ಸಂಬಂಧ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಹಲವು ಎಫ್​ಐಆರ್ ದಾಖಲಾಗಿತ್ತು. ವಿವಾದದ ಬಳಿಕ ಕ್ಷಮೆ ಕೇಳಿದ್ದ ಚಿತ್ರತಂಡ, ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದೀಗ ಉತ್ತರಪ್ರದೇಶದಿಂದ ಮುಂಬೈಗೆ ಬಂದಿರುವ ಪೊಲೀಸರು ತಾಂಡವ್​ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್​ಗೆ ನೋಟಿಸ್​ ಕೊಟ್ಟಿದ್ಧಾರೆ. ಜನವರಿ 27ರಂದು ವಿಚಾರಣೆಗೆ ಬರುವಂತೆ ಅದರಲ್ಲಿ ಸೂಚಿಸಲಾಗಿದೆ. ಇನ್ನು ತಾಂಡವ್ ಬಳಿಕ ಇದೀಗ ಮಿರ್ಜಾಪುರ್ ವೆಬ್​ ಸಿರೀಸ್​ ಕೂಡ ವಿವಾದಕ್ಕೆ ಗ್ರಾಸವಾಗಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 2018ರಲ್ಲಿ ರಿಲೀಸ್ ಆಗಿದ್ದ ಈ ವೆಬ್​​ ಸರಣಿಯಲ್ಲಿ ಉತ್ತರಪ್ರದೇಶದ ಮಿರ್ಜಾಪುರ್‌ ಹೆಸರಿಗೆ ಧಕ್ಕೆಯುಂಟು ಮಾಡಲಾಗಿದೆ. ಮಿರ್ಜಾಪುರವನ್ನ ಗೂಂಡಾ ಮತ್ತು ವ್ಯಭಿಚಾರಿಗಳ ನಗರವೆಂದು ಬಿಂಬಿಸಲಾಗಿದೆ ಅಂತ ಮಿರ್ಜಾಪುರದ ಪತ್ರಕರ್ತರೊಬ್ರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದRead More →

ಉತ್ತರ ಪ್ರದೇಶ: 3 ವರ್ಷದ ಹೆಣ್ಣುಮಗುವೊಂದು ಮಧ್ಯಾಹ್ನದ ಬಿಸಿಯೂಟ ಬೇಯುತ್ತಿದ್ದ ಪಾತ್ರೆಗೆ ಬಿದ್ದು ಬೆಂದು ಸತ್ತ ದಾರುಣ ಘಟನೆ ಉತ್ತರಪ್ರದೇಶದ ಮಿರ್ಜಾಪುರದ ಜಿಲ್ಲೆಯ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿದ್ದ ಕಟ್ಟಡದ ಸಾಮಾಗ್ರಿಗೆ ಎಡವಿ ಮಗು ಅಲ್ಲೆ ಬಿಸಿಯೂಟ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದಿದೆ. ಅಡುಗೆ ಮಾಡ್ತಿದ್ದವರು ಕಿವಿಗೆ ಇಯರ್ ಫೋನ್ ಹಾಕಿಕೊಂಡು ಅಡುಗೆ ಮಾಡ್ತಿದ್ದರಿಂದ ಮಗು ಬಿದ್ದಿದ್ದನ್ನು ಗಮನಿಸಲೇ ಇಲ್ಲ. ಹೀಗಾಗಿ ಮಗು ಆ ಪಾತ್ರೆಯಲ್ಲೇ ಬೆಂದು ಮಗು ಸಾವನ್ನಪ್ಪಿದೆ. ಇದಕ್ಕೆ ಬಿಸಿಯೂಟ ತಯಾರಕರ ನಿರ್ಲಕ್ಷವೇ ಕಾರಣ ಅಂತ ಮಗುವಿನ ತಂದೆ ಆರೋಪಿಸಿದ್ದಾರೆ. ಸದ್ಯ ಮಿರ್ಜಾಪುರ ಡಿಸಿ ಶಾಲೆಯ ಹೆಡ್ ಮಾಸ್ಟರ್ ರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಮಗಳನ್ನು ಕಳೆದು ಕೊಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. Share on: WhatsAppContact Us for AdvertisementRead More →