masthmagaa.com: ಜಾಗತಿಕವಾಗಿ ತನ್ನ ಪ್ರಭಾವವನ್ನ ಹೆಚ್ಚಿಸಿಕೊಳ್ಳೋಕೆ ಚೀನಾ ಪ್ರಯತ್ನಿಸುತ್ತಿರುವ ವಿಷಯ ಗೊತ್ತೇಯಿದೆ. ಇದಕ್ಕಾಗಿ ಚೀನಾ ಹಣ ಹೂಡಿಕೆ ಹಾಗೂ ಅಭಿವೃದ್ಧಿ ಕೆಲಸ ಅಂತೇಳಿ ಪಾಕಿಸ್ತಾನದಂಥ ಆರ್ಥಿಕ ಹಿಂಜರಿತ ಫೇಸ್‌ ಮಾಡ್ತಿರೋ ದೇಶಗಳನ್ನ ತನ್ನ ಬುಟ್ಟಿಗೆ ಹಾಕಿಕೊಳ್ತಿದೆ. ಇದೀಗ ಪಾಕಿಸ್ತಾನ ಹಾಗೂ ಚೀನಾ 3.5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 28.7 ಸಾವಿರ ಕೋಟಿ ರೂಪಾಯಿ ಮೌಲ್ಯದ ನ್ಯೂಕ್ಲಿಯರ್‌ ಪ್ರಾಜೆಕ್ಟ್‌ ಒಪ್ಪಂದಕ್ಕೆ ಸಹಿ ಹಾಕಿವೆ. ಚೀನಾ ಸಹಾಯದಿಂದ ಪಾಕ್‌ನ ಪಂಜಾಬ್‌ ಪ್ರಾಂತ್ಯದ ಚಶ್ಮಾದಲ್ಲಿ ಚಶ್ಮಾ-5 ಪವರ್‌ ಪ್ಲಾಂಟ್‌ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಅವ್ರು ಚಾಲನೆ ನೀಡಿದ್ದಾರೆ. ಈ ವೇಳೆ ಚಶ್ಮಾ-5 ನ್ಯೂಕ್ಲಿಯರ್‌ ಪವರ್‌ ಪ್ಲಾಂಟ್‌ ಪ್ರಾಜೆಕ್ಟ್‌ ಒಂದು ದೊಡ್ಡ ಮೈಲಿಗಲ್ಲಾಗಿದ್ದು, ಇಬ್ಬರು ಫ್ರೆಂಡ್ಸ್‌ ನಡುವಿನ ಸಹಕಾರದ ಹ್ಯೂಜ್‌ ಸಕ್ಸಸ್‌ ಸ್ಟೋರಿ ಅಂತ ಷರೀಫ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಪಾಕ್‌ನ ಬಲೂಚಿಸ್ತಾನ ಮಿಲಿಟರಿ ಬೇಸ್‌ ಮೇಲೆ ಭಯೋತ್ಪಾದಕ ದಾಳಿಯಾಗಿದ್ದು, 12 ಸೈನಿಕರು ಮೃತಪಟ್ಟಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. -masthmagaa.com Share on: WhatsAppContact UsRead More →

masthmagaa.com: ಇನ್ನೊಂದ್ಕಡೆ ತಮ್ಮ ಸೇನೆ ನಮ್ಮ ದೇಶಕ್ಕೆ ಹಣ ಈಸ್ಕೊಂಡು ಬರುವಲ್ಲಿ ದೊಡ್ಡ ಪಾತ್ರ ವಹಿಸ್ತಿದೆ ಅಂತ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹಾಡಿ ಹೊಗಳಿದ್ದಾರೆ. ನಮ್ಮ ಸ್ನೇಹಿತರಾದ ಸೌದಿ ಅರೇಬಿಯಾ, ಹಾಗೂ ಯುಎಇಯಿಂದ ಈಗ ನಮಗೆ ಹಣ ಸಹಾಯ ಬರ್ತಿದೆ. ಅದನ್ನ ಈಸ್ಕೊಂಡು ಬರುವಲ್ಲಿ ನಮ್ಮ ಸೇನಾ ಮುಖ್ಯಸ್ಥ ಜನರಲ್‌ ಆಸೀಮ್ ಮುನೀರ್‌ ತುಂಬಾ ಶ್ರಮ ಹಾಕ್ತಿದ್ದಾರೆ.‌ ನಮಗೆ ಸಾಲ ಈಸ್ಕೊಂಡು ಬರುವಲ್ಲಿ ಅವರ ಪಾತ್ರ ನಿರ್ಣಾಯಕ ಅಂತ ಶೆಹಾಬಾಷ್‌ ಸರ್ಕಾರ ಪಾಕ್‌ ಸೇನಾ ಮುಖ್ಯಸ್ಥರಿಗೆ ಶಹಬಾಷ್‌ಗಿರಿ ಕೊಟ್ಟಿದ್ದಾರೆ. ಆ ಮೂಲಕ ಸೇನೆಯನ್ನ ಭಿಕ್ಷೆ ಬೇಡೋಕೆ ನಿಯೋಜನೆ ಮಾಡ್ತಿದ್ದೀವಿ, ಸೇನೆ ಮುಖ ತೋರಿಸ್ದೇ ನಮಗೆ ಒಂದು ನಯಾ ಪೈಸೆನೂ ಹುಟ್ಟೋದಿಲ್ಲ. ನಾವು ಮಾಡಬೇಕಾದ ಕೆಲಸವನ್ನ ಸೇನೆ ಮಾಡ್ತಾ ಇದೆ. ಸೇನೆನೆ ಪಾಕ್‌ ರಾಜಕಾರಣಿಗಳ ಗಾಡ್‌ಫಾದರ್‌ ಅನ್ನೋದನ್ನ ಪಾಕ್‌ನ ನಾಯಕರು ಘಂಟಾಘೋಷವಾಗಿ ಒಪ್ಪಿಕೊಂಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ʻಡೆಮಾಕ್ರೆಸಿ ಸಮಿಟ್‌ʼಗೆ ಪಾಕಿಸ್ತಾನ ಗೈರಾಗಿದೆ. ಪಾಕಿಸ್ತಾನದ ದೋಸ್ತ್‌ಗಳಾದ ಚೀನಾ ಹಾಗೂ ಟರ್ಕಿಗೆ ಈ ಸಭೆಯಲ್ಲಿ ಭಾಗವಹಿಸಲು ಅಹ್ವಾನಿಸಿಲ್ಲ. ಹೀಗಾಗಿ ಈ ಸಭೆಯಿಂದ ಹಿಂದೆ ಸರಿದಿರೋದಾಗಿ ಪಾಕಿಸ್ತಾನ್‌ ಅಧಿಕಾರಿಗಳು ಹೇಳಿದ್ದಾರೆ. ನಮ್ಮನ್ನ ಈ ಸಮಿಟ್‌ಗೆ ಇನ್ವೈಟ್‌ ಮಾಡಿದಕ್ಕೆ ಧನ್ಯವಾದ. ಬೈಡೆನ್‌ ಆಡಳಿತದಲ್ಲಿ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧದಲ್ಲಿ ಅಭಿವೃದ್ಧಿಯಾಗಿದೆ. ನಮ್ಮ ಸಂಬಂಧವನ್ನ ಇನ್ನಷ್ಟು ಬಲಗೊಳಿಸಲು ನಾವು ಬದ್ಧವಾಗಿದ್ದೀವಿ ಅಂತ ಪಾಕ್‌ ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಈ ಸಮಿಟ್‌ ನೆನ್ನೆ ಪ್ರಾರಂಭವಾಗಿದ್ದು, ಮೂರುದಿನಗಳ ಕಾಲ ವರ್ಚುವಲ್‌ ಆಗಿ ನಡೆಯಲಿದೆ. ಇನ್ನೊಂದ್‌ ಕಡೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರ ಅಧಿಕಾರವನ್ನ ಮೊಟಕುಗೊಳಿಸುವ ಕಾನೂನನ್ನ ಜಾರಿಗೆ ತರದಿದ್ರೆ, ಇತಿಹಾಸ ನಮ್ಮನ್ನ ಕ್ಷಮಿಸುವುದಿಲ್ಲ ಅಂತ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಅಂದ್ಹಾಗೆ ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿನ ಚುನಾವಣೆಗಳ ಕುರಿತು ಫೆಬ್ರವರಿ 22ರಂದು ಅಲ್ಲಿನ ಮುಖ್ಯ ನ್ಯಾಯಮೂರ್ತಿ ಉಮರ್ ಅವ್ರು ಸ್ವಯಂಪ್ರೇರಿತವಾಗಿ ನಿರ್ಧಾರವನ್ನ ತೆಗೆದುಕೊಂಡಿದ್ರು. ಈ ನಿರ್ಧಾರವನ್ನ ಉಳಿದ ಜಡ್ಜ್‌ಗಳು ಆಕ್ಷೇಪಿಸಿದ್ರು. ಈ ಹಿನ್ನಲೆಯಲ್ಲಿ ಚೀಫ್‌ ಜಸ್ಟೀಸ್‌ರRead More →

masthmagaa.com: ಏಷ್ಯಾದ ರೋಗಿ ಅಂತ ಕರೆಸಿಕೊಳ್ತಿರೋ ಪಾಕಿಸ್ತಾನ, ಈಗ ತನ್ನ ಮುಖಕ್ಕೆ ತಾನೇ ಕನ್ನಡಿ ಹಿಡಿಯೋ ಕೆಲಸ ಮಾಡ್ತಿದೆ. ಬರೀ ಕನ್ನಡಿ ಹಿಡೀತಾ ಇಲ್ಲ.. ನಮ್ಮ ಬಗ್ಗೆ ನಮಗೆ ಅಸಹ್ಯ ಆಗ್ತಿದೆ ಅಂತ ಹೇಳಿಕೊಳ್ತಾಯಿದೆ. ʻನಾವು ನ್ಯೂಕ್ಲಿಯರ್‌ ದೇಶ ಅಂತ ಅನ್ನಿಸಿಕೊಂಡು ಬೇರೆಯವರ ಹತ್ರ ಭಿಕ್ಷೆ ಬೇಡ್ತಾ, ಅವರಿವರ ಹತ್ರ ಕೈ ಚಾಚ್ತಾ ಇರೋದನ್ನ ನೋಡ್ತಿದ್ರೆ ನಮಗೆ ನಾಚಿಕೆ ಆಗ್ತಿದೆ ಅಂತ, ಖುದ್ದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅಳಲು ತೋಡಿಕೊಂಡಿದ್ದಾರೆ. ಇಂಟರ್‌ವ್ಯೂ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿಗಳು, ನಾವು ಅಣ್ವಸ್ತ್ರ ದೇಶವಾಗಿದ್ದುಕೊಂಡು ಅಂತರಾಷ್ಟ್ರೀಯವಾಗಿ ಸಾಲ ಕೊಡಿ, ಪರಿಹಾರ ಕೊಡಿ ಅಂತ ಕೇಳ್ತಿದ್ರೆ ನಿಜವಾಗಿಯೂ ನಮಗೆ ಮುಜುಗರ, ಅವಮಾನ ಆಗ್ತಿದೆ. ಪಾಕಿಸ್ತಾನದ ಆರ್ಥಿಕ ಸವಾಲುಗಳನ್ನು ಎದುರಿಸೋಕೆ ವಿದೇಶಿ ಸಾಲ ನಮಗೆ ಒಳ್ಳೇದಲ್ಲ. ಏಕೆಂದರೆ ಸಾಲಗಳನ್ನು ಹಿಂತಿರುಗಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಅಲ್ದೇ ಈ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡ್ತಿರೊ ಅರಬ್‌ ದೇಶಗಳನ್ನ ಅದ್ರಲ್ಲೂ ಮುಖ್ಯವಾಗಿ ಸೌದಿ ಅರೇಬಿಯಾಗೆ ನಾವು ತುಂಬಾ ಥ್ಯಾಂಕ್ಸ್‌ ಹೇಳ್ತೀವಿ ಅಂತRead More →