ಯುರೋಪನ್ನ ಒಡೆಯುತ್ತಿದ್ದಾರಾ ಪುಟಿನ್? ಆ ದೇಶದಲ್ಲಿ ಎದ್ದಿದೆ ಪುಟಿನ್ ಪರವಾದ ಪ್ರತಿಭಟನೆ!
masthmagaa.com: ಮಹತ್ವದ ಬೆಳವಣಿಗೆಯಲ್ಲಿ ಯುರೋಪಿನ ಪ್ರಮುಖ ರಾಷ್ಟ್ರವೊಂದರಲ್ಲಿ ಜನ ಬೀದಿಗಳಿದು ಹೋರಾಟ ಶುರು ಮಾಡಿದ್ದಾರೆ. ಜೆಕ್ ರಿಪಬ್ಲಿಕ್ ಅನ್ನೋ ದೇಶದಲ್ಲಿ ಅಲ್ಲಿನ ಬಲಪಂಥೀಯ ಸರ್ಕಾರದ ವಿರುದ್ಧ ರಷ್ಯಾ ಪರವಿರುವ ಹಾಗೂ ಅಲ್ಲಿನ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಪರವಾಗಿರುವ ಹಾಗೂ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳ ವಿರೋಧಿ ಅಂತ ಕರೆಸಿಕೊಳ್ಳುವ PRO ಸಂಘಟನೆ ಈ ಪ್ರತಿಭಟನೆಗೆ ಕರೆ ನೀಡಿದೆ. ಜೆಕ್ ಪ್ರಧಾನಿ ಫಿಯಾಲಾ ಅವರ ಸರ್ಕಾರದಿಂದ ಮುಕ್ತಿ ಪಡೆಯಲು ನಾವು ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಅಂತ PRO ನಾಯಕ ಜಿಂಡ್ರಿಚ್ ರೈಚ್ಲ್ ಹೇಳಿದ್ದಾರೆ. ಇದೇ ವೇಳೆ ಈಗಿನ ಸರ್ಕಾರ ವಿದೇಶಿ ಶಕ್ತಿಗಳ ಏಜೆಂಟ್‌ಗಳಂತೆ ಕೆಲಸ ಮಾಡ್ತಿದೆ. ಅವರ ಆದೇಶಗಳನ್ನ ಜಾರಿ ಮಾಡುವ ಬೊಂಬೆಗಳ ರೀತಿ ವರ್ತಿಸ್ತಿದೆ. ಹೀಗಾಗಿ ನಾವು ಇನ್ಮುಂದೆ ಈ ರೀತಿಯ ಕೈಗೊಂಬೆ ಸರ್ಕಾರವನ್ನ ಬಯಸುವುದಿಲ್ಲ ಅಂತ ರೈಚ್ಲ್ ಕಿಡಿಕಾರಿದ್ದಾರೆ. ಅಷ್ಟೆ ಅಲ್ದೆ ನ್ಯಾಟೋ ಸೇರಲು ಇಚ್ಛಿಸಿರುವ ಯುಕ್ರೇನ್‌ನ ಯಾವುದೇ ಪ್ರಯತ್ನವನ್ನ ಜೆಕ್ ಗಣರಾಜ್ಯ ತಿರಸ್ಕರಿಸಬೇಕು ಅಂತ ರೈಚ್ಲ್ ಕರೆ ನೀಡಿದ್ದಾರೆ. ಅಂದ್ಹಾಗೆRead More →