ಮಿಷನರಿಗಳಿಗಿಂತ ಹಿಂದೂ ಅಧ್ಯಾತ್ಮಿಕ ಗುರುಗಳು ಅಧಿಕ ಸೇವೆ ನೀಡಿದ್ದಾರೆ: RSS ಮುಖ್ಯಸ್ಥ
masthmagaa.com: ಮಿಷನರಿಗಳು ಮಾಡಿರೋದಕ್ಕಿಂತ ಹೆಚ್ಚಿನ ಸೇವೆಯನ್ನ ಹಿಂದೂ ಅಧ್ಯಾತ್ಮಿಕ ಗುರುಗಳು ಮಾಡಿದ್ದಾರೆ ಅಂತ RSSನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. RSS ವತಿಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಭಾಗವತ್ , RSS ಆರೋಗ್ಯಕರ ಸಮಾಜವನ್ನ ಕಟ್ಟಲು ನೆರವಾಗುತ್ತೆ. ಸಮಾಜದ ಯಾವುದೇ ವರ್ಗ ಅವಕಾಶದಿಂದ ವಂಚಿತವಾಗ್ತಿದ್ರೆ, ಅದನ್ನ ದೇಶದ ಒಳಿತಿನ ದೃಷ್ಠಿಯಿಂದ ಮೇಲೆತ್ತಬೇಕು. ಸಾಮಾನ್ಯವಾಗಿ ಬುದ್ದಿ ಜೀವಿಗಳು, ಮಿಷನರಿಗಳನ್ನ ಅವುಗಳ ಸೇವೆಗಾಗಿ ಗುರುತಿಸುತ್ತಾರೆ. ಆದ್ರೆ, ದಕ್ಷಿಣದ 4 ರಾಜ್ಯಗಳಲ್ಲಿದ್ದ ಹಿಂದೂ ಅಧ್ಯಾತ್ಮಿಕ ಗುರುಗಳು, ಇತರೆ ಮಿಷನರಿಗಳು ನೀಡಿರುವುದಕ್ಕಿಂತ ಹೆಚ್ಚು ಸೇವೆ ಮಾಡಿದ್ದಾರೆ ಅಂತ ಭಾಗವತ್ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →