masthmagaa.com: ಡ್ರಗ್ಸ್ ಪ್ರಕರಣ ಸಂಬಂಧ ಮಾಜಿ ಸಚಿವ ಮತ್ತು ಹಾವೇರಿ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ​ ಸೇರಿ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಸುಜಯ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆತನಿಂದ ಅರ್ಧ ಕೆಜಿಯಷ್ಟು ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮತ್ತು ಸುನೇಶ್ ಎಂಬುವರು ತಲೆಮರೆಸಿಕೊಂಡಿದ್ದರು. ಅವರಿಬ್ಬರ ಬಂಧನಕ್ಕಾಗಿ ಸಿಸಿಬಿ ತಂಡ ಗೋವಾಕ್ಕೆ ತೆರಳಿತ್ತು‌. ಅಲ್ಲಿಯೇ ಅವರಿಬ್ಬರನ್ನು ಬಂಧಿಸಲಾಗಿದೆ‌. ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ಸಹಕಾರ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಕೂಡ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ದರ್ಶನ್ ಲಮಾಣಿ ತಂದೆ ರುದ್ರಪ್ಪ ಲಮಾಣಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರೋ ರುದ್ರಪ್ಪ ಲಮಾಣಿ, ‘ನನ್ನ ಪುತ್ರ ಅರೆಸ್ಟ್ ಆಗಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಬೆಂಗಳೂರಿಗೆ ಹೋಗ್ತೀನಿ ಅಂತ ಬಂದಿದ್ದ. ಬಳಿಕ ಫ್ರೆಂಡ್ಸ್ ಜೊತೆ ಗೋವಾಕ್ಕೆ ಹೋಗಿದ್ದಾನೆ ಅನ್ನೋದುRead More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ಬಿಗ್​ ಬಾಸ್ ಸೀಸನ್-6​ ಖ್ಯಾತಿಯ ಆಡಂ ಪಾಷಾರನ್ನು ಎನ್​ಸಿಬಿ (Narcotics Control Bureau) ಅಧಿಕಾರಿಗಾಳು ಅರೆಸ್ಟ್ ಮಾಡಿದ್ದಾರೆ. ಈತ ಇದೇ ಪ್ರಕರಣದಲ್ಲಿ ಬಂಧಿತಳಾಗಿರುವ ಡ್ರಗ್ ಪೆಡ್ಲರ್​ ಅನಿಕಾ ಜೊತೆ ನಶಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಅಂತ ಹೇಳಲಾಗ್ತಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಅಂತ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ಆಡಂ ಪಾಷಾರನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಈ ಹಿಂದೆ ಆರೋಪ ಕೇಳಿ ಬಂದಾಗ ಮಾತನಾಡಿದ್ದ ಆಡಂ ಪಾಷಾ, ‘1 ವರ್ಷದ ಹಿಂದೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಡ್ಯಾನ್ಸ್ ಕ್ಲಬ್​ನಲ್ಲಿ ಅನಿಕಾಳನ್ನು ಭೇಟಿಯಾಗಿದ್ದೆ. ಆಗ ಆಕೆ ತನ್ನ ಹೆಸರು ನಿಕಿ ಅಂತ ಹೇಳಿಕೊಂಡಿದ್ದಳು. ಆದ್ರೆ ಆಕೆ ಡ್ರಗ್ ಪೆಡ್ಲರ್ ಅಂತ ಗೊತ್ತಿರಲಿಲ್ಲ. ನಾನು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡಿಲ್ಲ. ಹೀಗಾಗಿ ನನಗೆ ಯಾವುದೇ ಭಯ ಇಲ್ಲ’ ಅಂತ ಹೇಳಿದ್ದರು. -masthmagaa.com Share on: WhatsAppContact UsRead More →

masthmagaa.com: ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಹುಡುಕಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ನಿನ್ನೆ ಮುಂಬೈಗೆ ಹೋಗಿದ್ದರು. ಮುಂಬೈನಲ್ಲಿರುವ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು. ಅಂದ್ಹಾಗೆ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಆಳ್ವ ಒಬೆರಾಯ್ ಅವರು ಆದಿತ್ಯ ಆಳ್ವ ಅವರ ಸಹೋದರಿ. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಿಯಾಂಕಾ ಆಳ್ವಗೂ ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಡ್ರಗ್​ ಪ್ರಕರಣದಲ್ಲಿ ವಿವೇಕ್ ಒಬೆರಾಯ್ ಮತ್ತು ಸಂದೀಪ್​ ಸಿಂಗ್​ನನ್ನು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಮುಂಬೈಗೆ ಬಂದಿದ್ದರು. ಆದ್ರೆ ಎನ್​ಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅವರಿಗೆ ಮೇಲಿನಿಂದ ಒತ್ತಡ ಹೇರಲಾಗುತ್ತಿದೆ. ಡ್ರಗ್​ ಕೇಸ್​ನಲ್ಲಿ ವಿವೇಕ್ ಒಬೆರಾಯ್ ಲಿಂಕ್​ ಬಗ್ಗೆ ಎನ್​ಸಿಬಿ ತನಿಖೆ ನಡೆಸಬೇಕು ಅಂತ ನಾವು ಮನವಿ ಮಾಡುತ್ತೇವೆ. ಒಂದ್ವೇಳೆ ಅವರಿಗೆ ಆಗದಿದ್ದರೆ ಮುಂಬೈ ಪೊಲೀಸರೇ ತನಿಖೆ ನಡೆಸುತ್ತಾರೆ’ ಅಂತ ಅನಿಲ್Read More →

masthmagaa.com: ಬೆಂಗಳೂರು: ಕೇಂದ್ರೀಯ ಅಪರಾಧ ವಿಭಾಗ (CCB) ಪೊಲೀಸರ ಜೊತೆಗೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ (ISD) ಸ್ಯಾಂಡಲ್​ವುಡ್​ ನಟ ಮತ್ತು ಲೂಸ್ ಮಾದ ಖ್ಯಾತಿಯ ಯೋಗೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗಿ, ‘ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು. ರಾಗಿಣಿ ಬಗ್ಗೆಯಾಗಲೀ ಅಥಾ ಬೇರೆ ಯಾರ ಬಗ್ಗೆಯೂ ನನ್ನ ಬಳಿ ಏನೂ ಕೇಳಿಲ್ಲ. ರಾಗಿಣಿ ಮತ್ತು ನನ್ನ ಜೊತೆ ಯಾವುದೇ ಸಂಬಂಧವಿಲ್ಲ. 2013ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದು ಬಿಟ್ಟರೆ ಅದಾದ ಬಳಿಕ ಒಂದೇ ಒಂದು ಮೆಸೇಜ್ ಮಾಡಿಲ್ಲ, ಕಾಲ್ ಮಾಡಿಲ್ಲ. ದಯವಿಟ್ಟು ರಾಗಿಣಿ ಜೊತೆ ನನ್ನ ಹೆಸರನ್ನು ಸೇರಿಸಬೇಡಿ. ನನಗೆ ಮದುವೆಯಾಗಿದೆ, ಒಂದು ವರ್ಷದ ಮಗು ಇದೆ’ ಅಂತ ಹೇಳಿದ್ದಾರೆ. ನಾನು ಪಾರ್ಟಿ ಮಾಡಿಲ್ಲ ಅಂತ ಹೇಳಲ್ಲ. ಮಾಡಿದ್ದೀನಿ ಅದು 2012-13ರಲ್ಲಿ ಅಷ್ಟೇ. ನಾನು ಸಿಗರೆಟ್​ ಸೇದ್ತೀನಿ, ಡ್ರಿಂಕ್ಸ್ ಮಾಡ್ತೀನಿ, ಗುಟ್ಕಾ ಹಾಕ್ತೀನಿ. ಇದನ್ನು ಬಿಟ್ಟು ಬೇರೆನೂ ಅಭ್ಯಾಸ ಇಲ್ಲ. ಶ್ರೀಲಂಕಾಗೆ ರಾಜ್​ಕಪ್​ ಆಡಲುRead More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರೋ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ವಿಚಾರದಲ್ಲಿ ಮತ್ತೆ ಹಿನ್ನಡೆಯಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್ ವಿಶೇಷ​ ಕೋರ್ಟ್​ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಇದರೊಂದಿಗೆ ಬೇಲ್ ಪಡೆದು ಜೈಲಿನಿಂದ ಹೊರಬರಬೇಕು ಅಂತ ಕಾಯ್ತಿದ್ದ ರಾಗಿಣಿ ಮತ್ತು ಸಂಜನಾ ಮತ್ತಷ್ಟು ದಿನ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯಲಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಿಸಿದಂತೆ ನಾನು ಸಂಜನಾ ಜೊತೆ ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಅಂತ ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪ್ರಶಾಂತ್ ಸಂಬರಗಿ ಕೌಂಟರ್ ಕೊಟ್ಟಿದ್ದಾರೆ. ಶ್ರೀಲಂಕಾಗೆ ಜಮೀರ್ ಅಹ್ಮದ್ ಖಾನ್ ಹೋಗಿಲ್ಲ ಅಂದ್ರೆ ತಮ್ಮ ಪಾಸ್​ಪೋರ್ಟ್​ನ ಪ್ರತಿಯನ್ನು ಮಾಧ್ಯಮಗಳ ಮುಂದೆ ತೋರಿಸಲಿ ಅಂತ ಚಾಲೆಂಜ್ ಹಾಕಿದ್ದಾರೆ. ಪ್ರಶಾಂತ್ ಸಂಬರಗಿ ಹೇಳಿದ್ದೇನು..? 2019ರ ಜೂನ್ 8ರಂದು ನೀವು (ಜಮೀರ್ ಅಹ್ಮದ್ ಖಾನ್) ಶ್ರೀಲಂಕಾದ ಕೊಲೊಂಬೋದಲ್ಲಿರುವ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೀರಾ..? ಇದಕ್ಕೆ ಹೌದು ಅಥವಾ ಇಲ್ಲ ಅಂತ ಉತ್ತರ ಕೊಡಿ. ಗ್ಯಾಂಬ್ಲಿಂಗ್​ ಬಗ್ಗೆ ಕರ್ನಾಟಕದ ಯುವ ಜನತೆಗೆ ನೀವು ನೀಡುವ ಸಂದೇಶ ಏನು..? ಗ್ಯಾಂಬ್ಲಿಂಗ್ ಬಗ್ಗೆ ನಿಮ್ಮ ಪಕ್ಷದ ನಿಲುವೇನು..? ಅಂತ ಟ್ವೀಟ್ ಮೂಲಕ ಅವರನ್ನು ಕೇಳಿದ್ದೆ. ಆದ್ರೆ ನನ್ನ ಟ್ವೀಟ್ ಅನ್ನು ತಿರುಚಿ ನನ್ನ ಮೇಲೆ ಕಂಪ್ಲೇಂಟ್ ಕೊಡಲಾಗಿದೆ. ಜನರ ದಾರಿಯನ್ನು ತಪ್ಪಿಸಲಾಗ್ತಿದೆ. ಜಮೀರ್ ಅಹ್ಮದ್ ಖಾನ್ ಸಂಜನಾ ಜೊತೆ ಹೋಗಿದ್ದರೋ, ಇಲ್ವೋ ಅಂತRead More →