masthmagaa.com: ಡ್ರಗ್ಸ್ ಪ್ರಕರಣ ಸಂಬಂಧ ಮಾಜಿ ಸಚಿವ ಮತ್ತು ಹಾವೇರಿ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ​ ಸೇರಿ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಸುಜಯ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಆತನಿಂದ ಅರ್ಧ ಕೆಜಿಯಷ್ಟು ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು. ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮತ್ತು ಸುನೇಶ್ ಎಂಬುವರು ತಲೆಮರೆಸಿಕೊಂಡಿದ್ದರು. ಅವರಿಬ್ಬರ ಬಂಧನಕ್ಕಾಗಿ ಸಿಸಿಬಿ ತಂಡ ಗೋವಾಕ್ಕೆ ತೆರಳಿತ್ತು‌. ಅಲ್ಲಿಯೇ ಅವರಿಬ್ಬರನ್ನು ಬಂಧಿಸಲಾಗಿದೆ‌. ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ಸಹಕಾರ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಕೂಡ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ದರ್ಶನ್ ಲಮಾಣಿ ತಂದೆ ರುದ್ರಪ್ಪ ಲಮಾಣಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರೋ ರುದ್ರಪ್ಪ ಲಮಾಣಿ, ‘ನನ್ನ ಪುತ್ರ ಅರೆಸ್ಟ್ ಆಗಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಬೆಂಗಳೂರಿಗೆ ಹೋಗ್ತೀನಿ ಅಂತ ಬಂದಿದ್ದ. ಬಳಿಕ ಫ್ರೆಂಡ್ಸ್ ಜೊತೆ ಗೋವಾಕ್ಕೆ ಹೋಗಿದ್ದಾನೆ ಅನ್ನೋದುRead More →

masthmagaa.com: ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಹುಡುಕಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ನಿನ್ನೆ ಮುಂಬೈಗೆ ಹೋಗಿದ್ದರು. ಮುಂಬೈನಲ್ಲಿರುವ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು. ಅಂದ್ಹಾಗೆ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಆಳ್ವ ಒಬೆರಾಯ್ ಅವರು ಆದಿತ್ಯ ಆಳ್ವ ಅವರ ಸಹೋದರಿ. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಿಯಾಂಕಾ ಆಳ್ವಗೂ ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಡ್ರಗ್​ ಪ್ರಕರಣದಲ್ಲಿ ವಿವೇಕ್ ಒಬೆರಾಯ್ ಮತ್ತು ಸಂದೀಪ್​ ಸಿಂಗ್​ನನ್ನು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಮುಂಬೈಗೆ ಬಂದಿದ್ದರು. ಆದ್ರೆ ಎನ್​ಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅವರಿಗೆ ಮೇಲಿನಿಂದ ಒತ್ತಡ ಹೇರಲಾಗುತ್ತಿದೆ. ಡ್ರಗ್​ ಕೇಸ್​ನಲ್ಲಿ ವಿವೇಕ್ ಒಬೆರಾಯ್ ಲಿಂಕ್​ ಬಗ್ಗೆ ಎನ್​ಸಿಬಿ ತನಿಖೆ ನಡೆಸಬೇಕು ಅಂತ ನಾವು ಮನವಿ ಮಾಡುತ್ತೇವೆ. ಒಂದ್ವೇಳೆ ಅವರಿಗೆ ಆಗದಿದ್ದರೆ ಮುಂಬೈ ಪೊಲೀಸರೇ ತನಿಖೆ ನಡೆಸುತ್ತಾರೆ’ ಅಂತ ಅನಿಲ್Read More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆದಿತ್ಯ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿ ಕೂತಿರುವ ಮಾಹಿತಿ ಪಡೆದ ಪೊಲೀಸರು ನಿನ್ನೆಯಷ್ಟೇ ಬಾಲಿವುಡ್​  ನಟ ವಿವೇಕ್ ಒಬೆರಾಯ್ ಮನೆ ದಾಳಿ ನಡೆಸಿದ್ದರು. ಈ ವೇಳೆ ವಿವೇಕ್ ಒಬೆರಾಯ್ ಮನೆಯವರು ವಿರೋಧ ವ್ಯಕ್ತಪಡಿಸಿದ್ರು ಅನ್ನೋ ಬಗ್ಗೆಯೂ ವರದಿಯಾಗಿತ್ತು. ಇದೀಗ ವಿವೇಕ್ ಒಬೆರಾಯ್ ಅವರ ಪತ್ನಿ ಮತ್ತು ಆದಿತ್ಯಾ ಆಳ್ವನ ಸಹೋದರಿಯಾಗಿರುವ ಪ್ರಿಯಾಂಕಾ ಆಳ್ವ ಒಬೆರಾಯ್​ಗೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್​ನಲ್ಲಿ ಏನು ಹೇಳಲಾಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ. ಇನ್ನು ನಿನ್ನೆಯ ರೇಡ್ ವೇಳೆ ಆದಿತ್ಯ ಆಳ್ವ ಒಬೆರಾಯ್ ಮನೆಯಲ್ಲಿದ್ದನಾ ಅಥವಾ ಇಲ್ವಾ ಅನ್ನೋದನ್ನ ಸಿಸಿಬಿ ಸ್ಪಷ್ಟಪಡಿಸಿಲ್ಲ. ದಾಳಿ ಬಗ್ಗೆ ನಿನ್ನೆ ಮಾತನಾಡಿದ್ದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ‘ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ಆತ ವಿವೇಕ್ ಒಬೆರಾಯ್Read More →

masthmagaa.com: ಬೆಂಗಳೂರು: ಕೇಂದ್ರೀಯ ಅಪರಾಧ ವಿಭಾಗ (CCB) ಪೊಲೀಸರ ಜೊತೆಗೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಇಂಟಲಿಜೆನ್ಸ್ ಸೆಕ್ಯುರಿಟಿ ಡಿವಿಷನ್ (ISD) ಸ್ಯಾಂಡಲ್​ವುಡ್​ ನಟ ಮತ್ತು ಲೂಸ್ ಮಾದ ಖ್ಯಾತಿಯ ಯೋಗೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಯೋಗಿ, ‘ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು. ರಾಗಿಣಿ ಬಗ್ಗೆಯಾಗಲೀ ಅಥಾ ಬೇರೆ ಯಾರ ಬಗ್ಗೆಯೂ ನನ್ನ ಬಳಿ ಏನೂ ಕೇಳಿಲ್ಲ. ರಾಗಿಣಿ ಮತ್ತು ನನ್ನ ಜೊತೆ ಯಾವುದೇ ಸಂಬಂಧವಿಲ್ಲ. 2013ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದು ಬಿಟ್ಟರೆ ಅದಾದ ಬಳಿಕ ಒಂದೇ ಒಂದು ಮೆಸೇಜ್ ಮಾಡಿಲ್ಲ, ಕಾಲ್ ಮಾಡಿಲ್ಲ. ದಯವಿಟ್ಟು ರಾಗಿಣಿ ಜೊತೆ ನನ್ನ ಹೆಸರನ್ನು ಸೇರಿಸಬೇಡಿ. ನನಗೆ ಮದುವೆಯಾಗಿದೆ, ಒಂದು ವರ್ಷದ ಮಗು ಇದೆ’ ಅಂತ ಹೇಳಿದ್ದಾರೆ. ನಾನು ಪಾರ್ಟಿ ಮಾಡಿಲ್ಲ ಅಂತ ಹೇಳಲ್ಲ. ಮಾಡಿದ್ದೀನಿ ಅದು 2012-13ರಲ್ಲಿ ಅಷ್ಟೇ. ನಾನು ಸಿಗರೆಟ್​ ಸೇದ್ತೀನಿ, ಡ್ರಿಂಕ್ಸ್ ಮಾಡ್ತೀನಿ, ಗುಟ್ಕಾ ಹಾಕ್ತೀನಿ. ಇದನ್ನು ಬಿಟ್ಟು ಬೇರೆನೂ ಅಭ್ಯಾಸ ಇಲ್ಲ. ಶ್ರೀಲಂಕಾಗೆ ರಾಜ್​ಕಪ್​ ಆಡಲುRead More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರೋ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ವಿಚಾರದಲ್ಲಿ ಮತ್ತೆ ಹಿನ್ನಡೆಯಾಗಿದೆ. ಇಬ್ಬರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್ ವಿಶೇಷ​ ಕೋರ್ಟ್​ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಇದರೊಂದಿಗೆ ಬೇಲ್ ಪಡೆದು ಜೈಲಿನಿಂದ ಹೊರಬರಬೇಕು ಅಂತ ಕಾಯ್ತಿದ್ದ ರಾಗಿಣಿ ಮತ್ತು ಸಂಜನಾ ಮತ್ತಷ್ಟು ದಿನ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯಲಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರುವ ನಟಿ ರಾಗಿಣಿ ದ್ವಿವೇದಿಗೆ ಇಂದು ಕೂಡ ಬೇಲ್ ಸಿಕ್ಕಿಲ್ಲ. ನಟಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ. ಹೀಗಾಗಿ ಜಾಮೀನು ಪಡೆದು ಸಿಸಿಬಿ ಕಸ್ಟಡಿಯಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ‘ತುಪ್ಪದ ಬೆಡಗಿ’ಗೆ ಮತ್ತೆ ನಿರಾಸೆಯಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಿಸಿದಂತೆ ನಾನು ಸಂಜನಾ ಜೊತೆ ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಅಂತ ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪ್ರಶಾಂತ್ ಸಂಬರಗಿ ಕೌಂಟರ್ ಕೊಟ್ಟಿದ್ದಾರೆ. ಶ್ರೀಲಂಕಾಗೆ ಜಮೀರ್ ಅಹ್ಮದ್ ಖಾನ್ ಹೋಗಿಲ್ಲ ಅಂದ್ರೆ ತಮ್ಮ ಪಾಸ್​ಪೋರ್ಟ್​ನ ಪ್ರತಿಯನ್ನು ಮಾಧ್ಯಮಗಳ ಮುಂದೆ ತೋರಿಸಲಿ ಅಂತ ಚಾಲೆಂಜ್ ಹಾಕಿದ್ದಾರೆ. ಪ್ರಶಾಂತ್ ಸಂಬರಗಿ ಹೇಳಿದ್ದೇನು..? 2019ರ ಜೂನ್ 8ರಂದು ನೀವು (ಜಮೀರ್ ಅಹ್ಮದ್ ಖಾನ್) ಶ್ರೀಲಂಕಾದ ಕೊಲೊಂಬೋದಲ್ಲಿರುವ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೀರಾ..? ಇದಕ್ಕೆ ಹೌದು ಅಥವಾ ಇಲ್ಲ ಅಂತ ಉತ್ತರ ಕೊಡಿ. ಗ್ಯಾಂಬ್ಲಿಂಗ್​ ಬಗ್ಗೆ ಕರ್ನಾಟಕದ ಯುವ ಜನತೆಗೆ ನೀವು ನೀಡುವ ಸಂದೇಶ ಏನು..? ಗ್ಯಾಂಬ್ಲಿಂಗ್ ಬಗ್ಗೆ ನಿಮ್ಮ ಪಕ್ಷದ ನಿಲುವೇನು..? ಅಂತ ಟ್ವೀಟ್ ಮೂಲಕ ಅವರನ್ನು ಕೇಳಿದ್ದೆ. ಆದ್ರೆ ನನ್ನ ಟ್ವೀಟ್ ಅನ್ನು ತಿರುಚಿ ನನ್ನ ಮೇಲೆ ಕಂಪ್ಲೇಂಟ್ ಕೊಡಲಾಗಿದೆ. ಜನರ ದಾರಿಯನ್ನು ತಪ್ಪಿಸಲಾಗ್ತಿದೆ. ಜಮೀರ್ ಅಹ್ಮದ್ ಖಾನ್ ಸಂಜನಾ ಜೊತೆ ಹೋಗಿದ್ದರೋ, ಇಲ್ವೋ ಅಂತRead More →

masthmagaa.com: ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆದ ಸ್ಯಾಂಡಲ್​ವುಡ್​ನ ಎರಡನೇ ನಟಿ ಇವರಾಗಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಂದ್ಹಾಗೆ ಇಂದು ಬೆಳಗ್ಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಇನ್ಸ್​ಪೆಕ್ಟರ್ ಪುನೀತ್, ಅಂಜುಮಾಲಾ ನಾಯಕ್, ಎಸಿಪಿ ಗೌತಮ್ ಮತ್ತು ಡಿಸಿಪಿ ರವಿಕುಮಾರ್ ಮುಂತಾದವರು ಸಂಜನಾ ಗಲ್ರಾನಿಯನ್ನು ಮೂರ್ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅರೆಸ್ಟ್ ಮಾಡಿದ್ದಾರೆ. ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಕೋರ್ಟ್​ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ಕಸ್ಟಡಿಗೆ ಕೊಡುವಂತೆ ಸಿಸಿಬಿ ಪೊಲೀಸರು ಕೋರ್ಟ್​ಗೆ ಮನವಿ ಮಾಡಲಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು. ಇದೀಗ ಸಂಜನಾ ಗಲ್ರಾನಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವತ್ತೇ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಂದ್ಹಾಗೆ ಇಂದು ಬೆಳಗ್ಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತರಲಾಯ್ತು. ಸದ್ಯ ಸಿಸಿಬಿ ಕಚೇರಿಯಲ್ಲಿ ಇನ್ಸ್​ಪೆಕ್ಟರ್ ಪುನೀತ್, ಅಂಜುಮಾಲಾ ನಾಯಕ್, ಎಸಿಪಿ ಗೌತಮ್ ಮತ್ತು ಡಿಸಿಪಿ ರವಿಕುಮಾರ್ ಡ್ರಗ್ಸ್ ಪ್ರಕರಣದ ಬಗ್ಗೆ ಸಂಜನಾ ಗಲ್ರಾನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ‘ಪ್ರಶಾಂತ್ ಸಂಬರಗಿಗೆ ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನನ್ನ ಹೆಸರು ತೆಗೆದುಕೊಳ್ಳುವ ಧಮ್ ಕೂಡ ಇಲ್ಲ. ಅವನು ಒಬ್ಬ ಹಂದಿ. ಖಂಡಿತವಾಗಿಯೂ ಹಂದಿ. ನಾನು ಒಂದೇ ಸಿನಿಮಾ ಮಾಡಿದ್ದೇನೆ ಅಂತ ಹೇಳುತ್ತಾನೆ. ನಾನು ಮಾಡಿದ 50 ಸಿನಿಮಾಗಳು ಅವನ ಕಣ್ಣಿಗೆ ಕಾಣಿಸಿಲ್ಲ ಅಂದ್ರೆ ಆತ ಖಂಡಿತವಾಗಿಯೂ ಹಂದಿನೇ. ಅಂತಹ ಕಣ್ಣು ಕಾಣದ ಹಂದಿ ಬಗ್ಗೆ ನಾವ್ಯಾಕೆ ಗಮನ ಕೊಡಬೇಕು’ ಅಂತ ಸಂಜನಾ ಗಲ್ರಾನಿ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪ್ರಶಾಂತ್ ಸಂಬರಗಿ, ‘ಗಂಡ ಹೆಂಡತಿ’ ಚಿತ್ರದ ನಾಯಕಿ ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ಆಕೆಯ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಅಂತಾನೂ ಹೇಳಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯಿಸಿರುವ ಸಂಜನಾ ಗಲ್ರಾನಿ ‘ಅವನು ಕಣ್ಣು ಕಾಣದ ಹಂದಿ’ ಅಂತ ಕೆಂಡಾಮಂಡಲರಾಗಿದ್ದಾರೆ. ಅಂದ್ಹಾಗೆ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ಅವರ ಸ್ನೇಹಿತ ರಾಹುಲ್ ಈಗಾಗಲೇ ಸಿಸಿಬಿ ವಿಚಾರಣೆಗೆ ಒಳಪಟ್ಟಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಗೆಳೆಯ ಕಾರ್ತಿಕ್​ನನ್ನು ಕೂಡ ವಿಚಾರಣೆ ನಡೆಸಲಾಗಿದೆ.Read More →