KR ಮಾರುಕಟ್ಟೆಯಲ್ಲಿ ಹಣ ಎಸೆದಿದ್ದ ವ್ಯಕ್ತಿ ನೀಡಿದ ಕಾರಣ ಏನು ಗೊತ್ತಾ?
2023-01-25
masthmagaa.com: KR ಮಾರುಕಟ್ಟೆ ಮೇಲ್ಸೇತುವೆಯಿಂದ ಅರುಣ್ ಅನ್ನೊ ವ್ಯಕ್ತಿಯೊಬ್ಬ ನಿನ್ನೆ 10 ರೂ. ಮುಖಬೆಲೆಯ ನೋಟುಗಳನ್ನ ಎಸೆದು, ಪೊಲೀಸ್ ವಶವಾಗಿದ್ದ. ಇದೀಗ ತಾನು ಪ್ರಚಾರಕ್ಕಾಗಿ ಹಣ ಎಸೆದಿರೋದಾಗಿ ಹೇಳಿದ್ದಾನೆ. ʻಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ವಿಡಿಯೋ ಮಾಡಿ, ಫೇಸ್‌ಬುಕ್, ಇನ್‌ಸ್ಟಾ ಹಾಗೂ ಯುಟ್ಯೂಬ್‌ನಲ್ಲಿ ಹಾಕ್ತೇನೆ. ಆದ್ರೆ ನನಗೆ ಹೆಚ್ಚು ಪ್ರಚಾರ ಸಿಗ್ತಿರಲಿಲ್ಲ. ಜನರು ನನಗಾಗಿ ಟೈಮ್ ಕೊಡ್ತಿರಲಿಲ್ಲ. ಹಾಗಾಗಿ ಹೆಚ್ಚು ಪ್ರಚಾರ ಸಿಗಬಹುದು ಅಂತ ಸ್ನೇಹಿತನ ಜೊತೆ ಸೇರಿ ಈ ರೀತಿ ಮಾಡಿದೆ. ಕಡಿಮೆ ಹಣದಲ್ಲಿ ಹೆಚ್ಚು ಪ್ರಚಾರ ಪಡೆಯುವುದು ಹೇಗೆ ಅನ್ನೊದನ್ನ ತೋರಿಸೋದು ನನ್ನ ಉದ್ದೇಶವಾಗಿತ್ತು. ಇದೀಗ ಎಲ್ಲಡೆಯೂ ನನ್ನದೇ ಸುದ್ದಿʼ ಅಂತ ಅರುಣ್ ಹೇಳಿಕೆ ನೀಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →