masthmagaa.com: ಹೈದ್ರಾಬಾದ್‌ ಇಂದು ಎರಡು ರಾಜಕೀಯ ವೈರಿಗಳ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿತ್ತು.1948 ಸೆಪ್ಟೆಂಬರ್‌ 17 ರವರೆಗೂ ನಿಜಾಮರ ಕೈಯಲ್ಲಿದ್ದ ಹೈದ್ರಾಬಾದ್‌ ಆ ನಂತರ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯ್ತು.ಇದರ ನೆನಪಿಗಾಗಿ ಇಂದು ಕೇಂದ್ರ ಹಾಗೂ ತೆಲಂಗಾಣ ಸರ್ಕಾರಗಳು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿದ್ವು. ಕೇಂದ್ರ ಸರ್ಕಾರ ಈ ದಿನವನ್ನ ʻಹೈದ್ರಾಬಾದ್‌ ಲಿಬರೇಷನ್‌ ಡೇʼ ಅಂತ ಆಚರಣೆ ಮಾಡಿದ್ರೆ ಅತ್ತ ತೆಲಂಗಾಣ ಸರ್ಕಾರದಿಂದ ʻರಾಷ್ಟ್ರೀಯ ಏಕೀಕರಣ ದಿನʼ ಅಂತ ಸೆಲೆಬ್ರೇಟ್‌ ಮಾಡಲಾಗಿದೆ. ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಭಾಗಿಯಾಗಿದ್ರು. ಸ್ವಾತಂತ್ರ ಹೋರಾಟಗಾರರಿಗೆ ನಮನ ಸಲ್ಲಿಸಿ ಬಳಿಕ ದೊಡ್ಡ ರ್ಯಾಲಿ ಕೂಡ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್‌ ಶಾ ರಾಜ್ಯ ಸರ್ಕಾರದ ವೋಟ್‌ ಬ್ಯಾಂಕ್‌ ರಾಜಕಾರಣದಿಂದ ಲಿಬರೇಷನ್‌ ದಿನವನ್ನ ಇಷ್ಟು ದಿನ ಅಧಿಕೃತವಾಗಿ ಆಚರಣೆ ಮಾಡಿಲ್ಲ ಅಂತ ವಾಗ್ದಾಳಿ ಮಾಡಿದ್ರು. ಇನ್ನು ಈ ಭೇಟಿಯ ವೇಳೆ ಅಮಿತ್‌ ಶಾ ಅವರಿಗೆ ಭದ್ರತಾ ಲೋಪ ಕೂಡ ಆಗಿತ್ತು. ಅವರು ಹೋಗ್ತಿದ್ದ ದಾರಿಯಲ್ಲಿ ಅವರ ಕಾರಿನ ಮುಂದೆ ಇನ್ನೊಂದುRead More →

masthmagaa.com: ಬಿಜೆಪಿಯಲ್ಲಿ ಯಡಿಯೂರಪ್ಪರ ಯುಗ ಮುಗೀತು ಅನ್ನೋ ಹೇಳಿಕೆಗಳು ಊಹಾಪೋಹಾಗಳು ಮೆಲ್ಲಗೆ ಕಾವು ಪಡೀತಿರೋ ಹೊತ್ತಲ್ಲೇ ಇದೀಗ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪರನ್ನ ಮತ್ತೆ ರಾಷ್ಟ್ರರಾಜಕಾರಣಕ್ಕೆ ಎಳೆದು ತಂದಿದೆ. ಬಿಜೆಪಿ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಬಿಎಸ್‌ವೈರನ್ನ ಸೇರ್ಪಡೆ ಮಾಡಲಾಗಿದೆ. ಇವರ ಜೊತೆಯಲ್ಲೇ ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಹಾಗೂ ಬಿಜೆಪಿ OBC ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಹೈದರಾಬಾದ್ ಮೂಲದ ಕೆ. ಲಕ್ಷ್ಮಣ್ ಅವರನ್ನೂ ಈ ಅತ್ಯುನ್ನತ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಅಂದ್ಹಾಗೆ ಈ ಬಿಜೆಪಿ ಸಂಸದೀಯ ಮಂಡಳಿ ಅನ್ನೋದು ಪಕ್ಷದ ರಿಯಲ್ ಪವರ್‌ ಸೆಂಟರ್‌ ಇದ್ದಾಗೆ. ಪಕ್ಷಕ್ಕೆ ಸಂಬಂಧಪಟ್ಟ ಯಾವುದೇ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಮಂಡಳಿಯಾಗಿರುತ್ತೆ. ಅಧ್ಯಕ್ಷರನ್ನೂ ಒಳಗೊಂಡಂತೆ 11 ಮಂದಿ ಸದಸ್ಯರು ಇರ್ತಾರೆ. ಇದಕ್ಕೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮುಖ್ಯಸ್ಥರಾಗಿದ್ದಾರೆ. ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಕೂಡಾ ಇದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಪರವಾಗಿ ಪಕ್ಷದ ದೈನಂದಿನ ನಿರ್ಧಾರಗಳನ್ನ ಕೈಗೊಳ್ಳುವRead More →