‘ತಾಂಡವ್’ ಆಯ್ತು.. ಈಗ ‘ಮಿರ್ಜಾಪುರ್’ ವೆಬ್ ಸರಣಿ ವಿವಾದ
masthmagaa.com: ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗ್ತಿರುವ ಒಂದೊಂದೇ ವೆಬ್ ಸಿರೀಸ್ ವಿವಾದದ ಕೇಂದ್ರಬಿಂದುವಾಗ್ತಿದೆ. ಕಳೆದ ಕೆಲ ದಿನಗಳಿಂದ ‘ತಾಂಡವ್’ ವೆಬ್ ಸರಣಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದ್ರಲ್ಲಿ ಹಿಂದೂ ದೇವತೆಗಳನ್ನ ಅವಮಾನ ಮಾಡಲಾಗಿದೆ, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ ಹೇಳಲಾಗಿತ್ತು. ಈ ಸಂಬಂಧ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಹಲವು ಎಫ್ಐಆರ್ ದಾಖಲಾಗಿತ್ತು. ವಿವಾದದ ಬಳಿಕ ಕ್ಷಮೆ ಕೇಳಿದ್ದ ಚಿತ್ರತಂಡ, ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದೀಗ ಉತ್ತರಪ್ರದೇಶದಿಂದ ಮುಂಬೈಗೆ ಬಂದಿರುವ ಪೊಲೀಸರು ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ಗೆ ನೋಟಿಸ್ ಕೊಟ್ಟಿದ್ಧಾರೆ. ಜನವರಿ 27ರಂದು ವಿಚಾರಣೆಗೆ ಬರುವಂತೆ ಅದರಲ್ಲಿ ಸೂಚಿಸಲಾಗಿದೆ. ಇನ್ನು ತಾಂಡವ್ ಬಳಿಕ ಇದೀಗ ಮಿರ್ಜಾಪುರ್ ವೆಬ್ ಸಿರೀಸ್ ಕೂಡ ವಿವಾದಕ್ಕೆ ಗ್ರಾಸವಾಗಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 2018ರಲ್ಲಿ ರಿಲೀಸ್ ಆಗಿದ್ದ ಈ ವೆಬ್ ಸರಣಿಯಲ್ಲಿ ಉತ್ತರಪ್ರದೇಶದ ಮಿರ್ಜಾಪುರ್ ಹೆಸರಿಗೆ ಧಕ್ಕೆಯುಂಟು ಮಾಡಲಾಗಿದೆ. ಮಿರ್ಜಾಪುರವನ್ನ ಗೂಂಡಾ ಮತ್ತು ವ್ಯಭಿಚಾರಿಗಳ ನಗರವೆಂದು ಬಿಂಬಿಸಲಾಗಿದೆ ಅಂತ ಮಿರ್ಜಾಪುರದ ಪತ್ರಕರ್ತರೊಬ್ರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದRead More →