masthmagaa.com: ಉತ್ತರ ಪ್ರದೇಶ ಹತ್ಯೆ, ಅತ್ಯಾಚಾರ, ಮಾಫಿಯಾದಿಂದ ಆಚರಣೆ, ಸಂಪ್ರದಾಯ, ಹಬ್ಬಗಳ ನಾಡಾಗಿ ಬದಲಾಗುತ್ತಿದೆ ಅಂತ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಬಣ್ಣಿಸಿದ್ದಾರೆ. ಆರು ವರ್ಷಗಳ ಅಧಿಕಾರ ಪೂರೈಸಿ ಯುಪಿಯಲ್ಲಿ ಅತಿದೀರ್ಘ ಆಡಳಿತ ಮಾಡಿದ ಸಿಎಂ ಅಂತ ಕರೆಸಿಕೊಂಡಿರೋ ಯೋಗಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ನರಬಲಿ ಪ್ರಕರಣಗಳು ಮತ್ತೆ ವರದಿಯಾಗಿವೆ. ಇದೀಗ ಉತ್ತರ ಪ್ರದೇಶದಲ್ಲಿ 10 ವರ್ಷದ ಹುಡುಗನನ್ನ ಅವರ ಸಂಬಂಧಿಕರೇ ಬಲಿ ಕೊಟ್ಟಿದ್ದಾರೆ. ಲಕ್ನೋ ಬಳಿಯ ಗ್ರಾಮವೊಂದರಲ್ಲಿ ವಿವೇಕ್‌ ಅನ್ನೋ 10 ವರ್ಷದ ಹುಡುಗನನ್ನ ಅನೂಪ್‌ ಅನ್ನೋ ಸಂಬಂಧಿ ನರಬಲಿ ಕೊಟ್ಟಿದ್ದಾನೆ. ಅನೂಪ್‌ ಮಾನಸಿಕ ಅಸ್ವಸ್ತತೆಯಿಂದ ಬಳಲ್ತಾ ಇದ್ನಂತೆ. ಅಸ್ಪತ್ರೆಗೆ ಹೋಗಿ ಬಂದ್ರೂ ಕೂಡ ಆತ ಗುಣಮುಖನಾಗಿರಲಿಲ್ಲವಂತೆ. ಹೀಗಾಗಿ ಆತ ವಾಮಾಚಾರದ ಮೊರೆಹೋಗಿದ್ದಾನೆ. ಅಲ್ಲಿ ಈ ಉಪದೇಶ ಸಿಕ್ಕಿದ್ದು ತನ್ನ ಸಂಬಂಧಿಯ ಮಗನನ್ನೇ ಕೊಂದಿದ್ದಾನೆ. -masthmagaa.com Share on: WhatsAppContact Us for AdvertisementRead More →

masthmagaa.com: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವ್ರು ಮಾಫಿಯಾ ಮಣ್ಣು ಮಾಡ್ತೀವಿ ಅಂತ ಹೇಳಿದ್ದ ಬೆನ್ನಲ್ಲೇ, ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಅರ್ಬಾಜ್‌ನನ್ನ ಎನ್‌ಕೌಂಟರ್‌ ಮಾಡಲಾಗಿತ್ತು. ಇದೀಗ ಇನ್ನೂ ಕೆಲ ಆರೋಪಿಗಳನ್ನ ಮಣ್ಣಾಗಿಸೊ ಕೆಲಸ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ತಮ್ಮ ಪ್ರಸಿದ್ಧ ಬುಲ್ಡೋಜರ್‌ ಅಸ್ತ್ರವನ್ನ ಬಳಸಿದೆ. ಕಾಣೆಯಾಗಿರೋ ಆರೋಪಿಯೊಬ್ಬನ ಸಂಬಂಧಿಕರ ಮನೆ ಮುಂದೆ ಬುಲ್ಡೋಜರ್‌ ಬಂದು ನಿಂತಿದೆ. ಉಮೇಶ್‌ ಪಾಲ್‌ ಹತ್ಯೆಗೆ ಅವರ ಕುಟುಂಬದವ್ರು ಅತೀಕ್‌ ಅಹಮ್ಮದ್‌ನನ್ನ ಆರೋಪಿಸಿದ್ದಾರೆ. ಹೀಗಾಗಿ ಅರ್ಬಾಜ್‌ ಎನ್‌ಕೌಂಟರ್‌ ನಂತ್ರ ಅತೀಕ್‌ ಕುಟುಂಬ ತಮ್ಮ ಮೂರನೇ ಮಗ ಅಸಾದ್‌ನನ್ನು ಕೂಡ ಎನ್‌ಕೌಂಟರ್‌ ಮಾಡಿದ್ರೆ ಅನ್ನೊ ಭಯದಲ್ಲಿದೆ ಎನ್ನಲಾಗಿದೆ. ಯಾಕಂದ್ರೆ ಉಮೇಶ್ ಪಾಲ್ ಹತ್ಯೆ ನಡೆದ ಸಂದರ್ಭದಲ್ಲಿ ಅಸಾದ್‌ ಕೂಡ ಇರೋದು ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ. ಅದ್ರಿಂದ ಅಸಾದ್‌ ಕೂಡ ಎನ್‌ಕೌಂಟರ್‌ಗೆ ಬಲಿಯಾಗೊ ಸಾಧ್ಯತೆ ಹೆಚ್ಚಿದೆ ಅಂತ ಹೇಳಲಾಗ್ತಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾಫಿಯಾ ವಿರುದ್ದ ಗುಡುಗಿದ ಬೆನ್ನಲ್ಲೇ ಇಂದು ಉತ್ತರ ಪ್ರದೇಶದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಮೇಶ್‌ ಪಾಲ್‌ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅರ್ಬಾಜ್‌ನನ್ನ ಎನ್‌ಕೌಂಟರ್‌ ಮಾಡಲಾಗಿದೆ. ಸ್ಪೆಶಲ್‌ ಆಪರೇಶನ್ಸ್‌ ಗ್ರೂಪ್‌ ಹಾಗೂ ಯುಪಿ ಪೊಲೀಸರ ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಯನ್ನ ಹತ್ಯೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ನಿನ್ನೆ ಮಾಫಿಯಾ ವಿರುದ್ದ ಅಬ್ಬರಿಸಿದ್ದ ಯೋಗಿ, ʻಇಸ್ ಮಾಫಿಯಾ ಕೋ ಮಿಟ್ಟಿ ಮೇ ಮಿಲಾದೇಂಗೇʼ ಅಂದ್ರೆ ಮಾಫಿಯಾವನ್ನ ಮಣ್ಣಿನಲ್ಲಿ ಹೂತುಹಾಕ್ತೀವಿ ಅಂತೇಳಿ ವಿರೋಧ ಪಕ್ಷಗಳ ವಿರುದ್ಧ ಸಿಡಿದು ಬಿದ್ದಿದ್ದಾರೆ. ಕಲಾಪದಲ್ಲಿ ಅಖಿಲೇಶ್‌ ಯಾದವ್‌ 2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವ್ರ ಹತ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗಿ, ದರೋಡೆಕಾರರು ಹಾಗೂ ಮಾಫಿಯಾಗಳಿಗೆ ಪ್ರೋತ್ಸಾಹ ನೀಡಿದವ್ರು ಯಾರು ಅಂತ ಪ್ರಶ್ನೆ ಮಾಡಿದ್ದಾರೆ. ಉಮೇಶ್‌ ಪಾಲ್‌ ಹತ್ಯೆಗೆ ಅವರ ಕುಟುಂಬದವ್ರು ಅತೀಕ್‌ ಅಹಮ್ಮದ್‌ನನ್ನ ಆರೋಪಿಸಿದ್ದಾರೆ. ಈ ಅತೀಕ್‌ ಅಹ್ಮದ್ ಸಮಾಜವಾದಿRead More →

masthmagaa.com: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ ಅವರ ನಿವಾಸದ ಹೊರಗಡೆ ಸ್ಪೋಟಕ ಇಡಲಾಗಿದೆ ಅನ್ನೊ ಬೆದರಿಕೆ ಕರೆ ಬಂದಿತ್ತು. ವಿಷಯ ತಿಳಿದ ಕೂಡಲೇ ಸ್ಪೋಟಕ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದು ಸುತ್ತಮುತ್ತಲಿನ ಪ್ರದೇಶವನ್ನ ಸಂಪೂರ್ಣವಾಗಿ ಹುಡುಕಿದ್ರು. ಆದ್ರೆ ಯಾವುದೇ ಸ್ಪೋಟಕ ವಸ್ತು ದೊರಕಿಲ್ಲ. ಅಪರಚಿತ ವ್ಯಕ್ತಿಯೊಬ್ಬ ಸುಳ್ಳು ಬೆದರಿಕೆ ಕರೆ ಮಾಡಿದ್ದು, ಆತನ ಪತ್ತೆಗಾಗಿ ತನಿಖೆ ಮಾಡಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಕೇಸ್‌ನ ಆರೋಪಿಗಳಲ್ಲಿ ಒಬ್ರಾಗಿರೋ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವ್ರ ಪುತ್ರನ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿರೋಧಿಸಿದೆ. ಇವ್ರು ಮಾಡಿರೋದು ಘೋರ ಮತ್ತು ಗಂಭೀರ ಅಪರಾಧವಾಗಿದ್ದು, ಜಾಮೀನು ನೀಡೋದ್ರಿಂದ ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟಂತಾಗುತ್ತೆ ಅಂತ ಅಲ್ಲಿನ ಸರ್ಕಾರದ ಪರ ಲಾಯರ್‌ ಹೇಳಿದ್ದಾರೆ. ಅಂದ್ಹಾಗೆ 2021 ಅಕ್ಟೋಬರ್‌ 3ರಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡ್ತಿದ್ದ ರೈತರ ಮೇಳೆ ಆರೋಪಿ ಆಶಿಶ್‌ ಮಿಶ್ರಾ ಹಾಗೂ ಅವ್ರ ಬೆಂಗಾವಲು ಪಡೆ ವಾಹನಗಳು ಚಲಿಸಿದ್ವು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ಕು ಜನ ರೈತರು ಸೇರಿ 8 ಜನ ಮೃತಪಟ್ಟಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಮುಖಂಡರೊಬ್ರು ಅಲ್ಲಿನ ಸಮಾಜವಾದಿ ಪಕ್ಷದ ನಾಯಕರ ಮಗಳಿಗೆ ಆಮಿಷವೊಡ್ಡಿ, ಕರ್ಕೊಂಡು ಓಡಿಹೋಗಿದ್ದಾರೆ ಅಂತ ಆರೋಪಿಸಲಾಗಿದೆ. ಆರೋಪಿಯನ್ನ ಹರ್ದೋಯ್ ಘಟಕದ ಬಿಜೆಪಿ ಕಾರ್ಯದರ್ಶಿ 45 ವರ್ಷದ ಆಶಿಶ್ ಶುಕ್ಲಾ ಅಂತ ಗುರ್ತಿಸಲಾಗಿದೆ. ಈತ ಮದುವೆ ಕೂಡ ಆಗಿದ್ದ ಅಂತ ಹೇಳಲಾಗಿದ್ದು, ಸ್ಥಳೀಯ ಎಸ್‌ಪಿ ನಾಯಕನ 25 ವರ್ಷದ ಪುತ್ರಿಯ ಜೊತೆ ಈತ ಓಡಿಹೋಗಿದ್ದಾರೆ ಅಂತ ವರದಿಯಾಗಿದೆ. ಇದ್ರ ಬೆನ್ನಲ್ಲೇ ಶುಕ್ಲಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಆಪರೇಷನ್‌ ಮಾಡಿದ ವೈದ್ಯರೊಬ್ರು ಆಕೆಯ ಹೊಟ್ಟೆಯಲ್ಲಿ ಟವೆಲ್‌ ಮರೆತು ಬಿಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಜ್ರಾನಾ ಅನ್ನೋ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುಪಿಯ ಅಮ್ರೋಹಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಆಪರೇಷನ್‌ ಮಾಡಿದ ವೈದ್ಯರು ಟವೆಲ್‌ ಮರೆತು ಹೊಟ್ಟೆಯಲ್ಲೇ ಬಿಟ್ಟಿದ್ದಾರೆ. ನಜ್ರಾನಾ ಮನೆಗೆ ಬಂದ ನಂತ್ರ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಮತ್ತೊಂದು ಆಸ್ಪತ್ರೆಗೆ ಹೋದಾಗ ಅಲ್ಲಿ ಹೊಟ್ಟೆಯಲ್ಲಿ ಟವೆಲ್‌ ಇರೋದು ಕಂಡು ಬಂದಿದೆ. ಈ ಕೇಸ್‌ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಅಂತ ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಯೋಧ್ಯ ರಾಮಭೂಮಿಯಂತೆ ಶ್ರೀಕೃಷ್ಣರ ಜನ್ಮಸ್ಥಾನದ ಬಗ್ಗೆ ಕೂಡ ವಿವಾದ ಇದೆ. ಇದೀಗ ಈ ವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿರುವ ವಿವಾದಿತ ಶಾಹಿ ಈದ್ಗಾ ಮಸೀದಿಯನ್ನ ಸಮೀಕ್ಷೆ ಮಾಡಿ ಅಂತ ಮಥುರಾದ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜನವರಿ 2ರಿಂದ ಸರ್ವೆ ಮಾಡಿ ಜನವರಿ 20ಕ್ಕೆ ವರದಿ ಸಲ್ಲಿಸ್ಬೇಕು ಅಂತ ಕೋರ್ಟ್‌ ಹೇಳಿದೆ. ಮಥುರಾದಲ್ಲಿರೋ ಶ್ರೀಕೃಷ್ಣ ಜನ್ಮಭೂಮಿಯನ್ನ ಅತಿಕ್ರಮಣ ಮಾಡಿ ಮಸೀದಿ ನಿರ್ಮಿಸಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನ ನೆರವೇರಿಸೋಕೆ ಅವಕಾಶ ನೀಡ್ಬೇಕು ಅಂತ ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಶಾಹಿ ಈದ್ಗಾ ಮಸೀದಿ ಇರೋ ಸ್ಥಳದಲ್ಲಿಯೇ ಶ್ರೀಕೃಷ್ಣರ ಪುರಾತನ ದೇಗುಲವೂ ಇತ್ತು. ಶ್ರೀಕೃಷ್ಣರ ಜನ್ಮಭೂಮಿಯ ಗರ್ಭ ಗುಡಿ ಮೇಲೆಯೇ ಮಸೀದಿಯನ್ನ ನಿರ್ಮಿಸಲಾಗಿದೆ. ಹಾಗಾಗಿ ಮಸೀದಿಗೆ ಪ್ರವೇಶಿಸಿ ಅಭಿಷೇಕ ನಡೆಸೋಕೆ ಅವಕಾಶ ನೀಡ್ಬೇಕು ಅಂತ ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ವಿನಂತಿಸಿದ್ರು. ಅಂದಹಾಗೆ ಶಾಹಿ ಈದ್ಗಾ ಮಸೀದಿಯನ್ನ 1669-70ರಲ್ಲಿ ಮೊಘಲ್ ಚಕ್ರವರ್ತಿRead More →

masthmagaa.com: ಉತ್ತರ ಪ್ರದೇಶದ ಬರೇಲಿಯಲ್ಲಿ ಹಿಂದೂ ಯುವಕರನ್ನು ಮದುವೆಯಾಗೋಕೆ ಇರಮ್ ಜೈದಿ ಹಾಗೂ ಶಹನಾಜ್‌ ಅನ್ನೋ ಇಬ್ಬರು ಮುಸ್ಲಿಂ ಯುವತಿಯರು ಹಿಂದೂಧರ್ಮಕ್ಕೆ ಮತಾಂತರ ಆಗಿದ್ದಾರೆ. ಕ್ರಮವಾಗಿ ಸ್ವಾತಿ, ಸುಮನ್ ಅಂತ ಬದಲಾಗಿ ಬಳಿಕ ಮದುವೆಯಾಗಿದ್ದಾರೆ. ಇರಮ್ ಜೈದಿಯನ್ನು ಆದೇಶ ಕುಮಾರ್ ಮದುವೆಯಾದ್ರೆ ಶಹನಾಜ್ ಳನ್ನು ಅಜಯ್ ಮದುವೆಯಾಗಿದ್ದಾನೆ. -masthmagaa.com Share on: WhatsAppContact Us for AdvertisementRead More →